ಪೈಪ್‌ಲೈನ್‌ ಒಡೆದು ಅಧಿಕ ನೀರು ಪೋಲು

0
9
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ಕೊರ್ಲಹಳ್ಳಿ ಪಂಪ್‌ಹೌಸ್‌ಯಿಂದ ಪಟ್ಟಣದ ಕುಡಿಯುವ ನೀರು ಸರಬುರಾಜು ಘಟಕಕ್ಕೆ ಪೂರೈಸುವ ಪೈಪ್‌ಲೈನ್‌ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದರೂ ಇದುವರೆಗೂ ಪೈಪ್‌ಲೈನ್‌ ದುರಸ್ತಿ ಕಾರ್ಯ ಮಾತ್ರ ನಡೆದಿಲ್ಲ. ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದ ಬಳಿ ಕಳೆದ ಒಂದು ವಾರದಿಂದ ಕುಡಿಯುವ ನೀರು ಪೋಲಾಗುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪೈಪ್‌ಲೈನ್‌ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಬೆಣ್ಣಿಹಳ್ಳಿ ಗ್ರಾಮದಿಂದ ಕೊರ್ಲಹಳ್ಳಿ ವರೆಗೂ ಐದಾರು ಕಡೆ ಪಂಪ್‌ಲೈನ್‌ ದುರಸ್ತಿಯಲ್ಲಿದ್ದು ನೀರು ಕಾರಂಜಿಯಂತೆ ಪೋಲಾಗುತ್ತಿದೆ.

loading...