ಪತ್ರಕರ್ತರು ವೃತ್ತಿ ಪಾವಿತ್ರ್ಯತೆ ಕಡೆ ಗಮನಹರಿಸಲು ಪ್ರಯತ್ನಿಸಿ : ಹಾಲಪ್ಪ ಆಚಾರ್

0
34
loading...

ಕನ್ನಡಮ್ಮ ಸುದ್ದಿ- ಕುಕನೂರ : ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಪತ್ರಿಕೆಗಳು ಸಹಕಾರಿಯಾಗಿದ್ದು, ಪತ್ರಕರ್ತರು ವೃತ್ತಿ ಪಾವಿತ್ರ್ಯ ಕಡೆಗೆ ಗಮನ ಹರಿಸುವ ಮೂಲಕ ಆದರ್ಶ ಸಮಾಜ ನಿರ್ಮಾಣಕ್ಕೆ ಪಣತೊಡಬೇಕೆಂದು ಶಾಸಕ ಹಾಲಪ್ಪ ಆಚಾರ್ ಸಲಹೆ ನೀಡಿದರು.

ಅವರು ಭಾನುವಾರ ಇಲ್ಲಿಯ ಬಾಲಕರ ವಸತಿ ನಿಲಯದ ಸಭಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಕುಕನೂರು ಘಟಕ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆಗಳು ಸಾಮಾಜಿಕ ಕಳಕಳಿಯ ಭಾವನೆಯ ಪ್ರತೀಕ. ಹೊಸತನದ ಹುಡುಕಾಟ, ಸಮಾಜದ ಒಳ್ಳೆತನದ ತುಡಿತ ಪತ್ರಿಕೆಗಳ ಅವಿಭಾಜ್ಯ ಅಂಗ. ಪತ್ರಕರ್ತರು ಸಾರ್ಥಕ ಮನೋಭಾವನೆಯಿಂದ ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂದರು. ಪತ್ರಕರ್ತರ ಅಗತ್ಯ ಸೌಕರ್ಯಗಳನ್ನು ತಮ್ಮ ವ್ಯಾಪ್ತಿಯೊಳಗಿನ ಅನುದಾನದಲ್ಲಿ ಸ್ಪಂದಿಸಲಾಗುವುದೆಂದು ಭರವಸೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಕೆ.ಬಿ ಬ್ಯಾಳಿ ಮಾತನಾಡಿ, .ಒಂದು ಲೇಖನ ಒಳ್ಳೆಯ ಸಮಾಜ ನಿರ್ಮಾಣ ಮಾಡುತ್ತದೆ ಸೇವಾ ಮನೋಭಾವನೆಯಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಿಕೆಗಳ ಪಾತ್ರ ಹಿರಿದಾಗಿದೆ, ಸಮಾಜದ ಜವಾಬ್ದಾರಿ ಪತ್ರಿಕೆಗಳು ಮತ್ತು ಪತ್ರಕರ್ತರ ಮೇಲಿದೆ, ಆದ್ದರಿಂದ ಪತ್ರಕರ್ತರು ಸತತ ಅಧ್ಯಯನಶೀಲರಾಗಿ ವೃತ್ತಿ ಧರ್ಮ ಕಾಪಾಡಲು ಪ್ರಯತ್ನಿಸಬೇಕೆಂದರು.
ಅನ್ನದಾನೀಶ್ವರ ಮಠದ ಪೂಜ್ಯ ಮಹದೇವ ದೇವರು ಸಾನ್ನಿಧ್ಯ ವಹಿಸಿದ್ದರು. ಕುಕನೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರುದ್ರಪ್ಪ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಜಿ ಎಸ್ ಗೋನಾಳ, ಹಿರಿಯ ಪತ್ರಕರ್ತ ಕೊಟ್ರಪ್ಪ ತೋಟದ, ನಿಲಯಪಾಲಕ ಬಿ.ವಿ ಸಂಗನಾಳ, ಮುಖಂಡರಾದ ಡಾ.ಬಸವರಾಜ ಬಣ್ಣದಬಾವಿ, ಹನಮಂತಪ್ಪ ಜಳಕಿ, ಉಮಾ ಮಹೇಶ್ವರಿ ಲಕ್ಕುಂಡಿಮಠ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಬನ್ನೆಪ್ಪ ಗೌಡರ್, ಡಾ.ಬಸವರಾಜ ಬಣ್ಣದಬಾವಿ, ವೀರಯ್ಯ ದೇವಗಣಮಠ, ಕಳಕಪ್ಪ ಚಿಕ್ಕಗಡ, ರಮೇಶ ರಾಜೂರ, ಬಸವರಾಜ ಕೊನಾರಿ, ನಾಗರಾಜ ಬೆಣಕಲ್, ಚನ್ನಯ್ಯ ಹಿರೇಮಠ, ಕನಕರಾಯ ಭಜೇಂತ್ರಿ, ಸುನೀಲ್ ಮಠದ, ಅಲ್ಲಾವುದ್ದೀನ ಯಮ್ಮಿ, ಮುರಾರಿ ಭಜಂತ್ರಿ, ಮಂಜುನಾಥ ಪ್ರಸಾದ, ರಮೇಶ ಗಜಕೋಶ, ವೀರೇಶ ಆಡೂರ ಇನ್ನಿತರರಿದ್ದರು.
ಅಕ್ಷತಾ ಬಣ್ಣದಬಾವಿ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಹಾಲಪ್ಪ ಆಚಾರ್ ಅವರನ್ನು ಸಂಘದ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

loading...