ನಿಸ್ವಾರ್ಥ ಸೇವೆಯಿಂದ ಬದುಕು ಸಾರ್ಥಕತೆ: ನಂಜಯ್ಯನಮಠ

0
17
loading...

ಕನ್ನಡಮ್ಮ ಸುದ್ದಿ-ಗುಳೇದಗುಡ್ಡ: ಸಾರ್ಥಕ ಬದುಕಿಗೆ ನಿಜವಾದ ಅಡಿಗಲ್ಲ ನಿಸ್ವಾರ್ಥ. ನಿಸ್ವಾರ್ಥ ಸೇವೆಯಿಂದಲೇ ನಮ್ಮ ಬದುಕು ಸಾರ್ಥಕತೆ ಪಡೆಯಲು ಸಾಧ್ಯವಾಗುತ್ತದೆ. ನಮ್ಮ ಬಗ್ಗೆ ನಮ್ಮನ್ನು ಪರೀಕ್ಷಿಸಿದವರು, ನಮ್ಮನ್ನು ಪರಾಮರ್ಶಿಸಿದವರು ನಮ್ಮ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಮಾಜಿ ಶಾಸಕ ಎಸ್‌.ಜಿ. ನಂಜಯ್ಯನಮಠ ಹೇಳಿದರು.
ಅವರು ಸ್ಥಳೀಯ ಶ್ರೀ ಬನಶಂಕರಿ ಸಮುದಾಯ ಭವನದಲ್ಲಿ ರವಿವಾರ ಡಾ. ಶಾಂತಾ ಕರಡಿಗುಡ್ಡ ರವರ ಶಿಷ್ಯಬಳಗ, ಅಭಿಮಾನಿಗಳು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಡಾ. ಪ್ರಕಾಶ ನರಗುಂದ, ಸುರೇಶ ವಗ್ಗಾ ರವರು ಸಂಪಾದನೆಯ ಸಾರ್ಥಕ ಬದುಕು ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿ, ಮನುಷ್ಯ ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತರಾಗಬಾರದು, ನಾವು ಸಂಪೂರ್ಣ ಅಸಮರ್ಥತೆ, ಅಶಕ್ತತೆಯಾದಾಗ ಮಾತ್ರ ನಾವು ನಿವೃತ್ತಿಯಾಗಬೇಕು. ಡಾ. ಶಾಂತಾ ಕರಡಿಗುಡ್ಡ ಅವರ ಆದರ್ಶ ಬದುಕು ಇಂದಿನ ಶಿಕ್ಷಕ ಸಮುದಾಯದವರಿಗೆ ಮಾದರಿಯಾಗಬೇಕು ಎಂದರು.
ಖ್ಯಾತ ಕಥೆಗಾರ ಅಬ್ಬಾಸ ಮೇಲಿನಮನಿ ಅವರು ವಸಂತ ಕರಡಿಗುಡ್ಡ ಅವರ ಕಂದನ ಕರೆಯೋಲೆ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ. ನಲವತ್ತು ವರ್ಷಗಳವರೆಗೆ ಶಿಕ್ಷಕಿಯಾಗಿ ಸೇವೆಸಲ್ಲಿಸಿದ ಡಾ. ಶಾಂತಾ ಕರಡಿಗುಡ್ಡ ಅವರು ಶಿಕ್ಷಕಿಯಾಗಿ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿ, ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ತಮ್ಮ ವಯಕ್ತಿಕ ಬದುಕನ್ನು ತ್ಯಾಗಮಾಡಿ ಒಂದ ಶಾಲೆಯನ್ನು ಕಟ್ಟಿ ಬೆಳೆಸುವಲ್ಲಿ ಅವರ ಶ್ರಮ ಸಾರ್ಥಕವಾಗಿತ್ತು ಎಂದರು.
ನಿವೃತ್ತಿ ಬದುಕನ್ನು ನಾವು ನಮ್ಮ ಜೀವನದ ಹೊಸ ಆರಂಭ ಎಂದು ತಿಳಿದುಕೊಂಡರೆ ನಮ್ಮ ಬದುಕು ಸಾರ್ಥಕವಾಗುತ್ತದೆ. ಯಾರು ಮನುಷ್ಯರನ್ನು ರೂಪಿಸುತ್ತಾರೋ ಅವರೇ ನಿಜವಾದ ಶಿಕ್ಷಕರಾಗುತ್ತಾರೆ. ಡಾ. ಶಾಂತಾ ಅವರು ಅಂತಹ ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯನ್ನು ರೂಪಸಿಸ ಸಮರ್ಥ ಶಿಕ್ಷಕಿ ಎನಿಸಿಕೊಂಡಿದ್ದಾರೆ.
