ನರಗುಂದ: ಸೌಕರ್ಯವಂಚಿತ ಮೌಲಾನಾ ಆಜಾದ್ ಮಾದರಿ ಶಾಲೆ

0
12
loading...

ಕನ್ನಡಮ್ಮ ಸುದ್ದಿ-ನರಗುಂದ: ಉರ್ದು ಶಾಲೆಗೆ ಹೆಚ್ಚಿನ ಮಕ್ಕಳು ಶಿಕ್ಷಣ ಪಡೆಯಲು ಸೇರ್ಪಡೆಗೊಳ್ಳದ ಪರಿಣಾಮ ತಾಲೂಕಿಗೊಂದು ಕಡ್ಡಾಯವಾಗಿ ಮೌಲಾನಾ ಆಜಾದ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಗೊಳಿಸಲು ಸರ್ಕಾರ ನೀಡಿದ ಆದೇಶದಂತೆ ನರಗುಂದ ಪಟ್ಟಣದಲ್ಲಿ ಪ್ರಸಕ್ತ ವರ್ಷದಲ್ಲಿ ಈ ಶಾಲೆ ಆರಂಭಿಸಲಾಗಿದೆ. ಹಿಂದುಳಿದ ವರ್ಗ ಅಲ್ಪಸಂಖ್ಯಾತರ ಇಲಾಖೆ ಸುಪರ್ಧಿಯಲ್ಲಿ ಶಾಲೆ ಆರಂಭಿಸಲಾಗಿದೆ. 6 ರಿಂದ 10 ನೇ ವರ್ಗದವರೆಗೆ ಈ ಶಾಲೆಯಲ್ಲಿ ಮಕ್ಕಳು ಶಿಕ್ಷಣ ಪಡೆಯಬಹುದು. ಪ್ರಸಕ್ತ ವರ್ಷದಲ್ಲಿ 6 ನೇ ವರ್ಗ ಮಾತ್ರ ಈ ಶಾಲೆಯಲ್ಲಿ ತೆರೆಯಲಾಗಿದೆ. ಆದರೆ ಮೂಲಭೂತ ಸೌಕರ್ಯಗಳು ಇಲ್ಲಿಲ್ಲ. ಹೀಗಾಗಿ ಮಕ್ಕಳು ನಿತ್ಯ ತೊಂದರೆ ಅನುಭವಿಸುವುದು ಮುಂದುವರೆದಿದೆ.

