ತಗ್ಗಿದ ಮಹಾಮಳೆ ಮೂರು ಸೇತುವೆ ಸಂಚಾರ ಮುಕ್ತ

0
12
DCIM100MEDIADJI_0025.JPG
DCIM100MEDIADJI_0025.JPG
loading...

ಕನ್ನಡಮ್ಮ ಸುದ್ದಿ

ಚಿಕ್ಕೋಡಿ 25: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಮಳೆ ಪ್ರಮಾಣ ತಗ್ಗಿದ್ದು, ಸಿದ್ನಾಳ-ಅಕ್ಕೋಳ, ಜತ್ರಾಟ-ಭಿವಸಿ, ಉಗಾರ ಕುಡಚಿ ಸೇರಿದಂತೆ ಮೂರು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿದ್ದು, ಇನ್ನೂ ನಾಲ್ಕು ಸೇತುವೆ ಜಲಾವೃತವಾಗಿದೆ.

ನದಿ ಜಲಾನಯನ ಪ್ರದೇಶವಾದ ಮಹಾರಾಷ್ಟ್ರದ ಮಹಾಬಳೇಶ್ವರ, ನವಜಾ, ವಾರಣಾ ಮತ್ತು ರಾಧಾನಗರಿ ಭಾಗದಲ್ಲಿ ಸುರಿದ ಧಾರಾಕಾರ ಮಳೆಗೆ ಗಡಿ ಭಾಗದಲ್ಲಿ ಆತಂಕ ಸೃಷ್ಠಿ ಮಾಡಿತ್ತು. ಇದೀಗ ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿದ್ದರಿಂದ ನದಿಗಳ ನೀರಿನ ಮಟ್ಟದಲ್ಲಿ ಇಳಿಕೆ ಕಂಡು ಬರುವುದರಿಂದ ನದಿ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ.

Àಡಿ ಭಾಗದ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟದಲ್ಲಿ ಇಳಿಕೆಯಾಗುತ್ತಿದ್ದು ಸಹ ಕೃಷ್ಣಾ ನದಿಗೆ 1.45 ಲಕ್ಷ ಕ್ಯುಸೆಕ್ ನೀರು ಹರಿದುಬರುತ್ತಿದೆ.

ಕೊಂಕಣ ಪ್ರದೇಶ ಮತ್ತು ಗಡಿ ಭಾಗದಲ್ಲಿ ಸುರಿಯುತ್ತಿರುವ ಮಳೆ ನೀರಿನಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣ ನೀರು ಹರಿದು ಬರುತ್ತಿತ್ತು.

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜದಿಂದ ಕೃಷ್ಣಾ ನದಿಗೆ 100655 ಕ್ಯುಸೆಕ್ ನೀರು ಹರಿದು ಬಂದರೆ ದೂಧಗಂಗಾ ಮತ್ತು ವೇಧಗಂಗಾ ನದಿಗಳ ಮೂಲಕ 22176 ಕ್ಯುಸೆಕ್ ನೀರು ಹರಿದು ಬರುತ್ತದೆ. ಒಟ್ಟಾರೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷೆ ಒಟ್ಟು 122831 ಕ್ಯುಸೆಕ ನೀರು ಹರಿದು ಬರಲಾರಂಭಿಸಿದೆ. ಅದರಂತೆ ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ 1,21.000 ಕ್ಯುಸೆಕ್ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ. ಆಲಮಟ್ಟಿ ಜಲಾಶಯದಿಂದ 1.45 ಲಕ್ಷ ಕ್ಯುಸೆಕ್ ನೀರನ್ನು ನಾರಾಯನಪೂರ ಜಲಾಶಯಕ್ಕೆ ಹರಿ ಬಿಡುತ್ತಿದ್ದಾರೆ.

ಉಪವಿಭಾಗದ ಎಂಟು ಸೇತುವೆಗಳು ಮುಳುಗಡೆ:

ಮಳೆ ಪ್ರಮಾಣ ಕಡಿಮೆಯಾಗಿದ್ದು, ನದಿಗಳ ನೀರಿನ ಹರಿವಿನಲ್ಲಿ ಅಲ್ಪಸ್ವಲ್ಪ ಕಡಿಮೆಯಾಗಿದೆ. ಇದರಿಂದ ಚಿಕ್ಕೋಡಿ ಉಪವಿಭಾಗದಲ್ಲಿ ನಾಲ್ಕು ಸೇತುವೆಗಳ ಮೇಲೆ ಅಪಾರ ಪ್ರಮಾಣದ ನೀರು ಇರುವದರಿಂದ ಸಂಚಾರ ಕಡಿತಗೊಂಡಿವೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ, ದೂಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಮಲಿಕವಾಡ-ದತ್ತವಾಡ, ಕಾರದಗಾ-ಭೋಜ, ವೇಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೋಜವಾಡಿ-ಕುನ್ನೂರ ಸೆತುವೆಗಳು ಮುಳುಗಡೆಗೊಂಡಿವೆ.

ಮಹಾರಾಷ್ಟ್ರದ ಮಳೆ ಪ್ರಮಾಣ:

ಕೋಯ್ನಾ-41ಮಿಮೀ, ವಾರಣಾ-34ಮಿಮೀ, ಕಾಳಮ್ಮವಾಡಿ- 39ಮಿಮೀ, ನವಜಾ-54, ರಾಧಾನಗರಿ-80 ಮಿಮೀ, ಪಾಟಗಾಂವ-35 ಮಿಮೀ, ಮಹಾಬಲೇಶ್ವರ-35ಮಿಮೀ, ಕೊಲ್ಲಾಪೂರ-03 ಮಿಮೀ, ಈ ರೀತಿ ಮಹಾರಾಷ್ಟ್ರದಲ್ಲಿ ಮಳೆ ಆಗಿದೆ.

ಚಿಕ್ಕೋಡಿ ತಾಲೂಕಿನ ಮಳೆ ವಿವರ:

ಚಿಕ್ಕೋಡಿ-5.1ಮಿಮೀ, ಅಂಕಲಿ-7.2 ಮಿಮೀ, ನಾಗರಮುನ್ನೋಳ್ಳಿ-1.2 ಮಿಮೀ, ಸದಲಗಾ-3.0 ಮಿಮೀ, ನಿಪ್ಪಾಣಿ ಪಿಡಬ್ಲುಡಿ-2.6 ಮಿಮೀ, ನಿಪ್ಪಾಣಿ ಎಆರ್‍ಎಸ್-6.0 ಮಿಮೀ, ಸೌಂದಲಗಾ-2.4 ಮಿಮೀ ಈ ರೀತಿಯಾಗಿ ಮಳೆಯಾಗಿದೆ.

.

loading...