ನಿಪ್ಪಾಣಿ ನಗರಸಭೆಯಲ್ಲಿ ಭ್ರಷ್ಟಾಚಾರ ಮಾಜಿ ನಗರ ಸೇವಕರಿಂದ ಗಂಭೀರ ಆರೋಪ

0
13
loading...

ನಿಪ್ಪಾಣಿ ನಗರಸಭೆಯಲ್ಲಿ ಭ್ರಷ್ಟಾಚಾರ
ಮಾಜಿ ನಗರ ಸೇವಕರಿಂದ ಗಂಭೀರ ಆರೋಪ

ಕನ್ನಡಮ್ಮ ಸುದ್ದಿ-ಬೆಳಗಾವಿ:ಚಿಕ್ಕೊಡಿ ತಾಲೂಕಿನ ನಿಪ್ಪಾಣಿ ನಗರದ ಸಭೆಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರದ ಭ್ರಷ್ಟಾಚಾರವನ್ನು ಹಾಲಿ ನಗರ ಸಭೆಯ ನಗರಧ್ಯಾಕ್ಷ,ನಗರದ ಸೇವಕರು ಹಾಗೂ ಅಧಿಕಾರಿಗಳು ಮಾಡಿದ್ದಾರೆ ಎಂದು ನಗರ ಸಭೆಯ ಮಾಜಿ ನಗರ ಸೇವಕರು ಆರೋಪಿಸಿದ್ದಾರೆ.
ಸೋಮವಾರ ನಗರದ ಖಾಸಗಿ ಹೋಟೆಲದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅನಿಲ ನೇಷ್ಟಿ ಮತ್ತು ಸುಭಾಷ ಕದಂ,ಹಾಲಿ ನಗರಾಧ್ಯಕ್ಷರು ನಗರ ಸಭೆಯು ತಮ್ಮ ಮಾಲ್ಕಿ ಆಸ್ತಿ ಇದ್ದಂತೆ ವರ್ತಿಸುತ್ತಿದ್ದಾರೆ.ನಗರದಲ್ಲಿ ನಿರ್ಮಿಸಿರು ಕುಸ್ತಿ ಮೈದಾನ ಮತ್ತು ಒಳ ಚರಂಡಿ ನಿರ್ಮಾಣಕ್ಕೆ ಹಳೆಯ ಕಲ್ಲುಗಳನ್ನು ಬಳಸಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದ್ದಾರೆ,ಮತ್ತು ಈ ಕುಸ್ತಿ ಮೈದಾನದಲ್ಲಿ ವರ್ಷದಲ್ಲಿ ಒಂದು ಬಾರಿ ಮಾತ್ರ ಕುಸ್ತಿ ನಡೆಯುತ್ತದೆ.ಆದರೆ ಈ ಮೈದಾನಕ್ಕೆ ನಗರ ಸಭೆ ಅವರು ಲಕ್ಷಾಂತರ ರೂ ವೆಚ್ಚ ಮಾಡಿ ಇಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಜಿ ನಗರ ಸೇವಕರಾದ ಭರತ ಕುರಬೇಟ,ಗಜೇಂದ್ರ ಗೋಡ,ಜಯರಾಂ ಮಿರಜಕರ ಸೇರಿದಂತೆ ಇತರರು ಇದ್ದರು.

loading...