ನನ್ನ ಗೆಲವಿಗೆ ಕಾರಣೀಕರ್ತರಾದ ಮತದಾರರನ್ನು ನಾನು ಸನ್ಮಾನಿಸಬೇಕು: ಬೊಮ್ಮಾಯಿ

0
12
loading...

ಕನ್ನಡಮ್ಮ ಸುದ್ದಿ- ಬಂಕಾಪುರ : ನಾನು ವಿಧಾನಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲವು ಸಾಧಿಸಲು ಕಾರಣಿಕರ್ತರಾದ ಈ ಕ್ಷೆÃತ್ರದ ಜನತೆಗೆ ನಾನು ಸನ್ಮಾನಿಸಬೇಕೆ ಹೊರತು ನಿಮ್ಮಿಂದ ನಾನು ಸನ್ಮಾನಿತನಾಗುವದಲ್ಲ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಪಟ್ಟಣದ ಶ್ರಿÃ ಫಕ್ಕಿÃರೇಶ್ವರ ಮಠದ ಸಭಾ ಭವನದಲ್ಲಿ ಪಟ್ಟಣದ ಬೊಮ್ಮಾಯಿ ಅಭಿಮಾನಿ ಬಳಗದವರಿಂದ ಸನ್ಮಾನ ಸ್ವಿÃಕರಿಸಿ ಮಾತನಾಡಿದ ಅವರು ನೀವು ನನ್ನಮೇಲಿರಿಸಿದ ಅಭಿಮಾನ ಪ್ರಿÃತಿ ವಿಶ್ವಾಸಕ್ಕೆ ಚಿರ ಋಣಿಯಾಗಿರುವೆ. ಈ ನಿಮ್ಮ ಋಣವನ್ನು ಹಗಲಿರುಳು ಶ್ರಮಿಸಿ ಅಭಿವೃದ್ದಿ ಕೇಲಸಗಳನ್ನು ಮಾಡಿ ತೋರಿಸುವಮೂಲಕ ತಿರಿಸಲು ಪ್ರಯತ್ನಿಸುವದಾಗಿ ಹೇಳಿದರು.
ಈ ಕ್ಷೆÃತ್ರದ ಜನತೆ ನಾನು ಮಾಡುವ ಅಭಿವೃದ್ದಿ ಕೆಲಸಗಳಲ್ಲಿ, ಕೈಗಾರೋದ್ಯಮಗಳಲ್ಲಿ ಬರಿ ಫಲಾನುಭವಿಗಳಾಗದೇ ಅವರು ಕೂಡಾ ಪಾಲುದಾರರಾಗಬೇಕು. ಆ ನಿಟ್ಟಿನಲ್ಲಿ ರೂಪ ರೇಷೆಗಳನ್ನು ಹಾಕಿ ಕೊಂಡಿರುವದಾಗಿ ಹೇಳಿದರು.

ಈ ಕ್ಷೆÃತ್ರದ ಜನ ಸ್ವಾವಲಂಬಿ ಬದುಕು ಸಾಗಿಸುವಮೂಲಕ ಆರ್ಥಿಕವಾಗಿ ಅಭಿವೃದ್ದಿಹೊಂದಿ ಸುಖಮಯ ಜೀವನ ನಡೆಸಬೇಕೇಂಬುದೇ ನನ್ನ ಮುಖ್ಯ ಉದ್ದೆÃಶವಾಗಿದೆ. ಅಧಿಕಾರ ಯಾವತ್ತು ಶಾಸ್ವತವಲ್ಲ. ನಮ್ಮ ಅಧಿಕಾರದವದಿಯಲ್ಲಿ ನಾವು ಮಾಡಿರುವ ಜನಪರ ಕಾರ್ಯಕ್ರಮಗಳು ಶಾಸ್ವತವಾಗಿರುತ್ತವೆ. ಆ ನಿಟ್ಟಿನಲ್ಲಿ ನಾನು ಹತ್ತುವರ್ಷದವದಿಯಲ್ಲಿ ಮಾಡಿರುವ ಅಭಿವೃದ್ದಿ ಕೇಲಸಗಳೇ ನಿಮ್ಮ ಕಣ್ಣೆದುರಿಗಿವೆ. ಮೂರನೇ ಬಾರಿಯೂ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿಕೊಳ್ಳುವಮೂಲಕ ಈ ಕ್ಷೆÃತ್ರದಲ್ಲಿಯೇ ನನ್ನನ್ನು ಉಳಿಸಿಕೊಂಡಿದ್ದಕ್ಕಾಗಿ ಈ ಅಭಿವೃದ್ದಿಯ ವೇಗ ಇನ್ನು ಹೆಚ್ಚಾಗಿ ಹತ್ತು ವರ್ಷಗಳಲ್ಲಿ ಮಾಡಿದ ಅಭಿವೃದ್ದಿ ಕೇಲಸಗಳನ್ನು ಬರುವ ಐದು ವರ್ಷಗಳಲ್ಲಿ ಮಾಡಿ ತೊರಿಸುವದಾಗಿ ಹೇಳಿದರು.
ಬಿಜೆಪಿ ತಾಲೂಕಾ ಅದ್ಯಕ್ಷ ದೇವಣ್ಣ ಚಾಕಲಬ್ಬಿ, ಪ್ರದಾನಕಾರ್ಯದರ್ಶಿ ಬಸವರಾಜ ನಾರಾಯಣಪುರ, ಶಿವಾನಂದ ಮ್ಯಾಗೇರಿ, ಭರತ್ ಸೇವಾ ಸಂಸ್ಥೆಯ ಅದ್ಯಕ್ಷ ಶ್ರಿÃಕಾಂತ ದುಂಡಿಗೌಡ್ರ, ಅಶೋಕ ಶೇಟ್ಟರ, ವಿರೇಶ ರುದ್ರಾಕ್ಷಿÃ, ರುದ್ರಪ್ಪ ಪವಾಡಿ, ರವಿ ನರೇಗಲ್, ವಿನಾಯಕ ಕೂಲಿ, ಮಂಜುನಾಥ ಈರಪ್ಪನವರ, ಶಂಬು ಕುರಗೋಡಿ, ಭರತ್‌ಸಿಂಗ್ ಛವ್ಹಿ, ಮಂಜುನಾಥ ಕೂಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

loading...