ದೇಶ ಅಭಿವೃದ್ಧಿಗೆ ಜನಸಂಖ್ಯೆ ನಿಯಂತ್ರಣ ಅವಶ್ಯ: ಡಾ. ಮೋಹನ್‌

0
12
loading...

ಕನ್ನಡಮ್ಮ ಸುದ್ದಿ-ಬೀಳಗಿ: ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಜನಸಂಖ್ಯೆ ನಿಯಂತ್ರಣ ಮಹತ್ವದ ಪಾತ್ರವಹಿಸುತ್ತದೆ. ಅಷ್ಟೇ ಒಂದು ಕುಟುಂಬ ಕೂಡಾ ಅಭಿವೃದ್ಧಿ ಹೊಂದುತ್ತದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಎಲ್ಲರೂ ಜನಸಂಖ್ಯೆ ನಿಯಂತ್ರಿಸುವ ಜಾಗ್ರತಿಯನ್ನು ಜನತೆಯಲ್ಲಿ ಮೂಡಿಸಬೇಕು ಎಂದು ಜಿಲ್ಲಾ ಆಯುಷ ಫೆಡೆರೇಶನ್‌ ಆಫ್‌ ಇಂಡಿಯಾ ಉಪಾಧ್ಯಕ್ಷ ಡಾ. ಮೋಹನ್‌ ಚಟ್ಟೇರ್‌ ಅಭಿಪ್ರಾಯ ಪಟ್ಟರು.
ಅವರು ಪಟ್ಟಣದ ಜೆಎಲ್ಬಿಸಿ ಆವರಣದಲ್ಲಿ ತಾಲೂಕಾ ಆಯುಷ ಫೆಡೆರೇಶನ್‌ ವತಿಯಿಂದ ವಿಶ್ವ ಜನಸಂಖ್ಯೆ ದಿನಾಚರಣೆಯ ಆಚರಿಸಲಾಯಿತು ಈ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಾನವನ ಒಳತಿಗಾಗಿ ಜನಸಂಖ್ಯಾ ನಿಯಂತ್ರಣ ಅಸ್ತಿತ್ವಕ್ಕೆ ಬಂದಿದೆ. ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣ ಹೀಗೆ ಹೆಚ್ಚುತ್ತಾ ಹೋದರೆ ನೀರು ಮತ್ತು ಆಹಾರದ ಕೊರತೆ ಮತ್ತು ಅನೇಕ ಮೂಲಸೌಕರ್ಯಗಳಲ್ಲಿ ತೊಂದರೆ ಅನಿಭವಿಸಬೇಕಾಗುತ್ತದೆ. ಇಂದು ವಿಶ್ವದಲ್ಲಿ ಗರಿಷ್ಠ ಪ್ರಮಾಣದಲ್ಲಿ ಜನಸಂಖ್ಯಾ ಹೊಂದಿದ ರಾಷ್ಟ್ರಗಳಲ್ಲಿ ಭಾರತ ದೇಶವು ಎರಡನೇ ಸ್ಥಾನದಲ್ಲಿದ್ದು ಗರಿಷ್ಠ ಜನಸಂಖ್ಯಾಯಿಂದ ಮಾನವ ಸಂಪನ್ಮೂಲ, ಶಕ್ತಿ ಸಾಮರ್ಥ್ಯದ ದೃಷ್ಠಿಯಲ್ಲಿ ಅನುಕೂಲಕಾರಿಯಾಗಿದ್ದು ಕಡಿಮೆ ಜನಸಂಖ್ಯೆಯು ಬಡತನ, ನಿರೂದ್ಯೋಗ ಮತ್ತಿತರ ಸಮಸ್ಯಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ತಾಲೂಕಾ ಆಯುಷ ಫೆಡೆರೇಶನ್‌ ಆಫ್‌ ಇಂಡಿಯಾ ಅಧ್ಯಕ್ಷ ಡಾ.ರಮೇಶ್‌ ಅಕ್ಕಿಮರಡಿ ಮಾತನಾಡಿ ತಾಲೂಕಿನ ಎಲ್ಲ ವೈಧ್ಯರು ಆಸ್ಪತ್ರಗಳಿಗೆ ಬರುವ ರೋಗಿಗಳಿಗೆ ಜನಸಂಖ್ಯಾ ನಿಯಂತ್ರಣದ ಬಗ್ಗೆ ಜಾಗೃತ ಮೂಡಿಸಬೇಕು. ಮತ್ತು ಜನಸಂಖ್ಯೆದಿಂದಾಗೂವ ತೊಂದರೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಹೇಳಿದರು.
ಇದಕ್ಕಿಂತ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ರ್ಯಾಲಿ ಮಾಡಲಾಯಿತು. ನೂತನ ತಾಲೂಕಾ ಆಯುಷ ಫೆಡೆರೇಶನ್‌ ಆಫ್‌ ಇಂಡಿಯಾ ಪದಾಧಿಕಾರಿಗಳಾದ ಅಧ್ಯಕ್ಷ ಡಾ. ರಮೇಶ್‌ ಅಕ್ಕಿಮರಡಿ, ಉಪಾಧ್ಯಕ್ಷ ಡಾ.ಜಿ.ಬಿ.ಕುಂಬಾರ. ಕಾರ್ಯದರ್ಶಿ ಡಾ.ರಾಘವೇಂದ್ರ ಮಾಳೋಜಿ, ಖಜಾಂಚಿ ಡಾ.ಸಂತೋಷ್‌ ವೈಧ್ಯ ಸೇರಿದಂತೆ ಎಲ್ಲ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.
ನೂತನ ಜಿಲ್ಲಾ ಆಯುಷ ಫೆಡೆರೇಶನ್‌ ಆಫ್‌ ಇಂಡಿಯಾ ಉಪಾಧ್ಯಕ್ಷರಾಗಿ ಡಾ.ಮೋಹನ್‌ ಚಟ್ಟೇರ್‌, ಕಾರ್ಯಂಗ್‌ ನಿರ್ದೇಶಕರಾಗಿ ಡಾ.ಬಿ.ವ್ಹಿ.ತಳೇವಾಡ ಆಯ್ಕೆಯಾಗಿದ್ದು ಇವರನ್ನೂ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಡಾ.ವಿಶ್ವನಾಥ ಕೋಕರೆ, ಡಾ.ಪ್ರಶಾಂತ ಬನ್ನಟ್ಟಿ, ಡಾ. ಸಿದ್ದರಾಮ ಹೊನ್ನೂಂಗುರ, ಡಾ.ವ್ಹಿ.ಪಿ.ನಾಗನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...