ಪಾಲಿಕೆ ಚುನಾವಣೆಗೆ ಕಾರ್ಯಕರ್ತರು ಸನ್ನದ್ದರಾಗಿ: ಸಂಸದ ಜೋಶಿ

0
6
loading...

ಕನ್ನಡಮ್ಮ ಸುದ್ದಿ-ಧಾರವಾಡ: ನಗರೇಶ್ವರ ದೇವಸ್ಥಾನದಲ್ಲಿ ಧಾರವಾಡ 71 ವಿಧಾನಸಭಾ ಕ್ಷೇತ್ರದ ಕಾರ್ಯಕಾರಿಣಿ ಸಭೆ ಜರುಗಿತು. ಈ ಸಂದರ್ಭದಲ್ಲಿ ಸಂಸದ ಪ್ರಲ್ಹಾದ ಜೋಶಿಯವರು ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಿ ಮೋದಿಜಿಯವರ ನಾಲ್ಕು ವರ್ಷಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಧಾರವಾಡ ಗ್ರಾಮಾಂತರ ಜಿಲ್ಲಾಧ್ಯಕ್ಷ ಈರಣ್ಣ ಜಡಿ ಮಹಾನಗರ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ ಬರುವ ದಿನಮಾನಗಳಲ್ಲಿ ಪಾಲಿಕೆ ಚುನಾವಣೆಗೆ ಹಾಗು ಸಾರ್ವತ್ರಿಕ ಚುನಾವಣೆಗೆ ಕಾರ್ಯಕರ್ತರು ಸನ್ನದ್ದರಾಗಿರಬೇಕು ಎಂದರು.
ಜಿ.ಪಂ ಮಾಜಿ ಸದಸ್ಯ ತವನಪ್ಪ ಅಷ್ಟಗಿ ಮಾತನಾಡಿ, ಪಕ್ಷಕ್ಕೆ ದುಡಿದವರಿಗೆ ಸ್ಥಾನಮಾನ ಕಲ್ಪಿಸಿ ಪಕ್ಷವನ್ನು ಇನ್ನೂ ಬಲಪಡಿಸುವತ್ತ ಪ್ರಯತ್ನಿಸಬೇಕು ಎಂದರು. ಶಾಸಕ ಅಮೃತ ದೇಸಾಯಿ ಮಾತನಾಡಿ, ಪಕ್ಷದ ಕಾರ್ಯಕರ್ತರಿಗೆ ಹಾಗೂ ಧಾರವಾಡ71 ಮತದಾರರಿಗೆ, ಪಕ್ಷದ ಹಿರಿಯರಿಗೆ ಧನ್ಯವಾದ ಅರ್ಪಿಸಿದರು. ಬರುವ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಸಾರ್ವತ್ರಿಕ ಚುನಾವಣೆಯಲ್ಲಿ ಸಂಸದರನ್ನು ಮರು ಆಯ್ಕೆ ಮಾಡಿ ಕೇಂದ್ರದಲ್ಲಿ ಮಂತ್ರಿಗಳನ್ನಾಗಿ ಮಾಡುವುದು. ಸಮಗ್ರ ಧಾರವಾಡವನನು ಮಾರಿ ನಗರವನ್ನಾಗಿ ನಿರ್ಮಿಸುವ ಗುರಿ ನಮ್ಮದಾಗಿದೆ ಎಂದರು. ಈರೇಶ ಅಂಚಟಗೇರಿ ಉಪಸ್ಥಿತರಿದ್ದರು.

loading...