ಬಲಿಷ್ಠ ಆಟಗಾರರ ಫುಟ್ಬಾಲ್ ಚಾಂಪಿಯನ್ ಕನಸಿಗೆ ತಣ್ಣೀರು

0
16
loading...

ಮಾಸ್ಕೋ:ರಷ್ಯಾ ವಿಶ್ವಕಪ್ ನ ಮಹತ್ವದ ಪಂದ್ಯಗಳಲ್ಲಿ ಎರಡು ಬಲಿಷ್ಠ ತಂಡಗಳು ಟೂರ್ನಿಯಿಂದ ಹೊರ ನಡೆದಿದ್ದು ಫುಟ್ಬಾಲ್ ಅಭಿಮಾನಿಗಳಿಗೆ ನಿರಾಸೆವುಂಟಾಗಿದೆ. ಪ್ರಸಕ್ತ ಸಾಲಿನ ಫಿಫಾ ವಿಶ್ವಕಪ್​ ಫುಟ್ಬಾಲ್​ ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶ ಹೊರಬರುತ್ತಿದ್ದು, ನಿನ್ನೆಯ 16ನೇ ಸುತ್ತಿನ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳು ಟೂರ್ನಿಯಿಂದ ಹೊರನಡೆದಿವೆ.
ಹೌದು, ಪ್ರಸಕ್ತ ಸಾಲಿನಲ್ಲಿ ಟ್ರೋಫಿ ಗೆಲ್ಲುವ ಫೆವರಿಟ್ ತಂಡವಾಗಿದ್ದ ಅರ್ಜೆಂಟೈನಾ ಹಾಗೂ ಪೋರ್ಚುಗಲ್​ ತಂಡಗಳು ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿವೆ.
ಫಿಫಾ ವಿಶ್ವಕಪ್​​ನ ಮೊದಲ ಫ್ರೀ-ಕ್ವಾರ್ಟರ್​​ ಫೈನಲ್​ ಪಂದ್ಯದಲ್ಲಿ ಮೆಸ್ಸಿ ನೇತೃತ್ವದ ಅರ್ಜೆಂಟೈನಾ ತಂಡ ಫ್ರಾನ್ಸ್​ ವಿರುದ್ಧ 4-3 ಅಂತರದಿಂದ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದದೆ. ಫ್ರಾನ್ಸ್​ನ ಆಕ್ರಮಣಕಾರಿ ಆಟಗಾರರಾದ ಗ್ರಿಜ್​​ಮನ್​​​, ಪೌಲ್ ಪೋಗ್ಬಾ, ಉಮ್​​​​​ಟಿಟಿ ಮುಂದೆ ಮಿಸ್ಸಿ ಆಟ ನಡೆಯಲಿಲ್ಲ. ಬಹಳಷ್ಟು ಕಷ್ಟ ಪಟ್ಟು 16ರ ಘಟ್ಟಕ್ಕೆ ತಲುಪಿದ್ದ ಮೆಸ್ಸಿ ಪಡೆ ವಿಶ್ವಕಪ್​ನಿಂದ ಸೋತು ಹೊರ ಬಿದ್ದಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

loading...