ಪುನರ್ವಸತಿ ಪೂರ್ಣಗೊಂಡಾಗ ಸಂತೃಪ್ತಿ : ಆಯುಕ್ತ ಕಳಸದ

0
13
loading...

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆಯ ಯೋಜನೆಯಡಿಯ ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಹೊಂದಿ ಅಪಾರ ಆಸ್ತಿ, ಪಾಸ್ತಿ ಕಳೆದುಕೊಂಡು ಪುನರ್‌ ಜೀವನ ನಡೆಸುವ ಎಲ್ಲ ಸಂತ್ರಸ್ತರಿಗೆ ಪುನರ್ವಸತಿ ಯೋಜನೆ ಪೂರ್ಣಗೊಂಡಾಗ ಮಾತ್ರ ನನಗೆ ಸಂತೃಪ್ತಿಯಾಗಲಿದೆ ಎಂದು ಬೆಂಗಳೂರು ವಿಭಾಗದ ಆಯುಕ್ತರು ಹಾಗೂ ಸರಕಾರದ ಅಪರ ಕಾರ್ಯದರ್ಶಿ ಶಿವಯೋಗಿ ಕಳಸದ ಹೇಳಿದರು.
ನವನಗರದ ಕಲಾಭವನದಲ್ಲಿಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಸಿಬ್ಬಂದಿ ಹಾಗೂ ಬಾಗಲಕೋಟ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುವ ಸಮಾರಂಭದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು 15 ವರ್ಷಗಳ ಹಿಂದೆ ರೂಪು ರೇಶೆಗಳಿಲ್ಲದ ಬಾಗಲಕೋಟೆಗೆ ಪುನರ್‌ ನಿರ್ಮಾಣ ಕಾರ್ಯಕೈಗೊಳ್ಳಲು ನಿಯೋಜಿತಗೊಂಡ ಡಾ.ಶಿವಾನಂದ ಜಾಮದಾರ ಅವರ ಕಾರ್ಯ ಅವೀಶ್ರರಣಿಯವಾಗಿತ್ತು. ಅವರ ಸ್ಥಾನ ತೆರವಾದ ನಂತರ ಇಲ್ಲಿ ಪೂರ್ಣ ಪ್ರಮಾಣದ ಅಧಿಕಾರಿಗಳು ಕಾರ್ಯನಿರ್ವಹಿಸದೇ ಇದ್ದುದರಿಂದ ಮೇಲಾಧಿಕಾರಿಗಳ ಹಾಗೂ ನಮ್ಮ ಹಿತೈಶಿಗಳ ಒತ್ತಾಯದಿಂದಾಗಿ ನಾನು ಇಲ್ಲಿ ಬಂದು ಅಧಿಕಾರ ವಹಿಸಿಕೊಳ್ಳುವಂತಾಯಿತು ಎಂದರು. ಅಧಿಕಾರಿ ವಹಿಸಿಕೊಂಡಾಗ ಅಪರ ಆಯುಕ್ತರು, ಮುಖ್ಯ ಕಾರ್ಯನಿರ್ವಾಹಕ ಇಂಜಿನೀಯರ್‌, ಜನರಲ್‌ ಮ್ಯಾನೇಜರ, ಡೆಪ್ಯೂಟಿ ಜನರಲ್‌ ಮ್ಯಾನೇಜರ ನಂತರ ಬರುವಂತ ವಿಶೇಷ ಭೂ ಸ್ವಾಧೀನ ಅಧಿಕಾರಗಳ ಜೊತೆಗೆ ನಮ್ಮ ಕಚೇರಿಯ ಬಾಗಿಲುಗಳನ್ನು ತೆಗೆದುಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು. ಈ ಎಲ್ಲವುಗಳನ್ನು ಕೇವಲ 3 ತಿಂಗಳಲ್ಲಿ ಸಮಸ್ಯೆ ಬಗೆಹರಿಸಿದ್ದು, ದೇಶದಲ್ಲಿಯೇ ಪ್ರಪ್ರಥಮ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಮಾತನಾಡಿ ನಾನು ಕೂಡ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಾಗ ನೇರವಾಗಿ ಕಳಸದ ಅವರ ಪರಿಚಯ ನನಗೆ ಇರದೇ ಇದ್ದರೂ ಕಂದಾಯ ಮಂತ್ರಿಗಳ ಆಪ್ತ ಕಾರ್ಯದರ್ಶಿಗಳಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ನಾನು ಕೂಡಾ ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವಾಗ ಪರಿಚಯವಾಗಿದ್ದು, ತದನಂತರ ನನ್ನ ಸುಯೋಗವೋ ಏನೋ ಕಳಸದವರು ಸಿಇಓ ಆಗಿ ಕಾರ್ಯನಿರ್ವಹಿಸಿ ಹೋದ ಸ್ಥಾನ ನನಗೆ ಲಬಿಸಿತು. ಅಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಕಳಸದ ಅವರ ಬಗ್ಗೆ ಹಾಗೂ ಅವರ ಕಾರ್ಯಗಳ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿದ ಬರುತ್ತಿದ್ದವು. ಅಂತಹ ಅಧಿಕಾರಿಗಳ ಸ್ಥಾನವನ್ನು ನಾನು ಪಡೆದೆನಲ್ಲವೆಂಬ ಹೆಮ್ಮೆ ನನ್ನಲ್ಲಿ ಇತ್ತು ಎಂದರು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ ಮಾತನಾಡಿ ಶಿವಯೋಗಿ ಕಳಸದವರು ಕೃಷ್ಣಾ ಮೇಲ್ದಂಡೆ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದವರಾಗಿದ್ದರು. ಎಂತಹ ಕ್ಲಿಷ್ಟಕರ ಸಮಸ್ಯೆ ಬಂದಾಗಲೂ ಕೂಡ ಅವರು ಸ್ಥಾನಿಕದಲ್ಲಿ ಇಲ್ಲದೇ ಇದ್ದರೂ ಸಮಸ್ಯೆ ಬಗೆಹರಿಸುವ ಕಾರ್ಯ ನೈಪುಣ್ಯತೆ ಹೊಂದಿದವರಾಗಿದ್ದರು ಎಂದರು. ಇದೇ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಭಿಯಂತರ ಪಿ.ಡಿ.ಮೂಲಿಮನಿ, ರಾಜಶೇಖರ ಡಂಬಾಳ, ಉಪವಿಭಾಗಾಧಿಕಾರಿಗಳಾದ ರವೀಂದ್ರ ಕರಿಲಿಂಗಣ್ಣವರ, ಶಂಕರಗೌಡ ಸೋಮನಾಳ, ಎಇಇ ಗುರುಬಸವ ಅವರು ಕಳಸದ ಅವರ ಕುರಿತು ಅಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಆರ್‌,ಆರ್‌ದ ವ್ಯವಸ್ಥಾಪಕ ಜಗದೀಶ ರೂಗಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್‌.ಕೆ.ಪುರೋಹಿತ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕಾರ್ಯನಿರ್ವಾಹಕ ಅಭಿಯಂತರರ ಎಚ್‌.ಡಿ.ದಾನಿ ಸ್ವಾಗತಿಸಿದರು.

loading...