ಪ್ರಸಕ್ತ ವರ್ಷ ಜೂನ್ ಮೊದಲ ವಾರದಿಂದ ಈ ಶಾಲೆ ಆರಂಭಗೊಂಡಿದೆ. ಪ್ರಾಥಮಿಕ ಬಾಲಕಿಯರ ಸರ್ಕಾರಿ ಶಾಲೆಯ ಒಂದು ಮೇಲ್ಬಾಗದ ಕೊಠಡಿಯನ್ನು ನೀಡಲಾಗಿದೆ. ಚಿಕ್ಕ ಕೊಠಡಿಯಾಗಿದ್ದು ಸುಮಾರು 45 ಮಕ್ಕಳು 6 ನೇ ವರ್ಗದಲ್ಲಿ ಅಭ್ಯಸಿಸುತಿದ್ದಾರೆ. ಅವರಿಗೆ ಕುಡಿಯಲು ಯೋಗ್ಯವಾದ ನೀರು ಇಲ್ಲವೇ ಇಲ್ಲ. ಪಕ್ಕದ ಹೆಣ್ಣು ಮಕ್ಕಳ ಶಾಲೆಯಿಂದ ನೀರು ತಂದು ಮಕ್ಕಳು ಕುಡಿಯಬೇಕು. ಸೌಚಾಲಯಗಳಿಲ್ಲ. 6 ನೇ ವರ್ಗ ಆರಂಭಗೊಂಡಿದ್ದರೂ ಕೇವಲ ನಾಲ್ಕು ಶಿಕ್ಷಕರು ಮಾತ್ರ ಇಲ್ಲಿ ಎರಡೆರಡು ವಿಷಯಗಳ ಮೇಲೆ ಶಿಕ್ಷಣ ನೀಡುತಿದ್ದಾರೆ. ಹೆಣ್ಣು ಮಕ್ಕಳಿಗಾಗಿ ಮಾತ್ರ ಸೌಚಾಲಯಗಳಿದ್ದು ಅವು ಸಮರ್ಪಕವಾಗಿಲ್ಲ. ವಿದ್ಯಾರ್ಥಿಗಳು ಸೌಚ್ಚಕ್ಖಾಗಿ ಬೇರೆ ಜಾಗೆ ಬಳಸಿಕೊಳ್ಳುವುದು ಇಲ್ಲಿ ಅನಿವಾರ್ಯತೆ ಕಂಡು ಬಂದಿದೆ. ಶಾಲಾ ಆವರಣವಂತೂ ದುರ್ನಾತ ಬೀರುತ್ತಿದೆ. ಶಾಲಾ ಕೊಠಡಿ ಅಂತಸ್ತಿನ ಮೇಲ್ಬಾಗದಲ್ಲಿರುವುದರಿಂದ ವಿದ್ಯುತ್ ತಂತಿಗಳು ಮಕ್ಕಳ ಕೈಗೆ ತಾಗುವಷ್ಟು ಸಮೀದಲ್ಲಿವೆ. ಇವುಗಳನ್ನು ಸರಿಪಡಿಸಿ ಮತ್ತು ಅದಕ್ಕೆ ಬೇಕಾದ ಪೈಪುಗಳನ್ನು ಶಾಲಾ ಅನುದಾನದಲ್ಲಿ ಖರ್ಚುಹಾಕಿ ತಂದು ಇಡಲಾಗಿದೆ. ಆದರೆ ಹೆಸ್ಕಾಂ ಸಿಬ್ಬಂಧಿ ಮೇಲ್ಬಾಗದ ತಂತಿಗಳ ದುರಸ್ತಿಮಾಡುವುದಕ್ಕಾಗಿ ಪ್ರತ್ಯೇಕ ಹಣ ನೀಡಿ ಎಂದು ಕೇಳುತ್ತಿದ್ದಾರೆಂದು ಅಲ್ಲಿರುವ ಶಾಲಾ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯ ಜೊತೆಗೆ ಸರ್ಕಾರದಿಂದ ಒದಗುವ ಶಾಲಾ ಪಠ್ಯಪುಸ್ತಕಗಳಲ್ಲಿ ಕೆಲವನ್ನು ಮಾತ್ರ ವಿತರಿಸಲಾಗಿದೆ. ಹೀಗಾಗಿ ಈ ಶಾಲೆಯಲ್ಲಿ ಕಲಿಯುವ ಮಕ್ಕಳ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ.
ಬಿಇಒ ಅವರು ಈ ಕುರಿತು ವಿವರಿಸಿ, ಮೌಲಾನಾ ಆಜಾದ ಮಾದರಿ ಶಾಲೆ ನಮ್ಮ ವ್ಯಾಪ್ತಿಗೊಳಪಡುವುದಿಲ್ಲ. ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸುಪರ್ಧಿಗೆ ಅದು ಒಳಪಡಲಿದೆ. ಮೌಲಾನಾ ಶಾಲೆ ಆರಂಭಕ್ಖಾಗಿ ಅಲ್ಪಸಂಖ್ಯಾತರ ಇಲಾಖೆ ಮಾಹಿತಿ ತಿಳಿಸಿದ್ದರಿಂದ ಸಧ್ಯದಲ್ಲಿ ಜಾಗೆಯ ಕೊರತೆ ಇದ್ದ ಪರಿಣಾಮ ಪಟ್ಟಣದ ಪ್ರಾಥಮಿಕ ಬಾಲಕಿಯರ ಶಾಲೆಯ ಮೇಲ್ಬಾಗದ ಒಂದು ಕೊಠಡಿಯಲ್ಲಿ 6 ನೇ ತರಗತಿ ಆರಂಭಿಸಲು ಅನುಮತಿ ನೀಡಲಾಗಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಹಿಂದುಳಿದ ವರ್ಗಗಳ ಸಲ್ಪಸಂಖ್ಯಾಂತರ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾರೆ.

