ನಕ್ಸಲರ ಅಟ್ಟಹಾಸ: ಇಬ್ಬರು ಯೋಧರು ಹುತಾತ್ಮ

0
6
loading...

ರಾಯ್‍ಪುರ: ಛತ್ತೀಸ್ ಘಡದಲ್ಲಿ ನಕ್ಸಲರು ಮತ್ತೇ ಅಟ್ಟಹಾಸ ಮೆರೆದಿದ್ದು, ಎನ್‍ಕೌಂಟರ್ ನಲ್ಲಿ ಇಬ್ಬರು ಬಿಎಸ್‍ಎಫ್ ಯೋಧರು ಹುತಾತ್ಮರಾಗಿದ್ದಾರೆ.
ಛತ್ತೀಸ್ ಘಡದ ಕಂಕರ್ ಜಿಲ್ಲೆಯಲ್ಲಿ ನಕ್ಸಲರ ವಿರುದ್ಧ ಬಿಎಸ್‍ಎಫ್ ಸಿಬ್ಬಂದಿ ಎನ್ ಕೌಂಟರ್ ನಡೆಸುತ್ತಿದ್ದು, ಬಿಎಸ್‍ಎಫ್‍ನ ಮಹ್ಲಾ ಕ್ಯಾಂಪ್ ಇರುವ ಅರಣ್ಯ ಪ್ರದೇಶದಲ್ಲಿ ಈ ಎನ್‍ಕೌಂಟರ್ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಎನ್‍ಕೌಂಟರ್ ನಲ್ಲಿ ಇಬ್ಬುರ ಸೇನಾ ಸಿಬ್ಬಂದಿಗಳು ಹತರಾಗಿದ್ದು, ಮತ್ತೋರ್ವ ಸಿಬ್ಬಂದಿ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಘಟನಾ ಪ್ರದೇಶಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

loading...