ತೆರೆ ಮೇಲೆ ಒಂದಾಗಲಿದ್ದಾರೆ ಸಲ್ಲು- ಕ್ಯಾಟ್

0
8
loading...

ಭಾರತ್ ಚಿತ್ರದಿಂದ ಹಿಂದೆ ಸರಿದ ಪ್ರಿಯಾಂಕ, ಅವರ ಸ್ಥಾನ ತುಂಬಲು ಸಲ್ಲು ಮಾಜಿ ಪ್ರಿಯಸಿ ಕತ್ರಿÃನಾ ಕೈಪ್ ಸಿದ್ದಳಾಗಿದ್ದಾಳೆ.ಭಾರತ್ ಬಿಡ್ತಿದ್ದಂತೆ ಆ ಜಾಗಕ್ಕೆ ಯಾರು ಎಂಬ ಪ್ರಶ್ನೆ ಮನೆ ಮಾಡಿತ್ತು. ಅನೇಕ ನಟಿಯರ ಹೆಸರುಗಳು ಕೇಳಿ ಬಂದಿದ್ದವು. ಆದ್ರಿÃಗ ಸಲ್ಲು ಜೊತೆ ಭಾರತ್ ಚಿತ್ರದಲ್ಲಿ ನಟಿಸುವ ಕಲಾವಿದೆ ಯಾರು ಎಂಬುದು ಫೈನಲ್ ಆಗಿದೆ. ಬಾಲಿವುಡ್ ಹಿಟ್ ಜೋಡಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದೆ.
ಬಾಲಿವುಡ್‌ನ ಯಶಸ್ವಿ ಜೋಡಿಗಳಲ್ಲಿ ಒಂದಾಗಿರುವ ಸಲ್ಮಾನ್ ಹಾಗೂ ಕತ್ರಿನಾ ಭಾರತ್‌ಗಾಗಿ ಮತ್ತೆ ಒಂದಾಗಲಿದ್ದಾರೆ. ಈ ವಿಚಾರವನ್ನು ಅಲಿ ಅಬ್ಬಾಸ್ ಟ್ವಿÃಟರ್ ಮೂಲಕ ತಿಳಿಸಿದ್ದಾರೆ. ಭಾರತ್ ಚಿತ್ರಕ್ಕೆ ಪ್ರಿಯಾಂಕ ಬದಲು ಕತ್ರಿನಾ ಕೈಫ್ ಫೈನಲ್ ಆಗಿದ್ದಾರೆ. ಕತ್ರಿನಾ ಸಹಿ ಹಾಕಿದ್ದಾರೆಂದು ಅಲಿ ಟ್ವಿಟ್ ಮಾಡಿದ್ದಾರೆ.
ಈ ಹಿಂದೆ ಕೂಡ ಈ ಜೋಡಿ ಜೊತೆ ಕೆಲಸ ಮಾಡಿದ್ದೆÃನೆ. ಈಗ ಮತ್ತೆ ಭಾರತ್ ನಲ್ಲಿ ಒಂದಾಗಿ ಕೆಲಸ ಮಾಡಲಿದ್ದೆÃನೆ. ಸಲ್ಮಾನ್ -ಕತ್ರಿನಾ ಜೊತೆ ಕೆಲಸ ಮಾಡುವುದು ಖುಷಿ ವಿಚಾರವೆಂದು ಅಲಿ ಹೇಳಿಕೊಂಡಿದ್ದಾರೆ. ಅಲ್ಪಾವಧಿಯಲ್ಲಿ ಕತ್ರಿನಾರನ್ನು ಆಯ್ಕೆ ಮಾಡಲಾಗಿದೆ ಎಂದು ಅಲಿ ಹೇಳಿದ್ದಾರೆ.

loading...