ದೈಹಿಕ ಶಿಕ್ಷಣ ಪಠ್ಯಗಳ ಒಂದು ಭಾಗವಾಗಿದೆ: ಗಿರಿಶ್‌

0
19
loading...

ಕನ್ನಡಮ್ಮ ಸುದ್ದಿ-ಹೊನ್ನಾವರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಪ್ರಾರ್ಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ವತಿಯಿಂದ ದೈಹಿಕ ಶಿಕ್ಷಣ ಕಾರ್ಯಾಗಾರ ಮತ್ತು ದೈಹಿಕ ಶಿಕ್ಷಕರಾಗಿ ನಿವೃತ್ತಿ ಹೊಂದಿರುವ ಆನಂದ ಮಾಸ್ತಿಕಟ್ಟೆರವರಿಗೆ ಬಿಳ್ಕೊಡುಗೆ ಸಮಾರಂಭ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆಸಲಾಯಿತು.
ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಶ್‌ ಪದಕಿ ಮಾತನಾಡಿ ಪಠ್ಯ ಪುಸ್ತಕಗಳ ಸದ್ಭಳಕೆ ಆಗಬೇಕಿದೆ, ದೈಹಿಕ ಶಿಕ್ಷಣ ಪಠ್ಯಗಳ ಒಂದು ಭಾಗವಾಗಿದೆ. ಇಂದು ಮಕ್ಕಳು ಮೊಬೈಲ್‌ ಬಳಕೆಯಿಂದ ಕ್ರೀಡೆಗಳಲ್ಲಿ ಆಸ್ಕಿ÷್ತಕಡಿಮೆಯಾಗುತ್ತಿದೆ ಎಮದು ಕಳವಳ ವ್ಯಕ್ತಪಡಿಸಿದರು.ನಿವ್ರತ್ತಿ ಜೀವನಕ್ಕೆ ಕಾಲಿಟ್ಟ ಆನಂದ ಮಾಸ್ತಿಕಟ್ಟೆಯವರಿಗೆ ಶುಭ ಹಾರೈಸಿದರು. ದೈಹಿಕ ಶಿಕ್ಷಕರಾಗಿ ನಿವೃತ್ತಿ ಹೊಂದಿದ ಆನಂದ ಮಾಸ್ತಿಕಟ್ಟೆಯವರಿಗೆ À ದೈಹಿಕ ಶಿಕ್ಷಕರ ಸಂಘ ಹಾಗೂ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಆನಂದ ಮಾಸ್ತಿಕಟ್ಟೆ ಮಾತನಾಡಿ, ನನ್ನ ವೃತ್ತಿ ಜೀವನದಲ್ಲಿ ಹಲವಾರು ಅಧಿಕಾರಿಗಳು ಮಾರ್ಗದರ್ಶನ ಮಾಡಿದ್ದಾರೆ. ವೃತ್ತಿ ಸಮಯದಲ್ಲಿ ಇಷ್ಟಪಟ್ಟು ಕೆಲಸ ಮಾಡಿದ್ದೇನೆ.ಆದ್ದರಿಂದ ನನ್ನ ವೃತ್ತಿಯಲ್ಲಿ ಉತ್ತಮ ಶಿಕ್ಷಕನಾಗಿರಲು ಸಾಧ್ಯವಾಯಿತು ಎಂದು ಎಲ್ಲರಿಗು ಕೃತಜ್ಞತೆ ಅರ್ಪಿಸಿದರು. ಇಲಾಖಾ ಅಧಿಕಾರಿ ಜಿ.ಎಸ್‌ ನಾಯ್ಕ ಮಾತನಾಡಿ, ನಮ್ಮ ಇಲಾಖೆಯ ಯಾವುದೇ ಕಾರ್ಯಕ್ರಮದಲ್ಲು ಆರ್ಥಿಕ ವೆಚ್ಚ ಎದುರಾದಂತಹ ಸಂದರ್ಭಗಳಲ್ಲಿ ತಮ್ಮ ಸಹಾಯ ಹಸ್ತ ನೀಡುತ್ತಿದ್ದರು. ಅಲ್ಲದೇ ರಾಷ್ಟ್ರೀಯ ಹಬ್ಬದ ಸಂಧರ್ಬಗಳಲ್ಲಿ ಧ್ವಜ ಕಟ್ಟುವಂತಹ ಅತ್ಯಂತ ಜವಾಬ್ದಾರಿಯುತ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು ಎನ್ನುತ್ತಾ ನಿಮ್ಮ ಮಾರ್ಗದರ್ಶನ ಸದಾ ಇರಬೇಕೆಂದು ವಿನಂತಿಸಿ ಆನಂದರವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ತಾಲೂಕಾ ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಎನ್‌.ಎಸ್‌ ನಾಯ್ಕ ಮಾತನಾಡಿ ಆನಂದ ಮಾಸ್ತಕಟ್ಟೆಯವರಿಗೆ ಇಂದು ಸನ್ಮಾನವಾಗಿರುವುದು ಹೆಮ್ಮೆಯ ಸಂಗತಿ. ಕ್ರೀಡಾ ಸ್ಪರ್ಧೆಗಳು ಆನಂದರ ನೆತ್ರತ್ವದಲ್ಲಿ ಉತ್ತಮವಾಗಿ ಅಚ್ಚುಕಟ್ಟಾಗಿ ನಡೆಯುತ್ತಿತ್ತು. ನಮ್ಮ ತಾಲೂಕಿಗೆ ಏಕಕಾಲದಲ್ಲಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಪ್ರಶಸ್ತಿಗೆ ಭಾಜನರಾದವರಲ್ಲಿ ಆನಂದರು ಒರ್ವರು ಎಂದು ಅವರೊಂದಿಗೆ ಸೇವೆಯಲ್ಲಿ ಕಾರ್ಯನಿರ್ವಹಿಸಿದ ಒಡನಾಟ ಹಂಚಿಕೊಂಡರು. ಪ್ರಾರ್ಥಮಿಕ ಶಾಲಾ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಸಾಧನಾ ಬರ್ಗಿ ಮಾತನಾಡಿ ಆನಂದರವರು ತುಂಬು ಹ್ರದಯದ ವ್ಯಕ್ತಿತ್ವದವರು ಅವರ ಸೇವೆಯಲ್ಲಿದ್ದಾಗ ಎಲ್ಲರ ಮೆಚ್ಚುಗಗೆ ಪಾತ್ರರಾಗಿದ್ದವರು ಎಂದು ಭಾವುಕರಾದರು. ವೇದಿಕೆಯಲ್ಲಿ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಸಂಘದ ಅಧ್ಯಕ್ಷ ಎಸ್‌.ಎನ್‌ ಗೌಡ, ಜಿಲ್ಲಾ ಪ್ರಾರ್ಥಮಿಕ ಸಂಘದ ಕಾರ್ಯದರ್ಶಿ ಎಮ್‌.ಜಿ ನಾಯ್ಕ, ಯುವ ಜನ ಕ್ರೀಡಾಧಿಕಾರಿ ಸುದೀಶ್‌ ನಾಯ್ಕsÀ, ಆಯ್‌ ಆರ್‌ ಭಟ್‌, ಮಹೇಶ್‌ ಶೆಟ್‌ ಮತ್ತಿತರರು ಉಪಸ್ಥಿತರಿದ್ದರು.

loading...