ನಾಳೆ ಬಿಎಸ್ ವೈ ಬೆಳಗಾವಿಗೆ : ಕೂತುಹಲ ಮೂಡಿಸಿದ ಉ.ಕ.ವಿ ವೇದಿಕೆ ಪ್ರತಿಭಟನೆ

0
21
loading...

ನಾಳೆ ಬಿಎಸ್ ವೈ ಬೆಳಗಾವಿಗೆ : ಕೂತುಹಲ ಮೂಡಿಸಿದ ಉ.ಕ.ವಿ ವೇದಿಕೆ ಪ್ರತಿಭಟನೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ನಾಳೆ ಬೆಳಗಾವಿ ಸುವರ್ಣ ವಿಧಾನ ಸೌಧ ಮುಂದೆ ನಡೆಯಲಿರುವ ಉತ್ತರ ಕರ್ನಾಟಕ ವಿಕಾಸ ವೇದಿಕೆ ಧರಣಿ ಪ್ರತಿಭಟನೆಗೆ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಆಗಮಿಸುತ್ತಿದ್ದಾರೆ .ಈ ಮೂಲಕ ಉ.ಕ.ವಿ.ವೇದಿಕೆ ಧರಣಿ ಪ್ರತಿಭಟನೆ ಕಾವು ಹೆಚ್ಚಿದೆ .

ಮಂಗಳವಾರ ಜಿಲ್ಲೆಯ ಪ್ರಮುಖ ಮಠಾಧೀಶರ ನೇತೃತ್ವದಲ್ಲಿ ನಡೆಯಲಿರುವ ಸಾಂಕೇತಿಕ ಧರಣಿ ಪ್ರತಿಭಟನೆ ಮೂಲಕ ಸುವರ್ಣ ಸೌಧಕ್ಕೆ ಶಕ್ತಿ ತುಂಬಲು ಪ್ರಮುಖ ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರ ಮಾಡಬೇಕೆಂದು ಧರಣಿ ನಡೆಯಲಿದ್ದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಮುಂದಾಳತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ.ಈ ಧರಣಿಗೆ ಸ್ವಾಮಿಜಿಗಳಿಗೆ ಬೆಂಬಲ ನೀಡಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸುತ್ತಿರುವುದು ಪ್ರತಿಭಟನೆ ಕಾವು ಹೆಚ್ಚಿದೆ.ಮಂಗಳವಾರ ಮುಂಜಾನೆ ಯಡಿಯೂರಪ್ಪ ಬೆಳಗಾವಿಗೆ ಆಗಮಿಸಿ ಪತ್ರಿಕಾಗೋಷ್ಠಿಯು ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

loading...