ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಮೂವರ ಸಾವು

0
13
loading...

ನವದೆಹಲಿ:ಗ್ರೇಟರ್ ನೋಯ್ಡಾದಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಮೂವರು ಮೃತಪಟ್ಟಿದ್ದಾರೆ. ಸುಮಾರು 12 ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾರೆ.
ಕಳೆದ ರಾತ್ರಿ ಈ ದುರ್ಘಟನೆ ನಡೆದಿದ್ದು,ಇದರಲ್ಲಿ ವರ್ಷದ ಮಗುವೊಂದು ಸಿಲುಕಿದೆ.ಅಷ್ಟೇ ಅಲ್ಲ ಮಗುವಿನ ಪಾಲಕರು ಹಾಗೂ ಅವರ ಅಜ್ಜಿ ಕಟ್ಟಡದ ಅವಶೇಷದಡಿ ಸಿಲುಕಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಹಾಗೂ ಎನ್‍ಎಡಿಆರ್‍ಎಫ್ ಟೀಂ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ. 400 ಎನ್‍ಡಿಆರ್‍ಎಫ್ ಸಿಬ್ಬಂದಿ ಬದುಕುಳಿದವರಿಗಾಗಿ ಹುಡುಕಾಡುತ್ತಿದ್ದಾರೆ.
ಇನ್ನು 400 ಪೆÇಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕುಸಿದ ಬಿಲ್ಡಿಂಗ್ ನೋಡಲು ಜನಸಾಗರವೇ ಸೇರಿದ್ದು, ಅದನ್ನು ನಿಯಂತ್ರಿಸಲು ಪೆÇಲೀಸರು ಹರಸಾಹಸ ಪಡುತ್ತಿದ್ದಾರೆ. ತಡರಾತ್ರಿ 1:15ರ ವೇಳೆಗೆ 2ಮೃತದೇಹಗಳನ್ನ ರಕ್ಷಣಾ ಸಿಬ್ಬಂದಿ ವಶಪಡಿ ಸಿಕೊಂಡಿದೆ.
ಇನ್ನು,ಅವಶೇಷದಡಿ ಸಿಲುಕಿದವರಿಗಾಗಿ ಸ್ನಾಪ್ ಡಾಗ್, ಸೆನ್ಸಾರ್‍ಗಳಿಂದ ಹುಡುಕಾಟ ನಡೆಸಲಾಗಿದೆ ಎಂದು ಪೆÇಲೀಸರು ತಿಳಿಸಿ ದ್ದಾರೆ.ಬದುಕುಳಿದವರ ರಕ್ಷಣೆ ಹಿನ್ನೆಲೆಯಲ್ಲಿ ಪೆÇಲೀಸರು ಅತ್ಯಂತ ನಾಜೂಕಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ನಡುವೆ ಸುದ್ದಿ ತಿಳಿಯುತ್ತಿದ್ದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜಿಲ್ಲಾಡಳಿತಕ್ಕೆ ಅಗತ್ಯ ನೆರವು ನೀಡುವಂತೆ ಸೂಚನೆ ನೀಡಿದ್ದಾರೆ.ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಬಿಲ್ಡಿಂಗ್ ಓನರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

loading...