ಪ್ರವಾಹ : ಮುನ್ನಚ್ಚರಿಕೆ ಕ್ರಮಕೈಗೊಳ್ಳಲು ಡಿಸಿ ಸೂಚನೆ

0
19
loading...

ಕನ್ನಡಮ್ಮ ಸುದ್ದಿ-ಬಾಗಲಕೋಟೆ: ಮುಂಗಾರು ಮಾನ್ಸೂನ್‌ ಪ್ರಾರಂಭವಾಗಿದ್ದು, ಜಿಲ್ಲೆಯ ತ್ರಿವಳಿ ನದಿಗಳಾದ ಕೃಷ್ಣ, ಘಟಪ್ರಭೆ ಮತ್ತು ಮಲಪ್ರಭೆ ನದಿಗಳಿಗೆ ನೀರು ಬರುತ್ತಿದ್ದು, ಮುಂಬರುವ ದಿನಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ, ನಿಯಂತ್ರಿಸಲು ಅಧಿಕಾರಿಗಳು ಸನ್ನದ್ದರಾಗುವಂತೆ ಜಿಲ್ಲಾಧಿಕಾರಿಗಳಾದ ಕೆ.ಜಿ.ಶಾಂತಾರಾಮ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಪ್ರಕೃತಿ ವಿಕೋಪ ಹಾಗೂ ಪ್ರವಾಹ ನಿಯಂತ್ರಣ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರವಾಹ ಉಂಟಾಗುವ ನದಿ ದಡದಲ್ಲಿರುವ ಹಾಗೂ ಮುಳುಗಡೆಯಾಗುವ ಪ್ರದೇಶದಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುಂಜಾಗೃತಾ ಕ್ರಮಕೈಗೊಳ್ಳುವದರ ಜೊತೆಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಆಯಾ ತಹಶೀಲ್ದಾರರು ಪ್ರವಾಹ ನಿಯಂತ್ರಣಕ್ಕೆ ಮುನ್ನಚ್ಚರಿಕೆ ಕ್ರಮವಾಗಿ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲು ಅಗತ್ಯ ಕ್ರಿಯಾಯೋಜನೆ ರೂಪಿಸಿಕೊಳ್ಳುವಂತೆ ಸೂಚಿಸಿದರು.
ಕ್ರೀಯಾ ಯೋಜನೆಯನ್ನು ರೂಪಿಸುವಲ್ಲಿ ಎಲ್ಲ ಇಲಾಖೆಗಳ ಮಾಹಿತಿ ಪಡೆದುಕೊಂಡು ಪೂರ್ಣ ಪ್ರಮಾಣದ ಕ್ರೀಯಾಯೋಜನೆ ರೂಪಿಸಬೇಕು. ಪ್ರವಾಸ ಉಂಟಾದಲ್ಲಿ ವಿಳಂಬ ಮಾಡದೇ ಕೆಲಸ ನಿರ್ವಹಿಸಬೇಕು. ತಹಶೀಲ್ದಾರ, ಪಿಡಬ್ಡುಡಿ ಹಾಗೂ ಕುಡಿಯುವ ನೀರಿನ ಸರಬರಾಜು ಇಲಾಖೆಯವರು ಜಂಟಿಯಾಗಿ ಪ್ರವಾಹದಿಂದ ಬಾದಿತಗೊಳಗಾಗುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ನದಿಗಳ ದಡದಲ್ಲಿರುವ ಗ್ರಾಮಗಳಲ್ಲಿ ಈಗಾಗಲೇ ಕೆಲವು ಗ್ರಾಮಗಳಲ್ಲಿ ಯಾಂತ್ರಿಕ ಬೋಟ ಹಾಗೂ ನಾವೆಗಳು ಲಭ್ಯವಿದ್ದು, ಅವುಗಳನ್ನು ಪರಿಶೀಲಿಸುವುದು ಹಾಗೂ ಪ್ರವಾಹ ಪರಿಸ್ಥಿತಿ ತಕ್ಕಂತೆ ತಕ್ಷಣವೇ ಬೋಟಗಳ ಬೇಡಿಕೆ ನೀಡುವದಲ್ಲದೇ ಸದ್ಯ ಲಭ್ಯವಿರುವ ಬೋಟ್‌ಗಳನ್ನು ಕಡ್ಡಾಯವಾಗಿ ಪರಿಶೀಲಿಸಿ ಸುಸ್ಥಿತಿಯಲ್ಲಿ ಇದ್ದ ಬಗ್ಗೆ ದೃಢೀಕರಿಸಿಕೊಳ್ಳಬೇಕು ಎಂದರು.
