ನ್ಯಾಯವಾದಿ ಹತ್ಯೆಗ ಖಂಡನೆ

0
18
loading...

ಕನ್ನಡಮ್ಮ ಸುದ್ದಿ-ಧಾರವಾಡ: ದಾಂಡೇಲಿಯ ವಕೀಲರ ಸಂಘದ ಮಾಜಿ ಅಧ್ಯಕ್ಷ ಹಿರಿಯ ನ್ಯಾಯವಾದಿ ಅಜಿತ ನಾಯಕರ ಮೇಲೆ ಹಲ್ಲೆ ಮಾಡಿ ಕೊಲೆಗೈದಿರುವುದನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ವ್ಹಿ.ಡಿ.ಕಾಮರಡ್ಡಿ ಖಂಡಿಸಿದ್ದಾರೆ.
ತಮ್ಮ ಕಚೇರಿಯಿಂದ ಕೆಲಸ ಮುಗಿಸಿ ಮನೆಗೆ ತೆರೆಳಲು ಕಾರು ಹತ್ತುವ ಸಮಯದಲ್ಲಿ ಮುಸುಕಿದಾರಿ ದುಷ್ಕರ್ಮಿಯೊಬ್ಬ ತಲವಾರಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮರಣ ಹೊಂದಿರುವ ನ್ಯಾಯವಾದಿ ಅಜೀತ ಅತ್ಯುತ್ತಮ ಹೋರಾಟಗಾರರಾಗಿದ್ದರು. ವೃತ್ತಿ ನಿರತ ವಕೀಲರ ಮೇಲೆ ಹಲ್ಲೆ, ಜೀವ ಬೆದರಿಕೆ ಹಾಗೂ ಬ್ಲಾಕ್‍ಮೇಲ್ ಮತ್ತು ವಕೀಲರ ಕಚೇರಿಗಳಿಗೆ ಮತ್ತು ಮನೆಗಳಿಗೆ ನುಗ್ಗಿ ದಾಂಧಲೇ ಮಾಡುವ ಮತ್ತು ಕೊಲೆ ಮಾಡುವಂತಹ ಹೀನಕೃತ್ಯಗಳು ನಡೆಯುತ್ತಿರುವುದು ಖಂಡನೀಯ. ವಿಶೇಷ ತನಿಖಾದಳ ರಚನೆ ಮಾಡಿ ಕೊಲೆಯ ಬಗ್ಗೆ ತನಿಖೆ ಮಾಡಬೇಕು ಮತ್ತು ದುಷ್ಕರ್ಮಿಯನ್ನು ಮತ್ತು ಕೊಲೆಗೆ ಸಂಚು ರೂಪಿಸಿದವರನ್ನು ಶೀಘ್ರವಾಗಿ ಬಂಧಿಸಬೇಕು ಮತ್ತು ತಪ್ಪಿತಸ್ಥರಿಗೆ ಸೂಕ್ತವಾದ ಶಿಕ್ಷೆ ವಿಧಿಸಬೇಕು. ವೃತ್ತಿನಿರತ ವಕೀಲರಿಗೆ ರಕ್ಷಣೆ ಇಲ್ಲವಾಗಿದ್ದು ಈ ದಿಸೆಯಲ್ಲಿ ವಕೀಲರ ಮೇಲೆ ಹಲ್ಲೆ ಮತ್ತು ಜೀವ ಬೆದರಿಕೆ ಮತ್ತು ಕೊಲೆಯಂತಹ ಹೀನ ಕೃತ್ಯಗಳನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿ ಮಾಡಬೇಕೆಂದು ಆಗ್ರಹಿಸಿದ್ದಾರೆ.

loading...