ಗುರುಸಿದ್ದೇಶ್ವರ ಬ್ರಹನ್ಮಠದ ಜ.ಶ್ರೀ.ಗುರುಸಿದ್ದೇಶ್ವರ ಸ್ವಾಮಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ಸಮಾಜ ಸೇವೆಯಲ್ಲಿ ತೊಡಗಿ ಜಾತಿ, ಮತ, ಪಂಥಗಳನ್ನು ನೋಡದೇ ಭಾವೈಕ್ಯತೆಯಿಂದ ಕಾರ್ಯನಿರ್ವಹಿಸಿ, ಸಮರ್ಥ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಡಾ. ಶಾಂತ ಕರಡಿಗುಡ್ಡ ಮುಂಬರುವ ದಿನಗಳಲ್ಲಿ ಇನ್ನಷ್ಟು ಸಮಾಜಕ್ಕೆ ಸೇವೆ ಸಲ್ಲಿಸಲಿ ಎಂದರು.
ಮರಡಿಮಠದ ಶ್ರೀ ಕಾಶೀನಾಥ ಸ್ವಾಮಿಗಳು, ಸುಮಡ್ಡಿ ಸಿ.ಎಸ್‌.ಐ. ಚರ್ಚನ ರೇ. ವೈ.ಜೆ. ಹದ್ದನ್ನವರ, ಹುಸೇನಪೇಟೆ ಮಸ್ಜೀದ್‌ನ ಬಸೀರ್‌ ಅಹಮದ್‌ ಮುಪ್ತಿ, ರೇ ಜಯವಂತ ಹಿರೇಕೋಡಿ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಮಾಜಿ ಶಾಸಕ ರಾಜಶೇಖರ ಶೀಲವಂತ, ಮಹೇಶ ಹೊಸಗೌಡರ, ಮಹಾಂತೇಶ ಮಮದಾಪೂರ, ವೈ.ಜಿ. ಬ್ಯಾಡಗಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಶಿವಕುಮಾರ ಹಾದಿಮನಿ, ಗುರುಮಾತೆ ಡಾ. ಶಾಂತಾ ಕರಡಿಗುಡ್ಡ, ಹೊಳಬಸು ಶೆಟ್ಟರ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಪಿ.ಮಾಗಿ, ಅಂಖಡೇಶ್ವರ ಪತ್ತಾರ, ರವಿ ಅಂಗಡಿ, ಪುರಸಭೆ ಸದಸ್ಯೆ ಅಮೀನಾಬಿ ಮುಜಾಹಿದ್‌, ಎಂ.ಎಂ.ಜಮಖಾನಿ, ವಸಂತ ಕರಡಿಗುಡ್ಡ, ಶಾಂತವೀರ ಕರಡಿಗುಡ್ಡ, ಬಸವರಾಜ ಗವಿಮಠ, ಶಿವಾನಂದ ಹಾದಿಮನಿ, ಈಶ್ವರ ಕಂಠಿ, ಸಂತೋಷ ಕೆಲೂಡಿ, ಬಸಪ್ಪ ಕಬಾಡಿ, ಅಮೀನಸಾಬ ಮುದಗಲ್ಲ, ಎನ್‌.ಎಚ್‌. ಹೊಸಮನಿ, ಅನ್ನದಾನಿ ಹಿರೇಮಠ, ಚಂದ್ರಕಾಂತ ತಾಳಿಕೋಟಿ, ಮಹಾದೇವ ಜಗತಾಪ, ಗುರುಪ್ಪ ಹುಣಶ್ಯಾಳ, ಶಂಕರ ಬಂಡಿವಡ್ಡರ, ಎನ್‌.ಬಿ.ಪೂಜಾರ, ಗೀತಾ ಕರಡಿಗುಡ್ಡ, ಈರಣ್ಣ ತಾವರಗೇರಿ, ಸಂಗಯ್ಯ ಗಣಾಚಾರಿ, ಸಂಗಯ್ಯ ಸಿಂದಗಿಮಠ, ರಂಗನಾಥ ಹೊಸಮನಿ, ನಾಗೇಶ ಮಾದರ, ಹನಮಂತ ವಾಲೀಕಾರ, ನಾಗೇಶ ಮಾದರ, ಯಮನಪ್ಪ ಕೊಟ್ನಳ್ಳಿ, ಡ್ಯಾನಿಯಲ್‌ ಕರಡಿಗುಡ್ಡ, ಅಶೋಕ ಕರಡಿಗುಡ್ಡ ಸೇರಿದಂತೆ ಶಿಷ್ಯರು, ಅಭಿಮಾನಿಗಳು ಭಾಗವಹಿಸಿದ್ದರು.

loading...