ಪಟ್ಟಣದಲ್ಲಿ ಅಲ್ಪಸಂಖ್ಯಾಂತರ ಇಲಾಖೆ ವಿಸ್ತ್ರೀರ್ಣಾಧಿಕಾರಿಗಳ ಕಾರ್ಯಾಲಯವನ್ನು ಮಾರುಕಟ್ಟೆ ಪ್ರದೇಶದಲ್ಲಿ ತೆರೆಯಲಾಗಿದ್ದು ಅಲ್ಲಿಯ ಅಧಿಕಾರಿಗಳನ್ನು ಬೇಟಿಯಾಗಲು ತೆರಳಿದರೆ ಅವರು ಕೆಲಸದ ಅವಧಿಯಲ್ಲಯೂ ಕಚೇರಿಗೆ ಬೀಗ ಹಾಕಿ ತೆರಳಿರುತ್ತಾರೆಂದು ಮಕ್ಕಳ ಪಾಲಕರ ದೂರು ಕೇಳಿ ಬಂದಿವೆ. ಈ ಶಾಲೆಗೆ ಸಂಬಂಧಿಸಿದ ಎಫ್‍ಡಿಸಿ ಸಿಬ್ಬಂಧಿಯ ಪ್ರಮೋದ ಪಾಟೀಲ ಸಹ ಶಾಲೆಯಲ್ಲಿ ಖಾಯಂ ಇರುವುದಿಲ್ಲ. ಅವರನ್ನು ದೂರವಾಣಿಯಲ್ಲಿ ಮಾತನಾಡಿಸಿದಾಗ ಅವರು ಹೇಳಿದ್ದಿಷ್ಟು, ಇದೇ ವರ್ಷ ಮೌಲಾನಾ ಆಜಾದ ಮಾದರಿಯ ಪ್ರೌಢ ಶಾಲೆಗಳನ್ನು ರಾಜ್ಯದಲ್ಲಿ ಆರಂಭಿಸಲಾಗಿದೆ. ರಾಜ್ಯದಲ್ಲಿ ಒಟ್ಟು 100 ಶಾಲೆಗಳು ಪ್ರಸಕ್ತವರ್ಷದಿಂದ ಆರಂಭಗೊಂಡಿವೆ. ತಕ್ಷಣ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಲು ಸರ್ಕಾರ ವಿಳಂಬಗೊಳಿಸಿದೆ. ಹೀಗಾಗಿ ಹೆಚ್ಚಿಚರಿ ಕೆಲಸವನ್ನು ಇದ್ದ ಕಲವೇ ಸಿಬ್ಬಂಧಿ ಮಾಡಬೇಕಾಗಿದೆ. ಗದಗ ತಾಲೂಕಿನ ನರಗುಂದ ಸೇರಿದಂತೆ ರೋಣ, ಗಜೇಂದ್ರಗಡ, ಶಿರಹಟ್ಟಿಗಳಲ್ಲಿ ಈ ಶಾಲೆಗಳು ಆರಂಭಗೊಂಡಿವೆ. ಈ ಶಾಲೆಗಳಿಗೆ ಎಸ್‍ಡಿಎಂಸಿ ರಚನೆಮಾಡುವ ಯಾವುದೇ ಆವಕಾಶವಿಲ್ಲ. ಮೌಲಾನಾ ಆಜಾದ ಮಾದರಿ ಶಾಲೆಗಳು ಉರ್ದುಶಾಲೆ ಪಕ್ಕದಲ್ಲಿಯೇ ಇರಬೇಕು ಎಂದು ಸರ್ಕಾರದ ಸುತ್ತೋಲೆ ಇರುವುದರಿಂದ ಇಲ್ಲಿಯ ಉರ್ದು ಶಾಲೆ ಪಕ್ಕದಲ್ಲಿಯೇ ಈ ಶಾಲೆ ಆರಂಭಿಸಲಾಗಿದೆ. ಒಂದೆರಡು ತಿಂಗಳ ಕಳಿಯಲಿ ಸಮಸ್ಯೆ ಸರಿಪಡಿಸಲಾಗುವುದು ಎಂದು ಅಲ್ಪಸಂಖ್ಯಾಂತರ ಹಿಂದುಳಿದ ವರ್ಗದ ಮೇಲಾಧಿಕಾರಿಗಳ ಕಚೇರಿಯಿಂದ ಮಾಹಿತಿ ಇದ್ದ ಪರಿಣಾಮ ಈ ಸ್ಥಳದಲ್ಲಿ ಶಾಲೆ ಆರಂಭಿಸಲಾಗಿದೆ. ಮೂಲಭೂತ ಸೌಕರ್ಯಗಳಿಲ್ಲವೆನ್ನುವುದನ್ನು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ. ಸರಿಪಡಿಸುವುದಾಗಿ ಮೇಲಾಧಿಕಾರಿಗಳು ತಿಳಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿಯೇ ಮೌಲಾನಾ ಅಜಾದ ಮಾದರಿ ವಸತಿ ಶಾಲೆಯನ್ನು ಆರಂಭಿಸಲು ಸರ್ಕಾರ ಯೋಜನೆ ರೂಪಿಸಿದೆ. ಆದರೆ ಜಾಗೆ ಇಲ್ಲ. ಜಾಗೆ ನೀಡಿ ಎಂದು ಮೇಲಾಧಿಕಾರಿಗಳಿಗೆ ಪತ್ರ ಬರೆದು ತಿಳಿಸಲಾಗಿದೆ. ಪುರಸಭೆ ಬದಿಯಲ್ಲಿ ಗಂಡು ಮಕ್ಕಳ ಪ್ರೌಢ ಶಾಲೆಯಿದ್ದು ಬೇರೆಡೆ ದುರಸ್ತಿಗೊಂಡಿರುವ ಆ ಶಾಲೆಗೆ ಗಂಡು ಮಕ್ಕಳ ಪ್ರೌಢ ಶಾಲೆ ಇನ್ನೆರಡು ತಿಂಗಳಿನಲ್ಲಿ ಸ್ಥಳಾಂತರಗೊಳ್ಳಲಿದೆ. ನಂತರ ಮೌಲಾನಾ ಅಜಾದ ಶಾಲೆಯನ್ನು ಪುರಸಭೆ ಬದಿಯಲ್ಲಿಯ ಕಟ್ಡಡಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.

loading...