ಜು.29ರಂದು ಪ್ರಧಾನಿ ನಮೋ ಚಿಕ್ಕೋಡಿಗೆ

0
158
loading...


ಕನ್ನಡಮ್ಮ ಸುದ್ದಿ

ಚಿಕ್ಕೋಡಿ 19: ಪ್ರಧಾನಿ ನರೇಂದ್ರ ಮೋದಿ ಅವರು ರೈತರು ಬೆಳೆಯುವ ಬೆಳೆಗಳಿಗೆ “ಬೆಂಬಲ ಬೆಲೆ” ಘೋಷಿಸುವ ಮೂಲಕ ರೈತರಿಗೆ ವಿಶೇಷ ಕೊಡುಗೆ ಕೊಟ್ಟಿರುವ ಹಿನ್ನೆಲೆಯಲ್ಲಿ ರೈತರನ್ನುದ್ದೇಶಿಸಿ “ಬೆಂಬಲ ಬೆಲೆ” ಘೋಷಣೆಯ ಬಗ್ಗೆ ಜು.29ರಂದು ಚಿಕ್ಕೋಡಿಯ ಬೃಹತ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಇದರ ಪೂರ್ವಭಾವಿ ತಯಾರಿಗಾಗಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅಧ್ಯಕ್ಷತೆಯಲ್ಲಿ, ಅರವಿಂದ ಲಿಂಬಾವಳಿ, ಶಾಸಕರು ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಬಿಜೆಪಿ ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಮತ್ತು ಬಿಜೆಪಿ ತಾಲ್ಲೂಕು ಘಟಕ ಚಿಕ್ಕೋಡಿ, ಜಿಲ್ಲಾ ಬಿಜೆಪಿ ಘಟಕ ಚಿಕ್ಕೋಡಿ, ಬೆಳಗಾವಿ ಗ್ರಾಮೀಣಾ ಬಿಜೆಪಿ ಜಿಲ್ಲಾ ಘಟಕ ಮತ್ತು ಬೆಳಗಾವಿ ನಗರ ಬಿ.ಜೆ.ಪಿ ಘಟಕದ ಪದಾಧಿಕಾರಿಗಳು ಚಿಕ್ಕೋಡಿಯ “ಬಸವಪ್ರಭು ಕೋರೆ ಮಹಾವಿದ್ಯಾಲಯ ಸಭಾಂಗಣ”ದಲ್ಲಿ ದಿನಾಂಕ:22-07-2018ರ ಭಾನುವಾರದಂದು ಮಧ್ಯಾಹ್ನ 12.00 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ವಿಧಾನ ಪರಿಷತ್ ವಿರೋಧ ಪಕ್ಷದ ಸಚೇತಕ ಮಹಾಂತೇಶ ಕವಟಗಿಮಠ ತಿಳಿಸಿದ್ದಾರೆ.

..

loading...