ಪೈಗಂಬರ್‌ರ ತತ್ವ, ಬಸವಣ್ಣನವರ ವಚನದಲ್ಲಿ ಸಾಮೀಪ್ಯವಿದೆ: ಶ್ರೀಗಳು

0
14
loading...

ಕನ್ನಡಮ್ಮ ಸುದ್ದಿ-ಹುನಗುಂದ: ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡು ಶಾಂತಿ, ಸಾಮರಸ್ಯ, ಭಾವೈಕ್ಯತೆಯನ್ನು ರೂಢಿಸಿಕೊಂಡ ಶ್ರೀಮಂತ ರಾಷ್ಟ್ರ ಅರಬ್‌ದ ಕತಾರ ಮತ್ತು ಉಮನ್‌. ಇಲ್ಲಿ ಇಸ್ಲಾಂ ಧರ್ಮವನ್ನು ಬಿಟ್ಟು ಉಳಿದ ಧರ್ಮಗಳ ಧರ್ಮಗುರುಗಳಿಗೆ ಅವಕಾಶವಿಲ್ಲದ ಒಂದು ದೇಶದಲ್ಲಿ ಬಸವ ತತ್ವ ಸಿದ್ದಾಂತಗಳನ್ನು ತಿಳಿಸುವದರ ಜೊತೆಗೆ ಮೊಟ್ಟ ಮೊದಲ ಬಾರಿಗೆ ಆ ರಾಷ್ಟ್ರದಲ್ಲಿ ಬಸವ ಜಯಂತಿಯನ್ನು ಆಚರಿಸುವುದಕ್ಕೆ ಅಡಿಪಾಯ ಹಾಕಿದೇನೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಶ್ರೀಪೀಠದಲ್ಲಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 45 ನೆಯ ಬಸವ ಸಂಗಮ ಮತ್ತು ಯಶಸ್ವಿ ಅರಬ್‌ ರಾಷ್ಟ್ರದ ಪ್ರವಾಸದ ಅನುಭವ ಹಾಗೂ ಭಕ್ತಾಧಿಗಳಿಂದ ಗೌರವ ಸತ್ಕಾರ ಸಮಾರಂಭದ ಸಾನಿಧ್ಯವನ್ನು ವಹಿಸಿಕೊಂಡು ಪ್ರವಾಸದಲ್ಲಿನ ಅನುಭವಗಳನ್ನು ಭಕ್ತರ ಮುಂದೆ ಹಂಚಿಕೊಳ್ಳುತ್ತ ಇಂದೊಂದು ಕ್ರಾಂತಿಕಾರಿ ಪ್ರವಾಸವಾಗಿತ್ತು. ಮೊಹಮ್ಮದ ಪೈಗಂಬರ್‌ರ ತತ್ವ ಮತ್ತು ಬಸವಣ್ಣನವರ ವಚನದಲ್ಲಿ ಸಾಮೀಪ್ಯವಿದೆ. ಭಾರತ ಮತ್ತು ಕತಾರ ದೇಶಗಳ ಭಾಂದವ್ಯವನ್ನು ಗಟ್ಟಿಗೊಳ್ಳಿಸಲು ಗ್ಲೋಬಲ್‌ ಬಸವ ಪೀಸ್‌ ಸೆಂಟರ್‌ನ್ನು ಸ್ಥಾಪಿಸಲಾಗಿದೆ. ಅರಬ್‌ ರಾಷ್ಟ್ರಗಳಲ್ಲಿಯೇ ಅತೀ ಚಿಕ್ಕದಾದ ಕತಾರ ದೇಶ ಅಲ್ಲಿನ ತೈಲ್‌ ಮತ್ತು ಅನಿಲ ಉತ್ಪಾದನೆ ಮತ್ತು ಅಲ್ಲಿನ ಜನತೆಯ ಕಾಯಕ ತತ್ವದಿಂದ ಮುಂದುವರೆದ ದೇಶವಾಗಿದೆ. ಇದರ ಬೆಳವಣೆಗೆಯನ್ನು ಸಹಿಸದ ಹಲವು ದೇಶಗಳು ಈ ದೇಶದ ಮೇಲೆ ನಿರ್ಭಂಧನೆ ಹಾಕಿದಾಗ ಅದನ್ನು ಸವಾಲಾಗಿ ತಗೆದುಕೊಂಡು ಅತೀ ಅದ್ಭತವಾಗಿ ಬೆಳದೆ. ಅಲ್ಲಿ ಉಚಿತ ಶಿಕ್ಷಣ ಮತ್ತು ಆರೋಗ್ಯ ನೀಡಲಾಗುತ್ತಿದೆ.