ಫೀಫಾ ವಿಶ್ವಕಪ್‍ಗೆ ಮುತ್ತಿಕ್ಕಿದ ಫ್ರಾನ್ಸ್

0
8
loading...

ಮಾಸ್ಕೋ: ತೀವ್ರ ಕುತೂಹಲ ಮೂಡಿಸಿದ್ದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕ್ರೊವೇಶಿಯಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಫ್ರಾನ್ಸ್ ಚಾಂಪಿಯನ್ ಆಗಿ ಫಿಫಾ ವಿಶ್ವಕಪ್‍ಗೆ ಮುತ್ತಿಕ್ಕಿದೆ.
ಫೈನಲ್ ಪಂದ್ಯದಲ್ಲಿ ಕ್ರೊವೇಶಿಯಾ ವಿರುದ್ಧ ಫ್ರಾನ್ಸ್ 4-2 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಫ್ರಾನ್ಸ್ ಪರ ಮಾರಿಯೋ ಮಾಂಡ್ಜುಕಿಕ್, ಆಂಟೊಯಿನ್ ಗ್ರೀಜ್ಮನ್, ಪಾಲ್ ಪೋಗ್ಬಾ, ಕ್ಲೈನ್ ಮೆಬ್ಯಾಪ್ ತಲಾ ಒಂದು ಗೋಲು ಬಾರಿಸಿದ್ದಾರೆ.
ಕ್ರೊವೇಶಿಯಾ ಪರ ಇವನ್ ಪೆರಿಸಿಕ್ ಮತ್ತು ಮಾರಿಯೋ ಮಂಡ್ಜುಕಿಕ್ ತಲಾ ಒಂದು ಗೋಲು ಬಾರಿಸಿದ್ದಾರೆ.

loading...