ಪೂರ್ಣಗೊಳ್ಳದ ಕಾಮಗಾರಿ: ಸಾರ್ವಜನಿಕರ ಆಕ್ರೋಶ

0
10
loading...

ಕನ್ನಡಮ್ಮ ಸುದ್ದಿ-ನರಗುಂದ: ಪಟ್ಟಣದ 1 ನೇ ವಾರ್ಡ್‌ನ ಬಸವೇಶ್ವರ ನಗರದಲ್ಲಿ 2007-18ರ ಅವಧಿಯಲ್ಲಿ ಪುರಸಭೆಯಿಂದ ನಡೆಯಬೇಕಿದ್ದ ಕಾಮಗಾರಿಗಳು ನಿಗಧಿತ ಅವಧಿಯಲ್ಲಿ ಆಗದಿರುವುದು ಅಲ್ಲಿಯ ಜನತೆ ಟೀಕೆ ಮಾಡುವಂತಾಗಿದೆ. ಬಸವೇಶ್ವರ ನಗರದಲ್ಲಿ ಸುಮಾರು 80 ಮನೆಗಳಿವೆ. ಅಲ್ಲಿಯ ನಿವಾಸಿಗಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲು ಕಳೆದ 7 ತಿಂಗಳ ಹಿಂದೆ ನಡೆಸಿದ ಕಾವiಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಇದು ಅಲ್ಲಿಯ ನಿವಾಸಿಗಳನ್ನು ಕೆರಳಿಸಿದೆ. ಪುರಸಭೆ ನಿಗಧಿತ ಅವಧಿಯಲ್ಲಿ ಕಾಮಗಾರಿ ನಡೆಸದೇ ನಿರ್ಲಕ್ಷಮಾಡಿರುವುದು ಬೆಳಕಿಗೆ ಬಂದಿದೆ.
ಬಸವೇಶ್ವರ ನಗರದಲ್ಲಿ 2007 ರಲ್ಲಿಯೇ ಅಂಗನಾಡಿ ಕಟ್ಟಡ ನಿರ್ಮಾಣಗೊಳ್ಳಬೇಕಿತ್ತು. ಆದರೆ ಇನ್ನೂ ಕೆಲಸ ಆರಂಭಗೊಳಿಸದೇ ಕೇವಲ ಆ ಸ್ಥಳದಲ್ಲಿ ಗರ್ಸ ಹಾಕಿ ಕೈಬಿಡಲಾಗಿದೆ. ಅಲ್ಲಿಯ ರಸ್ತೆಗಳನ್ನು ಮಾಡಲು ನಿರ್ಣಯಿಸಿದ್ದ ಪುರಸಭೆ ಕಳೆದ ಏಳು ತಿಂಗಳ ಹಿಂದೆ ಕಡಿ ಹಾಕಿ ಕೈ ಬಿಟ್ಟಿದೆ.
ನಗರೋತ್ಥಾನ ಮತ್ತು 14ನೇ ಹಣಕಾಸು ಯೋಜನೆಯಡಿಯಲ್ಲಿಯ ವಿವಿಧ ಕಾಮಗಾರಿಗಳನ್ನು 1 ರಿಂದ ನಾಲ್ಕನೇ ವಾರ್ಡ್‌ವರೆಗೆ ನಡೆಸುವ ಕುರಿತು ಇನ್ನೂ ಇಲ್ಲಿಯ ಪುರಸಭೆ ಅಡಳಿತ ಮಂಡಳಿ ನಿರ್ಣಯಿಸಿದ್ದರಿಂದ ಆ ಭಾಗದಲ್ಲಿ ಚರಂಡಿ ಹಾಗೂ ರಸ್ತೆಗಳು ಸಮಪರ್ಕವಿರದೇ ನಿತ್ಯ ಜನರು ತೊಂದರೆ ಅನುಭವಿಸುವಂತಾಗಿದೆ. 2017-18ನೇ ಸಾಲಿನ ಈ ಕಾಮಗಾರಿಗಳನ್ನು ನಡೆಸಿ ಪೂರ್ಣಗೊಳಿಸಲು ಪುರಸಭೆ ಇನ್ನೂ ನಿರ್ಲಕ್ಷ್ಯ ಮಾಡುತಿದ್ದು ಇದಕ್ಕೆ ಸಾರ್ವಜನಿಕರು ಸಹ ಆಪೇಕ್ಷ ವ್ಯಕ್ತಪಡಿಸಿದ್ದಾರೆ.
