ಪರಿಸರ ನಾಶದಿಂದ ಮನುಕೂಲವೇ ನಾಶ:ಕಲ್ಯಾಣಶೆಟ್ಟಿ ಕಳವಳ

0
19
loading...

ಕನ್ನಡಮ್ಮ ಸುದ್ದಿ -ರಾಮದುರ್ಗ : ಮನುಷ್ಯರು ತಮ್ಮ ದಿನ ನಿತ್ಯ ದೈನಂದಿನ ಚಟುವಟಿಕೆಗಳ ಅನೂಕಲಕ್ಕಾಗಿ ಪ್ರತಿನಿತ್ಯ ತಾನು ಬೆಳೆದ ಪರಿಸರವನ್ನು ನಾಶಮಾಡುತ್ತಿದ್ದು. ಇದೆ ರೀತಿ ಮುಂದುವರೆದರೆ ಮುಂದೊಂದು ತುಂಬಾ ತೊಂದರೆ ಅನುಭವಿಸ ಬೇಕಾಗುತ್ತದೆ ಆದ್ದರಿಂದ ಎಲ್ಲರೂ ಪರಿಸರ ರಕ್ಷಣೆಗೆ ಮುಂದಾಗಬೇಕೆಂದು ಮುದೇನೂರ ಪ್ರೌಡ ಶಾಲೆಯ ಮುಖ್ಯ ಶಿಕ್ಷಕರಾದ ಎಸ್‌.ವಿ ಕಲ್ಯಾಣಶೇಟ್ಟಿ ಹೇಳಿದರು. ತಾಲೂಕಿನ ಒಬಳಾಪೂರ ರೇವನ ಸಿದ್ದೇಶ್ವರ ಮಠದಲ್ಲಿ ಸಾರ್ವಜನಿಕರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ವತಿಯಿಂದ ಹಮ್ಮಿಕೊಂಡ ಪರಿಸರಜಾಗೃತಿ, ಸಸಿ ನಾಟಿ ಹಾಗೂ ಗ್ರಿನ್‌ ವೇ ಕುಕ್ಕ ಸ್ಟೋವ್‌ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬರು ಅರಣ್ಯ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದಯೋಜನೆಯ ಬೆಳಗಾವಿ ನಿರ್ದೇಶಕರಾದ ಸುರೇಶ ಮೊೖಲಿ ಮಾತನಾಡಿಅತಿಯಾದ ಪ್ಲಾಸ್ಟಿಕ ಬಳಕೆ, ವಾಯು ಮಾಲಿನ್ಯ, ಭೂಮಿಗೆರಸಗೊಬ್ಬರ ಬಳಕೆ, ಕಾಡು ನಾಶದಿಂದಾಗಿ ಪರಿಸರ ನಾಶವಾಗುತ್ತಿದ್ದು ಸಾರ್ವಜನಿಕರು ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕೆಂದು ತಿಳಿಸಿದರು. ಪತ್ರಕರ್ತರಾದ ಈರಣ್ಣ ಬುಡ್ಡಗೋಳ್‌ ಮಾತನಾಡಿ ಧರ್ಮಸ್ಥಳ ಸಂಘದವರು ಮಾಡುತ್ತಿರುವ ಸಾಮಾಜೀಕ ಕಾರ್ಯ ಮೆಚ್ಚುವಂತದ್ದು ಎಂದು ಹೇಳಿದರು ಸಂಸ್ಥಾನ ಮಠದ ರೇವಯ್ಯಸ್ವಾಮಿ ದಿವ್ಯ ಸಾನಿದ್ಯದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಎಲ್ಲರನ್ನು ಆಶಿರ್ವದಿಸಿದರು. ಈ ಕಾರ್ಯಕ್ರಮದಲ್ಲಿ ಯೋಜನೆಯ ಸದಸ್ಯರಿಗೆ ಕುಕ್ಕ ಸ್ಟೋವ್‌ ಸಂಸ್ಥೆಯ ಮಾರ್ಕೇಟಿಂಗ ಮ್ಯಾನೇಜರ್‌ಜಗದೀಶರವರು ಕುಕ್ಕ ಸ್ಟೋವ್‌ ವಿತರಿಸಿದರು. ವೇದಿಕೆಯಲ್ಲಿತಾಲೂಕಿನಯೋಜನಾಧಿಕಾರಿ ಸತೀಶ ಎಂ, ಶಿಕ್ಷಕರಾದ ಶಿವಾನಂದ,ಗಣ್ಯರಾದ ಮಲ್ಲಪ್ಪರವರು ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕಿ ಪುಷ್ಪಾ ಸ್ವಾಗತಿಸಿದರು,ಮಲ್ಲಿಕಾರ್ಜುನ ನೀರೂಪಿಸಿ ವಂದಿಸಿದರು .

loading...