ಪುಟ್ಟಣ್ಣ,ಚೆಲುವರಾಯ ಸ್ವಾಮಿ,ಹೆಚ್.ಸಿ.ಬಾಲಕೃಷ್ಣಗೆ ಬಿಜೆಪಿ ಗಾಳ ಆಪರೇಷನ್ ಕಮಲ ಶುರು, ಕಾಂಗ್ರೆಸ್-ಜೆಡಿಎಸ್‌ನ ಒಕ್ಕಲಿಗ ನಾಯಕರನ್ನು ಸೆಳೆಯಲು ಅಶೋಕ್‌ಗೆ ಸೂಚನೆ

0
6
loading...

ಬೆಂಗಳೂರು:ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಬಿಜೆಪಿ ಮುಂದಾಗಿದ್ದು,ಈ ಮೂಲಕ ಆಪರೇಷನ್ ಕಮಲಕ್ಕೆ ಕೈ ಹಾಕಿದೆ.
ಈ ನಿಟ್ಟಿನಲ್ಲಿ ಕಾಂಗ್ರೆಸ್‌ನ ಇಬ್ಬರು ಮಾಜಿ ಶಾಸಕರು ಮತ್ತು ಜೆಡಿಎಸ್ ನ ಒಬ್ಬರು ಹಾಲಿ ವಿಧಾನ ಪರಿಷತ್ ಸದಸ್ಯರನ್ನು ಸೆಳೆಯಲು ಪ್ರಯತ್ನ ಮಾಡಲಾಗುತ್ತಿದೆ.
ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೆÃತ್ರಗಳನ್ನು ಗುರಿಯಾಗಿರಿಸಿಕೊಂಡು ಒಕ್ಕಲಿಗ ಮುಖಂಡರನ್ನು ಸೆಳೆಯುವುದಕ್ಕೆ ಬಿಜೆಪಿಗೆ ಮುಂದಾಗಿದ್ದು,ಬಿಜೆಪಿ ಶಾಸಕ ಆರ್. ಅಶೋಕ್ ಹೆಗಲಿಗೆ ಈ ಕೆಲಸವನ್ನು ಬಿಜೆಪಿ ಹೈಕಮಾಂಡ್ ವಹಿಸಿದೆ.
ಹೀಗಾಗಿ ಕಾಂಗ್ರೆಸ್ ಮುಖಂಡರು,ಮಾಜಿ ಶಾಸಕರಾದ ಚಲುವರಾಯಸ್ವಾಮಿ ಹಾಗೂ ಬಾಲಕೃಷ್ಣರನ್ನು ಸೆಳೆಯಲು ಮುಂದಾಗಿರುವ ಬಿಜೆಪಿ ಇದಕ್ಕಾಗಿ ಒಂದು ಸುತ್ತಿನ ಮಾತುಕತೆ ನಡೆಸಿದೆ ಎಂದು ತಿಳಿದು ಬಂದಿದೆ.
ಅಂದ ಹಾಗೇ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್,ಈ ಇಬ್ಬರು ನಾಯಕರನ್ನು ಸಂಪರ್ಕಿಸಿ ಬಿಜೆಪಿಗೆ ಆಹ್ವಾನಿಸಿದ್ದಾರೆ. ಇದಲ್ಲದೇ ಚಲುವರಾಯಸ್ವಾಮಿ ಬಿಜೆಪಿಗೆ ಬಂದಲ್ಲಿ ಮಂಡ್ಯ ಕ್ಷೆÃತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿಸುವ ಭರವಸೆ ನೀಡುವುದಕ್ಕೆ ಬಿಜೆಪಿ ಮುಂದಾಗಿದೆ.ಜೊತೆಗೆ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣಗೆ ರಾಮನಗರ ಕ್ಷೆÃತ್ರದಿಂದ ಟಿಕೆಟ್ ನೀಡುವ ಬಗ್ಗೆ ಅಶೋಕ್ ಮಾತುಕತೆ ನಡೆಸಿದ್ದಾರೆ.
ಉಳಿದಂತೆ ಜೆಡಿಎಸ್‌ನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೂ ಬಿಜೆಪಿಗೆ ಸೇರ್ಪಡೆಯಾಗುª ಸಂಬಂಧ ಅಶೋಕ್ ಮಾತುಕತೆ ನಡೆಸಿದ್ದಾರೆ.ಆದರೆ ಈ ಮೂವರು ನಾಯಕರು ಮಾತ್ರ ಬಿಜೆಪಿ ಸೇರ್ಪಡೆ ಸಂಬಂಧ ಇದುವರೆಗೂ ಯಾವುದೇ ಪ್ರತಿಕ್ರಿಯೆ ಕೊಡದೇ ಸಮಯವಕಾಶ ಕೇಳಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ.