ಬಸವೇಶ್ವರ ನಗರ ಮತ್ತು 2 ನೇ ವಾರ್ಡ್‌ ಹಾಗೂ ಮೂರನೇ ವಾರ್ಡ್‌ಗಳಲ್ಲಿ ನಿಗಧಿತ ಅವಧಿಯಲ್ಲಿ ಕುಡಿಯುವ ನೀರು ಸರಿಯಾಗಿ ಒದಗುತ್ತಿಲ್ಲ. 12 ದಿನಗಳಿಗೊಮ್ಮೆ ನೀರು ಒದಗಿಸಲಾಗುವುದರಿಂದ ಜನತೆ ತೊಂದರೆ ಅನುಭವಿಸುವಂತಾಗಿದೆ.
ಪಟ್ಟಣದಲ್ಲಿಯ 23 ವಾರ್ಡ್‌ಗಳಲ್ಲಿ ನಗರೋತ್ಥಾನ ಹಾಗೂ 14 ಹಣಕಾಸು ಯೋಜನೆಯ 2018-19 ನೇಸಾಲಿಗೆ ತೆಗೆದುಕೊಂಡ ಅನೇಕ ಕಾಮಗಾರಿಗಳು ಇನ್ನೂ ಟೆಂಡರ್‌ ಪ್ರಕ್ರಿಯೆಯಲ್ಲಿವೆ. ಯೋಜನೆಯಡಿಯಲ್ಲಿ ಬೇಕಾದ ಅನುದಾನ ಒದಗಿದ್ದರೂ ಸಹಿತ ಕಾಮಗಾರಿಗಳನ್ನು ಅರಂಭಿಸಲು ಟೆಂಡರ್‌ ಪ್ರಕ್ರಿಯೆ ಅರಂಭಗೊಳ್ಳದ್ದರಿಂದ ಸಾರ್ವಜನಿಕರು ಪುರಸಭೆಯಿಂದ ಅಭಿವೃದ್ದಿ ಕೆಲಸಗಳು ನಡೆಯುತಿಲ್ಲವೆಂದು ಇಲ್ಲಿನ ಜನರು ಆರೋಪಿಸುತ್ತಿದ್ದಾರೆ.
2018-19ರ ಅವಧಿಯಲ್ಲಿ 1 ನೇ ವಾರ್ಡ್‌ನಲ್ಲಿ ಎರಡು ಚರಂಡಿ ಮತ್ತು ಆ ಭಾಗದಲ್ಲಿಯ ಬಸವೇಶ್ವರ ನಗರದ ರಸ್ತೆ, ನೀರಾವರಿ ಕಾಲೋನಿ ಹತ್ತಿರ ನಾಲ್ಕು ಲಕ್ಷ ರೂ. 2 ಚರಂಡಿ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ನಡೆದಿಲ್ಲ. 2 ವಾರ್ಡ್‌ನ ಜಮಲಾಪೂರ, ಪಠಾಣರ ಓಣೆ, ದಂಡಾಪೂರದ 6ನೇ ಗಲ್ಲಿ ಹಾಗೂ ಅವಳಿಯನಗರದಲ್ಲಿ ಯಾವ ಪ್ರಗತಿ ಕಾಮಗಾರಿಯನ್ನೂ ಪುರಸಭೆಯಿಂದ ಹಾಕಿಕೊಂಡಿಲ್ಲ.
