ಬಜೆಟ್ ಮಂಡನೆಗೂ ಮುನ್ನವೇ ಶಾಸ್ತç ಕೇಳಿದ ಸಚಿವ ಹೆಚ್.ಡಿ ರೇವಣ್ಣ..!

0
39
loading...

ಬೆಂಗಳೂರು:ಸಾಮಾನ್ಯವಾಗಿ ಹಿಂದಿನ ಸರ್ಕಾರಗಳು ಶುಕ್ರವಾರ ಬಜೆಟ್ ಮಂಡಿಸಿರುವುದನ್ನು ನೋಡಿದ್ದೆÃವೆ.ಕಾರಣ, ಶನಿವಾರ ಮತ್ತು ಭಾನುವಾರ ಬಜೆಟ್ ಪÅಸ್ತಕ ಓದಲು ಅನುಕೂಲವಾಗಲಿ ಎಂಬ ಉದ್ದೆÃಶದಿಂದ ಮಂಡನೆ ಮಾಡಲಾಗುತ್ತಿತ್ತು.
ಆದರೆ, ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದ ನಂತರ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗುರುವಾರ ಬಜೆಟ್ ಮಂಡಿಸಲಿದ್ದಾರೆ.
ಎಲ್ಲದಕ್ಕೂ ವಾಸ್ತು ಮತ್ತು ಮುಹೂರ್ತ ನೋಡುವ ಸಚಿವ ಹೆಚ್.ಡಿ ರೇವಣ್ಣ,ಬಜೆಟ್ ಮಂಡನೆಗೂ ಮುನ್ನವೇ ಶಾಸ್ತç ಕೇಳಿದ್ದ ರಂತೆ.ಶುಕ್ರವಾರ ಅಷ್ಟಮಿ ತಿಥಿ ಇರುವ ಕಾರಣ ಶುಭ ಕಾರ್ಯವನ್ನು ಈ ದಿನ ಮಾಡಲು ಮುಂದಾಗುವುದಿಲ್ಲ.
ಜುಲೈ ೫ರಂದು ಸಪ್ತಮಿ ತಿಥಿ ಪÇರ್ವಾಭದ್ರ ನಕ್ಷತ್ರದ ಕನ್ಯಾ ಲಗ್ನದ ಶುಭ ಗಳಿಗೆಯಲ್ಲಿ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.
ಈ ಹಿಂದೆಯೂ ರಾಹುಕಾಲದ ಬಳಿಕವೇ ಹೆಚ್.ಡಿ ರೇವಣ್ಣ ಪ್ರಮಾಣವಚನ ಸ್ವಿÃಕರಿಸಿದ್ದರು.ಅದೇ ರೀತಿ ಸಿಎಂ ಆಗಿ ಕುಮಾರ ಸ್ವಾಮಿ ಪ್ರಮಾಣವಚನ ಸ್ವಿÃಕರಿಸಿದ್ದು ಶುಭ ಗಳಿಗೆಯಲ್ಲೆÃ.ಎರಡು ದಿನಗಳ ಹಿಂದೆ ಹಾಸನದಲ್ಲಿ ಕಟ್ಟಡ ಶಂಕು ಸ್ಥಾಪನೆ ವೇಳೆ ವಾಸ್ತು ಪ್ರಕಾರ ಪÇಜೆ ಮಾಡುತ್ತಿಲ್ಲ ಎಂದು ಅರ್ಚಕರಿಗೆ ಕ್ಲಾಸ್ ತೆಗೆದುಕೊಂಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.
ಹೀಗಾಗಿ ದೈವಭಕ್ತರಾಗಿರುವ ದೊಡ್ಡಗೌಡರ ಕುಟುಂಬ ಯಾವುದೇ ಕೆಲಸಕ್ಕಾದರೂ ನಕ್ಷತ್ರ,ಗಳಿಗೆ ನೋಡಿಯೇ ತಮ್ಮ ಮುಂದಿನ ಕೆಲಸ ಮಾಡುವುದು ಎಂಬುದು ತಿಳಿದ ವಿಷಯವೇ ಆಗಿದೆ.
ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ತೀವ್ರ ಕುತೂಹಲವನ್ನು ಹುಟ್ಟು ಹಾಕಿದ್ದು, ಯಾವ ಪ್ರಮಾಣದಲ್ಲಿ ರೈತರ ಸಾಲಮನ್ನಾ ಮಾಡಲಾಗುತ್ತೆ ಎಂವ ನಿರೀಕ್ಷೆಯನ್ನು ಮೂಡಿಸಿದೆ.

loading...