ಇನ್ನು ಈ ಮೂವರು ನಾಯಕರನ್ನು ಬಿಜೆಪಿಗೆ ಸೆಳೆಯುತ್ತಿರುವುದನ್ನು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಒಪ್ಪಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು,ಬಿಜೆಪಿ ಅಪರೇಷನ್ ಕಮಲ ಮಾಡುತ್ತಿರುವುದು ನಿಜ.ಈ ಮೂವರು ನಾಯಕರ ಜೊತೆ ಮಾತುಕತೆ ನಡೆಸಿದ್ದೆÃನೆ.ಕಾಂಗ್ರೆಸ್-ಜೆಡಿಎಸ್‌ನ ಸಮಿಶ್ರ ಸರ್ಕಾರದ ಬಗ್ಗೆ ಆ ಪಕ್ಷಗಳ ಶಾಸಕರೇ ಅಸಮಾಧಾನ ಗೊಂಡಿದ್ದಾರೆ.ಹೀಗಾಗಿ ಅವರನ್ನು ಬಿಜೆಪಿಯತ್ತ ಸೆಳೆಯಲು ಮುಂದಾಗಿರುವುದು ನಿಜ ಎಂದು ನೇರವಾಗಿಯೇ ಆಪರೇಷನ್ ಕಮಲವನ್ನು ಒಪ್ಪಿಸಿಕೊಂಡಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಶಾಸಕ ಬಾಲಕೃಷ್ಣ,ಬಿಜೆಪಿ ಸೇರ್ಪಡೆಯನ್ನು ತಳ್ಳಿ ಹಾಕಿದರು.ನಾವು ಕಾಂಗ್ರೆಸ್‌ನಲ್ಲಿಯೇ ಇರುತ್ತೆÃವೆ,ನಮ್ಮನ್ನು ಯಾರು ಸಂಪರ್ಕಿಸಿಲ್ಲ.ಅಶೋಕ್ ನಮ್ಮನ್ನು ಈ ವಿಷಯವಾಗಿ ಭೇಟಿಯಾಗಿಲ್ಲ.ಇಂತಹ ವಿಷಯವೇ ನಮ್ಮ ಬಳಿ ಬಂದಿಲ್ಲ.ಜೊತೆಗೆ ಚೆಲುವರಾಯಸ್ವಾಮಿ ಅವರು ಕೂಡ ಬಿಜೆಪಿಗೆ ಹೋಗುವ ಮಾತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಡುವೇ ಪುಟ್ಟಣ್ಣ,ಚೆಲುವರಾಯಸ್ವಾಮಿ ಹಾಗೂ ಬಾಲಕೃಷ್ಣ ಅವರನ್ನು ರಹಸ್ಯವಾಗಿಯೇ ಸಂಪರ್ಕಿಸಿರುವ ಅಶೋಕ್ ಬಿಜೆಪಿಗೆ ಸೆಳೆದು ಹಳೇ ಮೈಸೂರು ಭಾಗದ ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಭದ್ರಕೋಟೆಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ.
ಒಟ್ಟಾರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕೃತವಾಗಿಯೇ ಆಪರೇಷನ್ ಕಮಲ ಆರಂಭಿಸಿದ್ದು,ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ನೇರವಾಗಿಯೇ ಗಾಳ ಹಾಕಿದೆ.

loading...