ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ಬೀಗ ಹಾಕಿ ಪ್ರತಿಭಟನೆ

0
12
loading...

ಕನ್ನಡಮ್ಮ ಸುದ್ದಿ-ಬಾಗಲಕೋಟೆ: ತಾಲೂಕಿನ ಛಬ್ಬಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾರ್ಯದರ್ಶಿ ಲಕ್ಷ್ಮಣ ಹಳೆಮನಿಯ ಅಕ್ರಮ ಆಡಳಿತದ ತನಿಖೆ ಮಾಡಬೇಕೆಂದು ಸೊಕನಾದಗಿ, ಛಬ್ಬಿ, ಯಡಹಳ್ಳಿ ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಿದರು.
ಸಹಕಾರ ಸಂಘದ ನಿಯಮಾವಳಿಗಳನ್ನು ಗಾಳಿಗೆ ತೂರಿ ರೈತರಿಗೆ, ನಿರ್ದೇಶಕರಿಗೆ ಹಾಗೂ ಗ್ರಾಹಕರಿಗೆ ಯಾವುದೇ ಸೂಚನೆ ನೀಡದೇ ಚುನಾವಣೆ ಘೋಷಣೆ ಮಾಡಿದ ಹಿನ್ನಲೆಯಲ್ಲಿ ರೋಷಗೊಂಡ ಗ್ರಾಮಸ್ಥರು ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ಬೀಗ ಹಾಕಿ ಪ್ರತಿಭಟಿಸಿ ನಂತರ ಉಪನಿಬಂಧಕರು ಸಹಕಾರಿ ಇಲಾಖೆ ಇವರಿಗೆ ಮನವಿ ಸಲ್ಲಿಸಿದ್ದರು. ಇದುವರೆಗೂ ಚುನಾವಣೆ ಮುಂದೂಡಲಾಗಿದೆ ಎಂಬ ಬಗ್ಗೆಯಾಗಲಿ, ನೂತನ ಕಾರ್ಯದರ್ಶಿ ನೇಮಿಸುವುದಾಗಲಿ ಆಗಿಲ್ಲ. ಮೌಖಿಕವಾಗಿ ಉಪನಿಬಂಧಕರು ಕಾರ್ಯದರ್ಶಿಯನ್ನು ನೇಮಿಸಲಾಗಿದೆ ಎನ್ನುತ್ತಿದ್ದು, ಆದರೆ ಸುಮಾರು 10-15 ದಿನಗಳಾದರೂ ಇದುವರೆಗೆ ಸಂಘದ ಕಚೇರಿಗೆ ಕಾರ್ಯದರ್ಶಿ ನೇಮಕಗೊಂಡಿಲ್ಲ.
ಅನೇಕ ಅಕ್ರಮ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಲಕ್ಷ್ಮಣ ಹಳೆಮನಿ ಅಕ್ರಮವಾಗಿ ಸಂಘದ ಕಚೇರಿ ತೆರೆದು ಕಾರ್ಯನಿರ್ವಹಿಸುತ್ತಿದ್ದಾನೆ. ಈ ಕುರಿತು ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿಗಳಿಗೆ ಮನಿವ ಸಲ್ಲಿಸಿ ತನಿಖೆಗೆ ಆಗ್ರಹಿಸಿದ್ದಾರೆ. ಮನಿಸಲಿಸಿದವರಲ್ಲಿ ಗ್ರಾ.ಪಂ ಸದಸ್ಯ ಮೇಲಗಿರಿಯಪ್ಪ ನೀಲಣ್ಣವರ, ಸಂಘದ ನಿರ್ದೇಶಕರಾದ ರಾಮಣ್ಣ ತಳವಾರ, ಬಿ.ಎಪ್‌.ಪಾಟೀಲ, ಶಿವಾನಂದ ಬೀಳಗಿ, ರಮೇಶ ಮೇಟಿ, ಅಶೋಕ ಪಾಟೀಲ, ಸುರೇಶ ರಾಠೋಡ, ಎಂ.ಸಿ.ಮುರನಾಳ, ವೆಂಕಪ್ಪ ಸಂಶಿ, ಶರಣಪ್ಪ ನೀಲಣ್ಣವರ ಮುಂತಾದವರಿದ್ದರು.

loading...