ಡಿಕೆಶಿ, ಕೆಬಿಜೆ, ಖರ್ಗೆಗೆ ಎರಡೆರಡು ಜಿಲ್ಲಾ ಉಸ್ತುವಾರಿ ಹೊಣೆ

0
14
loading...

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ಕೊನೆಗೂ ಸಮಯ ಕೂಡಿ ಬಂದಿದ್ದು, ಶೀಘ್ರದಲ್ಲೇ
ಅಧಿಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದು, ಕೆಲವೆಡೆ ಎರಡೂ ಪಕ್ಷದ ಸಚಿವರಿಲ್ಲದ ಕ್ಷೇತ್ರಗಳಿವೆ. ಜತೆಗೆ ಎರಡೂ ಪಕ್ಷದ ಶಾಸಕರು ಕೂಡ ಇಲ್ಲದ ಜಿಲ್ಲೆಗಳಿವೆ. ಇದಕ್ಕೆಲ್ಲಾ ಪ್ರಾತಿನಿಧ್ಯ ಗಮನಿಸಿ ಸಚಿವ ಸ್ಥಾನ ನೀಡಿದ್ದು, ಇದೀಗ ಜಿಲ್ಲಾ ಉಸ್ತುವಾರಿಗಳ ನೇಮಕ ಕೂಡ ಆಗುತ್ತಿದೆ.
ಇದುವರೆಗೂ ಯಾವ ಜಿಲ್ಲೆ ಯಾರಿಗೆ ಎನ್ನುವ ಜಿಜ್ಞಾಸೆ ಇತ್ತು. ಇದಕ್ಕೆ ಕೊನೆ ಹಾಡಲಾಗಿದ್ದು, ಇಂದು ಅಧಿಕೃತ ಆದೇಶ ಹೊರಬೀಳಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕೆಲ ಹಿರಿಯ ಸಚಿವರಿಗೆ ಎರಡು ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಲಾಗಿದೆ ಎಂದು ತಿಳಿದು ಬಂದಿದೆ.
ರಾಮನಗರ ಹಾಗೂ ಬಳ್ಳಾರಿ ಜಿಲ್ಲೆಗೆ ಡಿ.ಕೆ. ಶಿವಕುಮಾರ್, ಕೋಲಾರ, ಗದಗಕ್ಕೆ ಕೃಷ್ಣಬೈರೇಗೌಡ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಿಗೆ ರಮೇಶ್ ಜಾರಕಿಹೊಳಿ, ಕಲಬುರುಗಿ, ಯಾದಗಿರಿಯನ್ನು ಪ್ರಿಯಾಂಕ್ ಖರ್ಗೆ ಅವರಿಗೆ ವಹಿಸಲಾಗಿದೆ. ಈ ನಾಲ್ವರು ಸಚಿವರಿಗೆ ಮಾತ್ರ ತಲಾ ಎರಡು ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ.
ಉಳಿದಂತೆ ಮೈಸೂರಿಗೆ ಜಿ.ಟಿ.ದೇವೇಗೌಡ, ಮಂಡ್ಯಕ್ಕೆ ಸಿ.ಎಸ್.ಪುಟ್ಟರಾಜು, ಹಾಸನಕ್ಕೆ ಹೆಚ್.ಡಿ.ರೇವಣ್ಣ, ತುಮಕೂರಿಗೆ ಶ್ರೀನಿವಾಸ್, ಚಾಮರಾಜನಗರಕ್ಕೆ ಪುಟ್ಟರಂಗಶೆಟ್ಟಿ, ಕೊಡಗು ಕೆ.ಜೆ. ಜಾರ್ಜ್, ದಕ್ಷಿಣ ಕನ್ನಡಕ್ಕೆ ಯು.ಟಿ. ಖಾದರ್, ಉಡುಪಿಗೆ ಡಾ. ಜಯಮಾಲಾ, ಶಿವಮೊಗ್ಗಕ್ಕೆ ಡಿ.ಸಿ.ತಮ್ಮಣ್ಣ, ಚಿಕ್ಕಮಗಳೂರಿಗೆ ಸಾ.ರಾ. ಮಹೇಶ್, ದಾವಣಗೆರೆಗೆ ಎನ್.ಮಹೇಶ್, ಬೆಂಗಳೂರು ಗ್ರಾಮಾಂತರಕ್ಕೆ ಜಮೀರ್ ಅಹಮದ್, ಬೆಂಗಳೂರು ನಗರಕ್ಕೆ ಡಾ. ಜಿ. ಪರಮೇಶ್ವರ್, ಚಿತ್ರದುರ್ಗಕ್ಕೆ ವೆಂಕಟರಮಣಪ್ಪ, ಹಾವೇರಿಗೆ ಆರ್. ಶಂಕರ್, ಉತ್ತರ ಕನ್ನಡಕ್ಕೆ ಆರ್.ವಿ. ದೇಶಪಾಂಡೆ, ಚಿಕ್ಕಬಳ್ಳಪುರಕ್ಕೆ ಎನ್.ಎಚ್. ಶಿವಶಂಕರ ರೆಡ್ಡಿ, ಕೊಪ್ಪಳಕ್ಕೆ ಬಂಡೆಪ್ಪ ಕಾಶೆಂಪೂರ್, ರಾಯಚೂರಿಗೆ ವೆಂಕಟರಾವ್ ನಾಡಗೌಡ, ಬಾಗಲಕೋಟೆಗೆ ಎಂ.ಸಿ. ಮನಗೂಳಿ, ವಿಜಯಪುರಕ್ಕೆ ಶಿವಾನಂದ ಪಾಟೀಲ್, ಬೀದರ್‍ಗೆ ರಾಜಶೇಖರ್ ಪಾಟೀಲ್‍ಗೆ ಉಸ್ತುವಾರಿ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

loading...