ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಾರಿಸೇನ ಮುನಿ ಅಂತ್ಯಕ್ರಿಯೆ

0
29
loading...

ಶೇಡಬಾಳ 05: ಆಚಾರ್ಯ ಶ್ರೀ 108 ಸುಬಲಸಾಗರ ಮುನಿಮಹಾರಾಜರ ಪರಮಶಿಷ್ಯರಾದ ಪರಮ ಪೂಜ್ಯ ಶ್ರೀ ವಾರಿಸೇನ ಮುನಿಮಹಾರಾಜರು ಶೇಡಬಾಳ ಗ್ರಾಮದ ಶ್ರೀ ಶಾಂತಿಸಾಗರ ಆಶ್ರಮದಲ್ಲಿ ಗುರುವಾರ ದಿ. 5 ರಂದು ಮುಂಜಾನೆ 7 ಗಂಟೆಗೆ ಯಮಸಲ್ಲೇಖನ ವೃತ ಪೂರ್ವಕವಾಗಿ ಸಮಾಧಿ ಮರಣ ಸಾಧಿಸಿದರು. ಅವರ ಅಂತ್ಯಕ್ರಿಯೆಯು ಆಚಾರ್ಯ ಶ್ರೀ ದೇವಸೇನ ಮುನಿಮಹಾರಾಜರು, ಸಂಘದ ಮುನಿಗಳು, ಮಾತಾಜಿಯವರು ಹಾಗೂ ನೂರಾರು ಶ್ರಾವಕ ಶ್ರಾವಕಿಯರ ಉಪಸ್ಥಿತಿಯಲ್ಲಿ ಜರುಗಿತು.ಇಲ್ಲಿನ ಶ್ರೀ ಶಾಂತಿಸಾಗರ ಆಶ್ರಮದಲ್ಲಿ ಗುರುವಾರದಂದು ಮುಂಜಾನೆ ಶ್ರೀ ವಾರಿಸೇನ ಮುನಿ ಮಹಾರಾಜರು ಸಮಾಧಿಮರಣ ಹೊಂದಿದರು. ಕಳೆದ 11 ದಿನಗಳ ಹಿಂದೆ ವಾರಿಸೇನ ಮುನಿಗಳು ಯಮಸಲ್ಲೇಖನ ವೃತ ಸ್ವೀಕರಿಸಿದ್ದರು. ಅಂದಿನಿಂದ ಅವರು ಅನ್ನ ನೀರು ಆಹಾರ ಎಲ್ಲ ವನ್ನು ತ್ಯಾಗಮಾಡಿ ಯಮಸಲ್ಲೇಖನ ವೃತ ಕೈಗೊಂಡಿದ್ದರು.ಆಚಾರ್ಯ ಶ್ರೀ ದೇವಸೇನ ಮುನಿಮಹಾರಾಜರು ಹಾಗೂ ಮಾತಾಜಿಯವರ ನೇತೃತ್ವದಲ್ಲಿ ಪ್ರತಿಷ್ಠಾಚಾರ್ಯ ಶಾಂತಿನಾಥ ಉಪಾಧ್ಯೆ, ಬಾಹುಬಲಿ ಉಪಾಧ್ಯೆ ಅಂತ್ಯಕ್ರಿಯೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಶ್ರೀಗಂಧ ಕಟ್ಟಿಗೆ, ಕೊಬ್ಬರಿ, ಹಾಲು, ತುಪ್ಪ, ಕರ್ಪೂರ, ಚಂದನ ಮೊದಲಾದ ಪದಾರ್ಥಗಳಿಂದ ಸ್ವಾಮಿಜೀಯವರ ಅಂತ್ಯಕ್ರಿಯೆ ಮಾಡಲಾಯಿತು. ತೇರದಾಳದ ಭೂಪಾಲ ಕಾಗೆ ಚಂದನಾಭೀಷೇಕ ಮಾಡಿದರು. ಬೀಬಾತಾಯಿ ಹನುಮನ್ನವರ ತುಪ್ಪದ ಅಭಿಷೇಕ ಮಾಡಿದರು. ಅಮೋಲ ಖಟಾವಣೆ ಕಬ್ಬಿನ ಹಾಲು, ಸಿದ್ದಪ್ಪ ಕೋರೆಗೇರಿ ಕಡಲೆಬೆಳೆ ಅಭಿಷೇಕ, ರಾವಸಾಬ ಉಗಾರೆ, ಧರಪ್ಪ ಕಾಗೆ ಮೊದಲಾದವರು ಅಂತ್ಯಕ್ರಿಯೆ ಪೂರ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಚಡಚಣದ ಅಜೀತ ಮುತ್ತಿನ್‌ರವರು ಅಗ್ನಿ ಸ್ಪರ್ಶ ಮಾಡಿದರು.ಈ ಸಮಯದಲ್ಲಿ ಶಾಂತಿಸಾಗರ ಆಶ್ರಮದ ಸಂಚಾಲಕರಾದ ರಾಜು ನಾಂದ್ರೆ, ಬೆಳಗಾವಿಯ ರಾಜು ಜಕ್ಕನ್ನವರ, ಜಿನ್ನಪ್ಪ ಚಿಮ್ಮನ್ನವರ, ಅರಿಹಂತ ಕಣಬರಗಿ, ಶ್ರೀಪಾಲ ಕಣಬರಗಿ, ರಾಜು ಹಜಾರೆ, ಸುಭಾಷ ಶೆಟೆ, ಪದ್ಮಿನಿ ಲೋಕಾಪೂರೆ, ನೇಮಣ್ಣ ಜಮಖಂಡಿ, ಪರಪ್ಪ ಅಕಿವಾಟ, ಚಂದ್ರಣ್ಣ ನಂದಿಕರ, ಪ್ರಕಾಶ ಯಂದಗೌಡರ, ನೇಮಿನಾಥ ನರಸಗೌಡರ, ಕುಮಾರ ಮಿರ್ಜಿ, ಸುದರ್ಶನ ನರಸಗೌಡರ, ಮಹಾವೀರ ನಾಂದ್ರೆ, ಕುಮಾರ ಅಲಗೌಡರ, ಭೂಪಾಲ ಗುರೂಜಿ ಸೇರಿದಂತೆ ಅನೇಕರು ಇದ್ದರು…

loading...