ಆಲಮಟ್ಟಿ, ನಾರಾಯಣಪುರ, ನವೀಲುತೀರ್ಥ ಹಾಗೂ ಹಿಪ್ಪರಗಿ ಜಲಾಶಯದ ಇಂಜಿನೀಯರ್‌ಗಳು ಜಲಾಶಯದ ಅಧಿಕಾರಿಗಳೊಡನೆ ಸತತ ಸಂಪರ್ಕವಿಟ್ಟುಕೊಂಡು ಹೊರಹರಿವು ಸ್ಥಿತಿಗತಿಯನ್ನು ತಪ್ಪದೇ ಪ್ರತಿದಿನ ಗಮನಿಸುವಂತೆ ಅಭಿಯಂತರರಿಗೆ ತಿಳಿಸಿದರು. ಎಲ್ಲ ತಹಶೀಲ್ದಾರ ಕಚೇರಿ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಗಳಲ್ಲಿ 24*7 ಕಂಟ್ರೋಲ್‌ ರೂಮ್‌ ಪ್ರಾರಂಭಿಸಬೇಕು. ಪ್ರವಾಹ ಪರಿಸ್ಥಿತಿ ಬಗ್ಗೆ ಬಾಧಿತಗೊಳ್ಳುವ ಎಲ್ಲ ಗ್ರಾಮಗಳಿಗೆ ತಹಶೀಲ್ದಾರ ಹಾಗೂ ಉಪವಿಭಾಗಾಧಿಕಾರಿಗಳು ಬೇಟಿ ನೀಡಿ ಗ್ರಾಮದ ಬಾಧಿತಗೊಳ್ಳುವ ಕುಟುಂಬ, ಜಾನುವಾರು ಹಾಗೂ ಹಾನಿಗೊಳಗಾಗಬಹುದಾದ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸ್ಥಳದ ಆಯ್ಕೆ ಆಹಾರ, ದಾನ್ಯ ಸಂಗ್ರಹಣೆ, ಗಂಜಿ ಕೇಂದ್ರಕ್ಕಾಗಿ ಪೂರ್ವಸಿದ್ದತೆಯನ್ನು ಮಾಡಿಕೊಂಡು ಪ್ರವಾಹದ ಮುಂಜಾಗೃತ ಕ್ರಮಕೈಗೊಳ್ಳಲು ಕಟ್ಟುನಿಟ್ಟಿನ ಕ್ರಮ ಜರುಗಿಸತಕ್ಕದೆಂದು ಅವರು ತಿಳಿಸಿದರು.
ಕೃಷ್ಣಾ ನದಿಯಿಂದ ಜಮಖಂಡಿ ತಾಲೂಕಿನಲ್ಲಿ ಮುತ್ತೂರು ಮತ್ತು ಕಂಕಣವಾಡಿ ಗ್ರಾಮಗಳು ಸಂಪೂರ್ಣ ಬಾದಿತಗೊಳಗಾಗುತ್ತಿದ್ದರೆ, 19 ಗ್ರಾಮಗಳು ಬಾಗಶಃ ಬಾದಿತಗೊಳಗಾಗುತ್ತಿವೆ. ಬೀಳಗಿ ತಾಲೂಕಿನಲ್ಲಿ 10 ಗ್ರಾಮಗಳು ಬಾಗಶಃ ಬಾದಿತಕ್ಕೆ ಒಳಗಾಗುತ್ತಿದ್ದು, ಆ ಗ್ರಾಮಗಳು ಈಗಾಗಲೇ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಗೊಂಡಿದ್ದು, ಬೆಳೆ ಹಾನಿ ಮಾತ್ರ ಆಗಲಿದೆ. ನಾರಾಯಣ ಜಲಾಯಶದ ಪ್ರಭಾವದಿಂದ ಬಾಗಲಕೋಟ ತಾಲೂಕಿನಲ್ಲಿ 18 ಹಳ್ಳಿಗಳು ಬಾದಿತಗೊಳಗಾಗುತ್ತಿದ್ದು, ಬೊಮ್ಮನಗಿಯಲ್ಲಿ ಮಾತ್ರ 8 ಕುಟುಂಬಗಳ ಪ್ರವಾಹ ಬಂದಾಗ ಸ್ಥಳಾಂತರಗೊಳಿಸಬೇಕಾಗುತ್ತದೆ. ಬಾದಾಮಿ ತಾಲೂಕಿನಲ್ಲಿ ನಾರಾಯಣಪುರ ಜಲಾಶದ ಪ್ರಭಾವದಿಂದ ದನ್ನೂರಿನ 70 ಕುಟುಂಬಗಳಿಗೆ ಮಾತ್ರ ಬಾದೆಗೊಳಗಾಗುತ್ತಿವೆ ಎಂದು ಸಭೆಗೆ ಮಾಹಿತಿ ನೀಡಿದರು.
ಮುಧೋಳ ತಾಲೂಕಿನಲ್ಲಿ ಘಟಪ್ರಭವಾ ನದಿಯ ಪ್ರಭಾವದಿಂದ 9 ಗ್ರಾಮಗಳು ಬಾಗಶಃ ಬಾದೆಗೊಳಗಾಗುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ನಂದಗಾವ, ಚನಾಳ ಮತ್ತು ಮಳಲಿ ಗ್ರಾಮಗಳು ಬಾದೆಗೊಳಗಾಗುತ್ತಿವೆ. ಅದೇ ರೀತಿ ಬೀಳಗಿ ತಾಲೂಕಿನ 8 ಗ್ರಾಮಗಳಿಗೆ ಬಾದೆಗೊಳಗಾಗುತ್ತಿವೆ. ಬಾಗಲಕೋಟೆ ತಾಲೂಕಿನಲ್ಲಿ ಮಲಪ್ರಭಾ ನದಿಯ ಪ್ರವಾಹದಿಂದ 18 ಪೂರ್ಣ ಹಾಗೂ 20 ಬಾಗಶಃ ಬಾದೆಗೊಳಗಾಗುತ್ತಿವೆ ಎಂದು ಆಯಾ ತಹಶೀಲ್ದಾರರು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

loading...