ಪುನರ್‌ ನಿರ್ಮಾಣ ಕೈಗೊಂಡ ಮಿರ್ಜಾನ ಕೋಟೆ

0
18
loading...

ಕನ್ನಡಮ್ಮ ಸುದ್ದಿ-ಕುಮಟಾ: ಐತಿಹಾಸಿಕ ಕೋಟೆಯೆ ಮಿರ್ಜಾನ ಊರಿನ ಹಿರಿಮೆ ಹೆಚ್ಚಿಸಿದೆ ಅಳುವಿನಂಚಿನಲ್ಲಿದ್ದ ಮಿರ್ಜಾನ ಕೋಟೆಗೆ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಮೂಲ ರೂಪಕ್ಕೆ ಧಕ್ಕೆ ಯಾಗದ ರೀತಿಯಲ್ಲಿ ಪುನರ್‌ ನಿರ್ಮಾಣ ಕೈಗೊಂಡಿದ್ದು, ಕೋಟೆ ಮರು ಸೃಷ್ಟಿಯಾಗಿ ಸುಂದರವಾಗಿ ಕಂಗೊಳಿಸಿದೆ. ಹತ್ತಾರು ಚಲನಚಿತ್ರಗಳನ್ನು ನಿರ್ಮಿಸಿದ್ದ ಪರಿಣಾಮ ಪ್ರಚಾರ ಇನ್ನಷ್ಟು ವ್ಯಾಪಿಸಿ ರಾಜ್ಯದ ವಿವಿಧೆಡೆಗಳಿಂದ ಕೋಟೆಯ ವಿಕ್ಷಣೆಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.
ಮಿರ್ಜಾನ ರಾಷ್ಟ್ರೀಯ ಹೆದ್ದಾರಿ 66 ರಿಂದ 1.5 ಕಿಮಿ ಅಂತರವಿರುವ ರಸ್ತೆ ಸ್ಥಿತಿ ಚಿಂತಾಜನಕವಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ತಗಲಿರುವ ಈ ರಸ್ತೆ ತುಂಬಾ ಕಂದಕಗಳ ಸಾಮ್ರಾಜ್ಯವಾಗಿ ಮಾರ್ಪಟ್ಟಿದೆ ವಾಹನ ಸಾಗಿಸುವ ಮದ್ಯೆ ಟೈಯರ್‌ ಪಂಚರ ಆಗುವ ಭಿತಿ ಒಂದೆಡೆಯಾದರೆ ಸವಾರರು ಸ್ಕಿಡ್‌ ಆಗಿ ಬೀಳುವ ಅಪಾಯವೇ ಹೆಚ್ಚಾಗಿದೆ. ಅಲ್ಲದೇ ಕೋಟೆಯ ರಸ್ತೆಗೆ ಹೊಂಡಗಳು ಬೀಳಲು ಕಳಪೆ ಕಾಮಗಾರಿ ಪ್ರಮುಖ ಕಾರಣವಾದರೆ ರಸ್ತೆಯ ಅಕ್ಕ ಪಕ್ಕ ಕಾಲುವೆ ನಿರ್ಮಿಸದಿರುವುದರಿಂದ ಮಳೆಯ ನೀರು ರಸ್ತೆಯಲ್ಲ ಸಂಗ್ರಹವಾಗಿ ಹೊಂಡಗಳ ಹೆಚ್ಚಳಕ್ಕೆ ಕಾರಣವಾಗಿದೆ.
ಇಲ್ಲಿನ ರಸ್ತೆಯ ನಿರ್ಮಾಣಕ್ಕೆ ಸರಕಾರದಿಂದ ಲಕ್ಷಾಂತರ ರೂಪಾಯಿ ಈ ಹಿಂದಿನಿಂದಲೂ ಹಣ ಮಂಜೂರಾಗಿದೆ. ರಸ್ತೆ ನಿರ್ಮಾಣದ ವೇಳೆ ಸಮಾನ ಪ್ರಮಾಣದಲ್ಲಿ ಜೆಲ್ಲಿ ಡಾಂಬರ್‌ ಬಳಕೆಯಾಗದ ಹಿನ್ನಲೆಯಲ್ಲಿ ಆರೆಳು ತಿಂಗಲಲ್ಲಿ ರಸ್ತೆ ಬಾಯಿ ತೆರೆದು ನಿಂತಿದೆ. ರಸ್ತೆಗೆ ಹಾಕಿದ ಜೆಲ್ಲಿ ಡಾಂಬರ್‌ ಕಿತ್ತು ಬಂದು ಹೊಂಡಮಯ ವಾಗಿದೆ. ತದನಂತರ ಹೊಂಡಬಿದ್ದ ರಸ್ತೆ ದುರಸ್ಥಿಗೊಳಿಸಲು ಪ್ಯಾಚ್‌ ವರ್ಕಗೆ ಹಣ ಮಂಜೂರಾಗಿದೆ. ಪ್ಯಾಚ್‌ ವರ್ಕ ಆಗಿದ 6 ತಿಂಗಳಲ್ಲಿ ಮರು ಡಾಂಬರಿಕರಣಕ್ಕೆ ಮತಷ್ಟು ಹಣ ಮಂಜೂರಾಗಿದೆ. ಸರಕಾರ ಹಣ ಪೋಲಾಗುತ್ತ ಸಾಗಿದೆ ಹೊರತು ರಸ್ತೆ ಬಲ ಗೊಳಲೇ ಇಲ್ಲ. ಅಲ್ಲದೇ ಯಾಕೋ ಮಿರ್ಜಾನ ಕೋಟೆಯ ಮಿರ್ಜಾನ ಕೋಟೆಯ ನಿರ್ಮಾಣಕ್ಕೆ ವಿಘ್ನಗಳೇ ಎದುರಾಗುತ್ತಿದೆ. ಕಳೆದೆರೆಡು ವರ್ಷಗಳ ಹಿಂದೆ ಮಿರ್ಜಾನ ಕೋಟೆಯ ರಸ್ತೆಗೆ ಪ್ರವಾಸೊದ್ಯಮ ಇಲಾಖೆಯಿಂದ 80 ಲಕ್ಷ ರೂ. ಮಂಜೂರಾತಿ ದೊರಕಿತು. ಅಂದಾಜು ಪತ್ರ ತಯಾರಿಸಿ ಆಡಳಿತಾತ್ಮಕ ಮಂಜೂರಿಗಾಗಿ ಮುಖ್ಯ ಕಛೇರಿ ದೇಹಲಿಗೆ ಕಳುಹಿಸಲಾಗಿತ್ತು. ಇನ್ನೆನು ರಸ್ತೆ ನಿರ್ಮಾಣವಾಗುತ್ತದೆ ಎನ್ನುವಷ್ಟರಲ್ಲಿ ದುರದೃಷ್ಟವಶಾತ್‌ ಅಲ್ಲಿಂದ ಕಾಮಗಾರಿ ಬದಲಾವಣೆಯಾಗಿ ರಸ್ತೆ ಬೇರೆಡೆ ಬದಲಾಯಿಸಿತು. ಇದರಿಂದ ಊರಿನ ಜನ ನಿರಾಶೆಪಡುವಂತಾಯಿತು.
ಬಹುಜನರ ಬೇಡಿಕೆಗೆ ಸ್ಪಂದಿಸಿದ ಅಂದಿನ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ಮಿರ್ಜಾನ ಕೋಟೆಗೆ ಸುಸಜಿತ್‌ ಸಿಮೆಂಟ್‌ ರಸ್ತೆ ನಿರ್ಮಾಣಕ್ಕೆ ಒಂದು ಕೋಟಿ ರೂ ಅನುದಾನ ಮಂಜೂರು ಮಾಡಿಸಿದರು. ಕಳೆದ ವಿಧಾನ ಸಭಾ ಚುನಾವಣೆಗೆ 2 ತಿಂಗಳಿರುವಾಗ ರಸ್ತೆ ನಿರ್ಮಾಣಕ್ಕೆ ನಾಮ ಫಲಕ ಅನಾವರಣಗೊಳಿಸಿ ವಿಧ್ಯುಕ್ತವಾಗಿ ಚಾಲಣೆ ನೀಡಿದರು ತದನಂತರ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ರಸ್ತೆಯ ನಿರ್ಮಾಣ ಕಾರ್ಯ ಅಷ್ಟಕ್ಕೆ ಸ್ಥಗಿತ ಗೊಂಡಿತು. ವಿಧಾನ ಸಭಾ ಚುನಾವಣೆಯ ಬಳಿಕ ರಸ್ತೆ ಕಾರ್ಯ ಸುಗಮವಾಗಿ ಸಾಗಬಹುದೆಂದು ಭಾವಿಸಿದ ಜನತೆಗೆ ಮತ್ತೆ ನಿರಾಸೆಯಾಗಿದೆ. ರಸ್ತೆ ನಿರ್ಮಾನಕ್ಕೆ ಚಾಲಣೆ ನಿಡಿದ ಶಾರದಾ ಶೆಟ್ಟರು ಪರಾಭವ ಗೊಂಡರು. ನಂತರ ಶಾಸಕರ ನಾಮ ಫಲಕವನ್ನು ಯಾರೋ ಕಿಡಿ ಗೇಡಿಗಳು ಕಿತ್ತು ಹಾಕಿದ್ದಾರೆ. ರಸ್ತೆ ದುರಸ್ಥಿ ಭಾಗ್ಯ ದೊರೆಯದೆ ನಿತ್ಯ ಓಡಾಡುವ ಪ್ರವಾಸಿಗರು ನರಕ ಯಾತನೆ ಅನುಭವವಾಗುತ್ತದೆ. ಈಗ ನೂತನ ಶಾಸಕ ದಿನಕರ ಶೆಟ್ಟರು ರಸ್ತೆಯ ನಿರ್ಮಾಣಕ್ಕೆ ಭರವಸೆ ನೀಡಿದ್ದಾರೆ. ಅದು ಯಾವತ್ತು ಕಾರ್ಯ ರೂಪಕ್ಕೆ ಬರುತ್ತದೆ ಎಂಬುದನ್ನು ಜನ ಜಾತಕ ಪಕ್ಷಿಯಂತೆ ಕಾಯುತ್ತಾ ಕುಳಿತ್ತಿದ್ದಾರೆ. ಆದಷ್ಟು ಬೇಗನೆ ರಸ್ತೆ ನಿರ್ಮಾಣ ಆಗಲೆಂಬುದು ಜನರ ಆಶಯವಾಗಿದೆ.

loading...