ಪಾಠ ಬೋಧನೆ ಜೊತೆಗೆ ಕ್ರಿÃಡೆ ಅವಶ್ಯ: ಎಸ್.ಎಸ್. ಕೆಳದಿಮಠ

0
9
loading...

ಬೀಳಗಿ: ಪಾಠ ಬೋಧನೆ ಜೊತೆಗೆ ಮನಸ್ಸು ಉಲ್ಲಸಿತಗೊಳ್ಳಲು ಕ್ರಿÃಡೆಗಳು ಅವಶ್ಯಕ. ಸೋಲು-ಗೆಲುವು ಮುಖ್ಯವಲ್ಲ ಆಟಗಳಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗುತ್ತದೆ. ಗ್ರಾಮೀಣ ಪ್ರದೇಶದ ಕ್ರಿÃಡಾಪಟುಗಳು ಸದೃಢs, ಶಕ್ತಿವಂತರಾಗಿದ್ದರಿಂದ ಅಂತರಾಷ್ಟಿçÃಯ ಮಟ್ಟದಲ್ಲಿ ಸಾಧನೆಗೈಯುತ್ತಾರೆ ಎಂದು ಕ್ಷೆÃತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಕೆಳದಿಮಠ ಹೇಳಿದರು.
ತಾಲೂಕಿನ ಗಿರಿಸಾಗರ ಗ್ರಾಮದ ಕಲ್ಯಾಣ ಹಿರೇಮಠದ ಆವರಣದಲ್ಲಿ ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂಗನಬಸವ ಶಿವಾಚಾರ್ಯ ವಿದ್ಯಾಭಿವೃದ್ದಿ ಸಂಸ್ಥೆಯ ಜಿ.ಜಿ.ಯಳ್ಳಿಗುತ್ತಿ ಪ್ರೌಡಶಾಲೆಯವತಿಯಿಂದ ಜರುಗಿದ ಬೀಳಗಿ ವಲಯ ಮಟ್ಟದ ಪ್ರೌಢ ಶಾಲಾ ಕ್ರಿÃಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ,
ಕ್ರಿÃಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಗುರ್ತಿಸಿ ಸೂಕ್ತ ಮಾರ್ಗದರ್ಶನ ಮಾಡಿ ಒಳ್ಳೆಯ ಕ್ರಿÃಡಾಪಟುವನ್ನಾಗಿ ಹೊರಹೊಮ್ಮಿಸಲು ದೈಹಿಕ ಶಿಕ್ಷಕರು ಹಾಗೂ ಪಾಲಕರು ಶ್ರಮಿಸಬೇಕು ಎಂದ ಅವರು ಗ್ರಾಮೀಣ ಪ್ರದೇಶದಿಂದ ಹೋದ ಬಡ ರೈತನ ಮಗಳು ಹಿಮಾ ದಾಸ ಪಿನ್‌ಲ್ಯಾಂಡನಲ್ಲಿ ನಡೆದ ವಿಶ್ವ ಜ್ಯೂನೀಯರ್ ಅಥ್ಲೆÃಟಿಕ್ಸ್ನಲ್ಲಿ ಸಾಧನೆಗೈದು ಚಿನ್ನದ ಪದಕ ಗೆದ್ದ ಮೊದಲು ಅಥ್ಲಿÃಟಿ ಎಂದು ಹೇಳಿದರು.

ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಜಿ.ಎಂ. ಮಾಟಲದಿನ್ನಿ, ಕ್ಷೆÃತ್ರ ಸಂಪನ್ಮೂಲ ಅಧಿಕಾರಿ ರಮೇಶ ವಡವಾಣಿ, ಬಿ,ಆರ್,ಸಿ ಈಶ್ವರ ಬಾಳಗಿ, ಶೇಖರ ಕಾಖಂಡಕಿ, ಮಲ್ಲಪ್ಪ ಗುನ್ನಿ ತಿಮ್ಮಣ್ಣ ಬುಡ್ಡವ್ವಗೋಳ ನಿಂಗಪ್ಪ ಹೂಗಾರ, ಹಣಮಂತ ಅರಮನಿ, ಮಲ್ಲಪ್ಪ ಮುತ್ತಲದಿನ್ನಿ ಸಂಗಯ್ಯ ಹಿರೇಮಠ, ಹಣಮಂತ ಜಲ್ಲಿ, ರಾಮಣ್ಣ ಕಟಗಿ ದೈಹಿಕ ಶಿಕ್ಷಕ ಬಿ.ಎನ್. ನಾಯ್ಕ, ಬಿಎಸ್ ಲಮಾಣಿ ಇದ್ದರು.

loading...