ಪತ್ರಿಕಾ ಭವನ ನಿರ್ಮಾಣಕ್ಕಾಗಿ ಮನವಿ

0
7
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ನಗರದ ದಾಂಡೇಲಿ ಪ್ರೆಸ್‌ ಕ್ಲಬಿಗೆ ಪತ್ರಿಕಾ ಭವನ ನಿರ್ಮಿಸಲು ಜಾಗವನ್ನು ಒದಗಿಸಿ ಸಹಕರಿಸಬೇಕೆಂದು ವಿನಂತಿಸಿ, ಸ್ಥಳೀಯ ಆದಿ ಜಾಂಬವಂತ ಸಂಘ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ಧ್ವನಿ (ಚಂದ್ರಕಾಂತ ಕಾದ್ರೋಳ್ಳಿ ಬಣ) ಮಂಗಳವಾರ ನಗರ ಸಬೆಯ ಅಧ್ಯಕ್ಷ ಎನ್‌.ಜಿ.ಸಾಳುಂಕೆಯವರಿಗೆ ಮನವಿ ನೀಡಿ ಒತ್ತಾಯಿಸಿತು.
ಆದಿ ಜಾಂಬವಂತ ಸಂಘದ ಅಧ್ಯಕ್ಷ ಚಂದ್ರಕಾಂತ ನಡಿಗೇರ ಅವರು ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಪತ್ರಕರ್ತರಿಗೆ ಪತ್ರಿಕಾ ಭವನದ ಅಗತ್ಯತೆ ಇದೆ. ಆ ಕಾರಣಕ್ಕಾಗಿ ಮನವಿ ಮಾಡುತ್ತಿದ್ದು, ನಗರದ ಸಮಸ್ಯೆಗಳ ಬಗ್ಗೆ ಬೆಳಕುವ ಚೆಲ್ಲುವ ಪತ್ರಕರ್ತರಿಗೆ ಅವರದ್ದೇ ಆದ ಭವನದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ನಗರ ಸಭೆಯಿಂದ ಪತ್ರಿಕಾ ಭವನಕ್ಕೆ ಜಾಗವನ್ನು ಮಂಜೂರು ಮಾಡಿಸಿ, ಪತ್ರಿಕಾ ಭವನ ನಿರ್ಮಾಣಕ್ಕೆ ಸಹಕರಿಸುವಂತೆ ವಿನಂತಿಸಿದರು. ಮನವಿ ನೀಡುವ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಪರವೀಣ ಕೋಠಾರಿ, ಹನುಮಂತ, ಮಂಜುನಾಥ, ಸಂಜಯ್‌, ರವಿ, ಹಿನ್ನಿ, ಚೇತನ್‌, ಹಿರಣಯ್ಯ, ಅನಿಲ್‌ ಸಹದೇವ, ಸಂಜಯ್‌, ಗಂಗಾಧರ ಮೊದಲಾದವರು ಉಪಸ್ಥಿತರಿದ್ದರು.

loading...