ಫಿಪಾ ವಿಶ್ವಕಪ್: ಸ್ಪೇನ್ ಗೆ ಶಾಕ್ ನೀಡಿದ ರಷ್ಯಾ, ದಿಗ್ಗಜ ತಂಡಗಳು ಒಂದೊಂದಾಗಿ ಮನೆಯತ್ತ

0
59
loading...

ಲುಜನಕಿ:ಫಿಪಾ ವಿಶ್ವಕಪ್‌ನ ಅತಿಥೇಯ ವಹಿಕೊಂಡಿದ್ದ ರಷ್ಯ ಇಂದು ನಡೆದ ಸ್ಪೇನ್ ವಿರುದ್ಧ ರೋಚಕ ಪಂದ್ಯದಲ್ಲಿ ಪೆನಾಲ್ಟಿ ಯಲ್ಲಿ ಅದ್ಭುತ ಗೋಲು ದಾಖಲಿಸುವ ಮೂಲಕ ಕ್ವಾಟರ ಫೈನಲ್‌ ಗೆ ಲಗ್ಗೆ ಇಟ್ಟಿದೆ.
ಪಂದ್ಯ ನಿಗದಿತ ಸಮಯ ದಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲು ದಾಖಲಿಸಿದ್ದವು ನಂತರ ೩೦ ನಿಮಿಷಗಳ ಹೆಚ್ಚಿನ‌ ಸಮಯ ನೀಡಲಾಯಿತು. ಈ ಸಮಯದಲ್ಲಿ ಸ್ಪೇನ್ ಸಾಕಷ್ಟು ಪ್ರಯತ್ನ ಮಾಡಿದರು ಕೂಡಾ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಹೆಚ್ಚಿನ ಸಮಯ ದಲ್ಲಿ ಮಿಂಚಿನ ಆಟದ‌ ಪ್ರದರ್ಶನ ನೀಡಿದ ರಷ್ಯ ಸಮಬಲದಲ್ಲಿಯೇ ಎಕ್ಸ್ಟ್ರಾ ಸಮಯ ಮುಗಿಸಿತು.
ನಂತರ ಉಭಯ ತಂಡಗಳಿಗೆ ಪೆನಾಲ್ಟಿ ನೀಡಲಾಯಿತು. ಸ್ಪೇನ್ ಮೂರು ಗೋಲು ದಾಖಲಿಸಿದರೆ ರಷ್ಯ ನಾಲ್ಕು ಗೋಲು ದಾಖಲಿಸಿ ಗೆಲುವಿನ ಕೇಕೆ ಹಾಕಿ ಸಂಭ್ರಮಿಸಿತು.
ಫಿಪಾ ವಿಶ್ವಕಪ್ ಇತಿಹಾಸದಲ್ಲಿ ರಷ್ಯಾ ೨೭ ನೇ ಪೆನಾಲ್ಟಿಗೆ ಕಾರಣವಾಯಿತು.

loading...