ದೊರೆಯದ ಉತಾರ: ರೈತರ ಆಕ್ರೋಶ

0
13
loading...

ಕನ್ನಡಮ್ಮ ಸುದ್ದಿ-ರೋಣ: ಉತಾರದ ಗದ್ದಲ ಜಗಳಕ್ಕೆ ಆಹ್ವಾನ ನೀಡುತ್ತಲಿದ್ದು, ಈ ಕಾರ್ಯದ ಕುರಿತು ದಂಡಾಧಿಕಾರಿಗಳು ಮೌನವರ್ತನೆಯಲ್ಲಿ ತೊಡಗಿಕೊಂಡಿರುವುದು ರೈತ ಸಮೂಹಕ್ಕೆ ಆತಂಕದ ವಾತಾವರಣವನ್ನು ಸೃಷ್ಠಿಸಿದಂತೆ ಕಾಣುತ್ತಿದ್ದು, ನಿತ್ಯವೂ ರೈತರು ಉತಾರಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ಗ್ರಾಪಂ ವ್ಯಾಪ್ತಿಯೊಳಗಿನ ಗ್ರಾಮಗಳಿಗೆ ಉತಾರ, ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತದೆ ಎಂಬ ಸರ್ಕಾರದ ಆದೇಶದ ಅನುಸಾರ ಬಿತ್ತರಗೊಂಡಿದ್ದರೂ ಕೂಡಾ ದೊರೆಯದ ರೀತಿಯಲ್ಲಿ ಕಂಡುಬರುತ್ತದೆ.
ಜನಸ್ನೇಹಿ ಕಾರ್ಯಕ್ರಮ: ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಜನಸ್ನೇಹಿ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವು ಜಾರಿಗೆ ತಂದು ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ತಮ್ಮ ಯಾವುದೇ ಉತಾರ, ಜಾತಿ ಆದಾಯ ಪ್ರಮಾಣ ಪತ್ರಗಳನ್ನು ಸಂಬಂಧಿಸಿದ ಗ್ರಾಪಂಗಳಲ್ಲಿ ಪಡೆಯುವಂತೆ ಆದೇಶ ನೀಡಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಉತಾರಕ್ಕಾಗಿ ಪಟ್ಟಣಕ್ಕೆ ಆಗಮಿಸಿದ ರೈತರ ಅಭಿಪ್ರಾಯವಾಗಿದೆ.
ರೋಣ ಪಟ್ಟಣಕ್ಕೆ ಬೆಳಗಿನ ಜಾವ 4ಘಂಟೆಗೆ ಇಲ್ಲಿ ಪಾಳಯದಲ್ಲಿ ನಿಂತರೂ ಕೂಡಾ ಯಾವದೇ ಪ್ರಯೋಜವಾಗಿಲ್ಲಾ.ನಿನ್ನೇ ಕೂಡಾ ಪಾಳೆಯದಲ್ಲಿ ನಿಂತರು ಸರ್ವರ್‌ ಸಮಸ್ಯೆಯಿಂದ ಸುಮ್ಮನೇ ಹಿಂದಿರುಗುವಂತೆ ಆಗಿದೆ.ಇಂದು ಕೂಡಾ ಅದೇ ಸಮಸ್ಯೆಯಾಗಿದೆ.ಉತಾರಕ್ಕಾಗಿ ಸೂಕ್ತ ಕ್ರಮವನ್ನು ದಂಡಾಧಿಕಾರಿಗಳು ಜರುಗಿಸಬೇಕು.ಇಲ್ಲಿನ ಸಿಬ್ಬಂಧಿಯು ರೈತರಲ್ಲಿ ಯಾವದೇ ಕಾಳಜಿಯನ್ನು ಹೊಂದಿರದೇ ತಮಗೆ ತಿಳಿದ ರೀತಿಯಲ್ಲಿ ವತಿಸುತ್ತಲಿರುವದು ಖಂಡನಾರ್ಹವಾಗಿರುವುದು.ಕೂಡಲೇ ಗಮನಹರಿಸಬೇಕು ಎಂದು ತಾಲೂಕಿನ ಗ್ರಾಮದ ರೈತ ಸಮೂಹಗಳ ಒತ್ತಾಯವಾಗಿದೆ ಎನ್ನುತ್ತಾರೆ ರೈತರು.
ಬೆಳಗಿನಿಂದ ಪಾಳಯದಲ್ಲಿ ನಿಂತು ಇನ್ನೆನು ನನ್ನ ಸರದಿ ಎಂದು ಮುನ್ನಡೆದಾಗ ಸರ್ವರ್‌ ಫೇಲ್‌ ಎಂಬ ಉತ್ತರದಿಂದ ಬಹಳ ಹತಾಸೆಗೊಂಡು,ನಮ್ಮ ಪಟ್ಟಣದಲ್ಲಿ ಉತಾರದ ಸಮಸ್ಯೆಯು ಎಂದು ಸರಿಯಾಗುವುದು ಎನ್ನುತ್ತಾರೆ.
ಗುಳಗುಳಿ, ಕೊತಬಾಳ, ಮುಶಿಗೇರಿ ರೈತರು.

loading...