ಅಲ್ಲಿ ರಾಜಪ್ರಭತ್ವ ಆಡಳಿತದಲ್ಲಿ ಸರ್ವರಿಗೂ ಸಮಪಾಲು ಸಮ ಬಾಳು ತತ್ವವನ್ನು ರೂಡಿಸಿಕೊಂಡು ಪ್ರಜೆಗಳ ಯೋಗಕ್ಷೇಮವನ್ನು ತ್ವರಿತಗತಿಯಲ್ಲಿ ನಿವಾರಣೆ ಮಾಡಲಾಗುತ್ತಿದೆ ಮತ್ತು ದೂಮಪಾನ ಮಧ್ಯಪಾನಗಳನ್ನುಮಕ್ತ ರಾಷ್ಟ್ರವಾಗಿದ್ದು ಯಾರಾದರೂ ಮಧ್ಯಪಾನ ಮಾಡಬೇಕಾದರೆ ಅಲ್ಲಿನ ಸರ್ಕಾರದ ಪರವಾಣಿಗೆಯನ್ನು ಪಡೆದುಕೊಳ್ಳಬೇಕಾಗಿರುತ್ತೆದೆ ಅಂತಹ ಶಿಸ್ತು ಬದ್ದ ರಾಷ್ಟ್ರವಾಗಿದೆ. ನಮ್ಮ ದೇಶದಲ್ಲಿ ಹಲವಾರು ಸಂಪತ್ತು ಇದ್ದರೂ ನಮ್ಮ ನಮ್ಮಲಿಯ ವೈಯಕ್ತಿಕ ಕಚ್ಚಾಟದಿಂದ ಹಿಂದೆ ಉಳಿದಿದೇವೆ ಎಂದರು.
ಮುಖ್ಯ ಅತಿಥಿಗಳಾದ ಪತ್ರಕರ್ತರ ಸಂಘದ ಅಧ್ಯಕ್ಷ ಅಮರೇಶ ನಾಗೂರ ಮಾತನಾಡಿ ಶ್ರೀಗಳ ಬಸವ ನಿಷ್ಠೆ ವಿದೇಶಗಳನ್ನು ಆಕರ್ಷಸುತ್ತಿದೆ ಪ್ರತಿ ಅಮವಾಸ್ಯೆಯಂದು ಶ್ರೀಮಠದಲ್ಲಿ ಬಸವಸಂಗಮ ಕಾರ್ಯಕ್ರಮ ಮತ್ತು ದಾಸೋಹ ಸೇವೆ ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ವಿವಿಧ ಗ್ರಾಮಗಳ ಮುಖಂಡರು ಶ್ರೀಗಳನ್ನು ಸತ್ಕರಿಸಲಾತು. ಮಾಜಿ ಗ್ರಾ.ಪಂ ಮಹಾಂತೇಶ ಭದ್ರಣ್ಣನವರ,ದಾಸೋಹ ಸಮತಿಯ ಅಧ್ಯಕ್ಷ ರುದ್ರಪ್ಪ ಸಮತರ,ಕಾರ್ಯದರ್ಶಿ ಪರಪ್ಪ ಕೋಕಾಟೆ,ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷ ಶೇಖರಪ್ಪ ಬಾದವಾಡಗಿ, ಹುಚ್ಚಪ್ಪ ಐಹೊಳೆ, ಶಂಕರಗೌಡ ಬಿರಾದರ, ಬಸವರಾಜ ಜಾಲಿಹಾಳ, ಚನ್ನಮ್ಮ ಬಳಗದ ನಿಂಗಮ್ಮ ಬೇವೂರ, ಕಮಲಾಕ್ಷಿ ಗೌಡರ ಇನ್ನು ಅನೇಕರು ಉಪಸ್ಥಿತರಿದ್ದರು.
ಶಿಕ್ಷಕಿ ಬಿಂಧು ವಚನ ಪ್ರಾರ್ಥಿಸಿದರು, ಮಹಾಂತೇಶ ಬಮ್ಮಸಾಗರ ಸ್ವಾಗತಿಸಿದರು, ಪತ್ರಕರ್ತ ಮಲ್ಲಿಕಾರ್ಜುನ ಹೊಸಮನಿ ನಿರೂಪಿಸಿದರು.

loading...