ತೆರಿಗೆ ವಂಚಿಸಿದ ಸಿಎಂ ಹೆಚ್‌ಡಿಕೆ, ಮಾಜಿ ಪಿಎಂ ಹೆಚ್‌ಡಿಡಿ ಕುಟುಂಬ

0
13
loading...

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸುಳ್ಳು ಮಾಹಿತಿ ನೀಡಿ ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಕಂಪನಿಗಳು ಕೋಟಿಗಟ್ಟಲೆ ತೆರಿಗೆ ಪಾವತಿಸದೇ ವಂಚಿಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಇನ್ನೊಂದು ಆಘಾತಕಾರಿ ವಿಷಯವೆಂದರೆ ಮಾಜಿ ಪ್ರಧಾನಿ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬ ಕೂಡ ಕೋಟ್ಯಂತರ ರೂ.ತೆರಿಗೆ ಬಾಕಿಯನ್ನು ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಇಂದು ದಾಖಲೆಗಳನ್ನು ಬಿಡುಗಡೆಗೊಳಿಸಿ ಆರೋಪಿಸಿದ್ದಾರೆ.
ಟೋಟಲ್ ಸ್ಟೆÃಶನ್ ಸರ್ವೆಯಲ್ಲಿ ಪ್ರತಿಷ್ಠಿತ ಕಂಪನಿಗಳು ಹಾಗೂ ವ್ಯಕ್ತಿಗಳ ಒಡೆತನದಲ್ಲಿರುವ ೬೩ ಕಟ್ಟಡಗಳಿಂದ ೫೫೯ ಕೋಟಿ ರೂ. ತೆರಿಗೆ ಬಾಕಿ ಉಳಿದಿದೆ ಎಂದು ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ದಾಖಲೆಗಳನ್ನು ಬಹಿರಂಗಪಡಿಸಿದ್ದಾರೆ.
ಪಾಲಿಕೆಗೆಸುಳ್ಳು ಮಾಹಿತಿ ನೀಡಿ ಪಾವತಿಸಿಲ್ಲ ತೆರಿಗೆ ಬಾಕಿ ಉಳಿಸಿಕೊಳ್ಳಲಾಗಿದೆ.ದಾಖಲೆಯಲ್ಲಿರುವ ಆಸ್ತಿಯ ಚದರಡಿಯೇಬೇರೆ, ಪಾಲಿಕೆಗೆ ಮಾಹಿತಿ ನೀಡಿರುವ ಆಸ್ತಿಯೇ ಬೇರೆ ಆಗಿದೆ.ಕಡಿಮೆ ಆಸ್ತಿಗೆ ತೆರಿಗೆ ಪಾವತಿಸಿ ವಂಚಿಸಲಾಗಿದೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕುಟುಂಬವೂ ಸೇರಿದಂತೆ ಹಲವು ಪ್ರತಿಷ್ಠಿತರು ತೆರಿಗೆ ವಂಚನೆ ಮಾಡಿದ್ದು,ಅವರ ವಿವರ ಇಲ್ಲಿದೆ ೨೦೦೮-೦೯ ರಿಂದ ಇಲ್ಲಿಯವರೆಗೆ ತೆರಿಗೆ ವಂಚನೆ ದೇವೇಗೌಡರ ದೊಡ್ಡ ಸೊಸೆ ಹೆಚ್. ಕವಿತಾ ೫೫,೨೧,೪೭೯ ರೂ, ದೇವೇಗೌಡರ ಮಗಳು ಹೆಚ್.ಡಿ ಶೈಲಾ ೫೫,೨೧,೪೭೯ ರೂ, ಭವಾನಿ ರೇವಣ್ಣ ೪೧,೭೯,೪೪೦, ಹೆಚ್.ಡಿ ಅನುಸೂಯ ೫೫,೨೧,೪೭೯, ಅನಿತಾ ಕುಮಾರಸ್ವಾಮಿ ೫೪,೮೫,೫೨೧, ಹೆಚ್.ಡಿ ರಮೇಶ್ ೫೫,೨೧,೩೮೯ ದೇವೇಗೌಡರ ಕುಟುಂಬವೇ ಒಟ್ಟು ೩,೧೭,೫೦,೭೮೭ ರೂ ವಂಚನೆ ಮಾಡಿದ್ದಾರೆ ಎನ್ನುವ ಆರೋಪವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.

loading...