ಫಿಪಾ ವಿಶ್ವಕಪ್: ಎಲ್ಲರ ಮನ ಗೆದ್ದ ಪ್ರಾನ್ಸ್ ಸ್ಟಾರ ಆಟಗಾರ ಬಾಪೆ

0
20
loading...

ಕಜಾನ್ : ಅರ್ಜೆಂಟೀನಾ ವಿರುದ್ದ ಎರಡು ಗೋಲು ದಾಖಲಿಸಿ ಪ್ರಾನ್ಸ್ ಗೆಲುವಿಗೆ ಪ್ರಮುಖ ಕಾರಣರಾದ ಕೈಲ್ಯಾನ್ ಬಾಪೆ ಮೈದಾನದಲ್ಲಿ ಎಲ್ಲರ ಹೃದಯವನ್ನು ಗೆದ್ದಿದ್ದಲ್ಲದೆ ಮೈದಾನದ ಹೊರಗೂ ಸಾಕಷ್ಟು ಮೆಚ್ಚುಗೆ ಗಳಿಸಿದ್ದಾರೆ.
೧೯ ವರ್ಷದ ಬಾಪೆ ಈ ವಿಶ್ವಕಪ್ ನಲ್ಲಿ ತನಗೆ ಬರುವ ಎಲ್ಲ ಸಂಭಾವನೆಯನ್ನು ವಿಕಲಚೇತನ ಮಕ್ಕಳಿಗೆ ನೀಡುವದಾಗಿ ಹೇಳಿದ್ದಾರೆ.ಈ ಮೂಲಕ ರಷ್ಯದಲ್ಲಿ ಬಾಪೆ ಎಲ್ಲರ ಮನದಲ್ಲಿ ಜಾಗ ಮಾಡಿಕೊಂಡಿದ್ದಾರೆ.
ವಿಕಲಚೇತನ ಮಕ್ಕಳ ನೆರವಿಗೆ ಬರುವ ಕ್ಷೆಮಾಭಿವೃದ್ದಿ ಸಂಸ್ಥೆ ಯೊಂದಕ್ಕೆ ತಮ್ಮಗೆ ಬರುವ ಅಂತರಾಷ್ಟ್ರೀಯ ಪಂದ್ಯಗಳ ಶುಲ್ಕ ವನ್ನು ನೀಡಿ ಮಕ್ಕಳಿಗೆ ಪ್ರೊತ್ಸಾಹಕ್ಕೆ ಸಹಾಯ ಮಾಡುವಾದಾಗಿ ಹೇಳಿದ್ದಾರೆ. ಈ ಮೂಲಕ ಫುಟ್ಬಾಲ್ ಅಭಿಮಾನಿಗಳ ಮನವನ್ನು ಗೆದ್ದಿದ್ದಾರೆ.
ಒಂದು ವೇಳೆ ಪ್ರಾನ್ಸ ವಿಶ್ವಕಪ್ ಗೆದ್ದರೆ ಅಲ್ಲಿ ಸಿಗುವ ಬೋನಸ್ ಎರಡು ಕೋಟಿಗೂ ಹೆಚ್ಚು ಹಣವನ್ನು ದಾನ ಮಾಡುವದಾಗಿ ಹೇಳಿದ್ದಾರೆ.

loading...