3 ಹಾಗೂ 7 ಹಾಗೂ 9 ವಾರ್ಡ್‌ಗೆ ಸಂಬಂಧಿಸಿದಂತೆ ವೆಂಕಟೇಶ್ವರ ದೇವಸ್ಥಾನದಿಂದ ಗಡಾದ ಮಸೂತಿಯವರೆಗೆ ರಸ್ತೆಮಾಡುವ ಕಾಮಗಾರಿಯೂ ಟೆಂಡರ್‌ ಪ್ರಕ್ರಿಯೆಯಲ್ಲಿದೆ. 4 ನೇ ವಾರ್ಡ್‌ಗೆ ಸಂಬಂಧಿಸಿದಂತೆ ಎನ್‌ಎಚ್‌ಟಿ ಮಿಲ್‌ ಬಳಿ 5 ಲಕ್ಷ ರೂ. ಚಂರಡಿ ನಿರ್ಮಾಣ ಕುರಿತಂತೆ ಕಾಮಗಾರಿ ಟೆಂಡರ್‌ ಪ್ರಕ್ರಿಯೆಯಲ್ಲಿದೆ. ಈ ಕಾಮಗಾರಿಗಳನ್ನು ಆರಂಭಿಸಲು ಪುರಸಭೆ ದಿವ್ಯ ನಿರ್ಲಕ್ಷವಹಿಸಿರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಿಂದ ಟೆಂಡರ್‌ ಪ್ರಕ್ರಿಯೆಗಾಗಿ ತಾಂತ್ರಿಕ ಮಂಜೂರಾತಿ ದೊರೆತಿದ್ದರೂ ಕೂಡಾ ಪುರಸಭೆ ಅಡಳಿತ ಮಂಡಳಿ ಸರಿಯಾಗಿ ಅಭಿವೃದ್ಧಿ ಕೆಲಸ ನಿರ್ವಹಿಸಲು ವಿಳಂಭಮಾಡಿದ್ದು ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ನಗರೋತ್ಥಾನ ಅಭಿವೃದ್ಧಿ ಅನುದಾನ ಮತ್ತು 14ನೇ ಹಣಕಾಸಿನ ಯೋಜನೆಯ ಅನುದಾನಗಳನ್ನು ಪರಿಗಣಿಸಿ ಎಲ್ಲ ವಾರ್ಡ್‌ಗಳಲ್ಲಿಯೂ ಕಾಮಗಾರಿ ನಡೆಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದ ಪರಿಣಾಮ ಸಕಾಲಕ್ಕೆ ಆಗಿನ ಸಂದರ್ಭದಲ್ಲಿ ಕಾಮಗಾರಿ ನಡೆಸುವುದು ನೀತಿ ಸಂಹಿತೆ ನಿಯಮದಿಂದ ತೊಂದರೆಯಾಗಿತ್ತು. ಇದೇ ಜು. 6 ರಂದು ಪಟ್ಟಣದಲ್ಲಿ ಪುರಸಭೆಯಿಂದ ನಡೆಸುವ ಕಾಮಗಾರಿಗಳಿಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ತಾಂತ್ರಿಕ ಅನುಮೋದÀನೆ ದೊರೆತಿದ್ದು ಟೆಂಡರ್‌ ಕರೆದು ಶೀಘ್ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದು ಪುರಸಭೆ ಮುಖ್ಯಾಧಿಕಾರಿ ಎನ್‌.ಎಸ್‌. ಪೆಂಡಸೆ ತಿಳಿಸಿದ್ದಾರೆ.
ಪಟ್ಟಣದ ಬಸವೇಶ್ವರ ನಗರದಲ್ಲಿ ಅಂಗನಾಡಿ ಕಟ್ಟಡ ನಿರ್ಮಾಣಕ್ಕೆ ಕಾಮಗಾರಿ ನಡೆಸಲು ಸಿದ್ಧತೆ ಮಾಡಿಕೊಂಡ ಕಟ್ಟಡ ನಿರ್ಮಾಣದ ಸ್ಥಳ ಸ್ವಚ್ಚಮಾಡಲಾಗಿದೆ. ಆದರೆ ಅನುದಾನದ ಕೊರತೆಯಿಂದ ಕಾಮಗಾರಿ ವಿಳಂಬವಾಗಿದೆ. ಸಧ್ಯದಲ್ಲಿ ಅನುದಾನ ದೊರೆಯಲಿದ್ದು, ಕಟ್ಟಡ ಕಾಮಗಾರಿ ನಡೆಸಲು ಸಿದ್ಧತೆಮಾಡಿಕೊಳ್ಳಲಾಗುವುದು ಎಂದು ಭೂಸೇನಾ ನಿಗಮದ ಯೋಜನಾ ವ್ಯವಸ್ಥಾಪಕ ಐ.ಜೆ. ಸಾಲಮನಿ ತಿಳಿಸಿದ್ದಾರೆ.

loading...