ಪ್ರತ್ಯೇಕತೆ ಬಿಟ್ಟು ಅಭಿವೃದ್ಧಿ ಬಗ್ಗೆ ಶಾಸಕರು ಮಾತನಾಡಲಿ :ಹೊಸಮನಿ

0
224
ಪ್ರತ್ಯೇಕತೆ ಬಿಟ್ಟು ಅಭಿವೃದ್ಧಿ ಬಗ್ಗೆ ಶಾಸಕರು ಮಾತನಾಡಲಿ :ಹೊಸಮನಿ
ಕನ್ನಡಮ್ಮ ಸುದ್ದಿ-ಸಂಕೇಶ್ವರ: ಬಜೆಟ್ ದಲ್ಲಿ ಅನ್ಯಾಯವಾಯಿತು ಎಂದು ಪ್ರತ್ಯೇಕತೆ ಬಗ್ಗೆ ಮಾತನಾಡುವ ಉತ್ತರ ಕರ್ನಾಟಕದ ಶಾಸಕರು ಮೊದಲು ತಮ್ಮ ಅವಧಿಯಲ್ಲಿ ಏನು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಹೇಳಲಿ ಆಮೇಲೆ ರಾಜ್ಯ ಒಡೆಯುವ ಹೇಳಿಕೆ ನೀಡಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹುಕ್ಕೇರಿ ತಾಲೂಕು ಯುವ ವೇದಿಕೆ ಅಧ್ಯಕ್ಷ ದಿಲೀಪ ಹೊಸಮನಿ ಆಗ್ರಹಿಸಿದರು .
ಗುರುವಾರ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಯಾವುದೇ ಕಾರಣಕ್ಕೂ ರಾಜ್ಯ ಒಡಯಲು ಬಿಡುವುದಿಲ್ಲ .ಕರ್ನಾಟಕ ಏಕೀಕರಣಕ್ಕೆ ಉ.ಕ ಜನತೆಯ ಹೋರಾಟ ಬಹಳಷ್ಟುಯಿದೆ.ಕೇವಲ ಬಜೆಟ್ ದಲ್ಲಿ ತಾರತಮ್ಯ ಆಗಿದೆ ಎಂದು ಉ.ಕ ಶಾಸಕರು ಮಾತನಾಡುವುದನ್ನು ಬೀಟು ಅಭಿವೃದ್ಧಿ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿ ಮನೆಯ ಮುಂದೆ ಧರಣಿ ಕುಳಿತು ಯೋಜನೆಗಳನ್ನು ತರಬೇಕು .
ಕೆಲ ರಾಜಕಾರಣಿಗಳು ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಇಲ್ಲ ಸಲ್ಲದ ಹೇಳಿಕೆ ನೀಡಿ ರಾಜ್ಯ ಪ್ರತ್ಯೇಕತೆ ಬಗ್ಗೆ ಹೇಳುತ್ತಿದ್ದಾರೆ .ಈ ಭಾಗದ ಶಾಸಕರು ಸಚಿವ ಸ್ಥಾನ ಸಿಗದಿದ್ದಾಗ ಅನ್ಯಾಯವಾಯಿತೆಂದು ಹೇಳುತ್ತಾರೆ .ಆದರೆ ಈ ಭಾಗದ ಶಾಸಕರ ಕೋಡುಗೆ ಏನು ಎಂಬುದನ್ನು ಮೊದಲು ತಿಳಿಸಲಿ ಎಂದು ಪ್ರತ್ಯೇಕ ರಾಜ್ಯದ ಬಗ್ಗೆ ಕೂಗು ಎಬ್ಬಿಸುವರ ವಿರುದ್ದ ಹರಿಹಾಯ್ದರು.
ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಯೋಚಿಸಲಿ ರಾಜ್ಯ ಸರಕಾರದ ಮೇಲೆ ಒತ್ತಡ ಹಾಕುವು ಕಾರ್ಯವಾಗಬೇಕಿದೆ.ಬರುವ ದಿನಗಳಲ್ಲಿ ನಮ್ಮ ಸಂಘಟನೆ ವತಿಯಿಂದ ರಾಜ್ಯ ಸರಕಾರದ ಮಲತಾಯಿ ಧೋರಣೆ ಬಗ್ಗೆ ಹೋರಾಟ ಮಾಡಲಾಗುವುದು ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ .
loading...