ಬಸವೇಶ್ವರ ಇಂಜಿನಿಯರ್ ಕಾಲೇಜ್‌ಗೆ ಉಗಾಂಡಾ ದೇಶದ ಎರಡನೇ ಉಪಪ್ರಧಾನಿ ಡಾ.ಕಿರುಂಡಾ ಕಿವಿಜಂಜಾ ಭೇಟಿ

0
6
loading...

 

ಬಾಗಲಕೋಟೆ: ಬಸವೇಶ್ವರ ಇಂಜಿನಿಯರಿಂಗ್ ಕಾಲೇಜುಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಶೀಲತಾ ಪಾರ್ಕ ಅವರು ಕೃಷಿವಲಯದ ಉಪಯೋಗಕ್ಕಾಗಿ ವಿನ್ಯಾಸಗೊಳಿಸಿದ ತಂತ್ರಜ್ಞಾನವನ್ನು ತಿಳಿದುಕೊಳ್ಳುವ ಸಲುವಾಗಿ ಮತ್ತು ಉಗಾಂಡಾ ದೇಶದ ಗ್ರಾಮೀಣ ಜನತೆಗೆ ಅನುಕೂಲವಾಗುವ ದಿಶೆಯಲ್ಲಿ ಸೂಕ್ತವಾಗಿ ಆ ತಂತ್ರಜ್ಞಾನವನ್ನು ಅಳವಡಿಸುವ ಉದ್ದೆÃಶದಿಂದ ಉಗಾಂಡಾ ದೇಶದ ಎರಡನೇ ಉಪಪ್ರಧಾನಿಗಳಾದ ಡಾ. ಕಿರುಂಡಾ ಕಿವಿಜಂಜಾ ಅವರ ನೇತೃತ್ವದಲ್ಲಿ ೮-ಜನರ ನಿಯೋಗ ಭೇಟಿಕೊಟ್ಟಿತ್ತು.
ಬಿಇಸಿಯ ಜೊತೆಗೆ ಒಡಂಬಡಿಕೆ ಮಾಡಿಕೊಂಡಿರುವ ಬೆಂಗಳೂರಿನ ಪ್ಲೆಕ್ಜಿಟ್ರಾನ್ ಸಂಸ್ಥೆಯ ಸಿಇಓ ಡಾ. ಆರ್.ಎಸ್. ಹಿರೇಮಠ ಅವರೊಂದಿಗೆ ಸಾಮಾಜಿಕ ಸೃಜನಶೀಲ ಪ್ರಯತ್ನಗಳ ನವೀಕರಿಸಬಹುದಾದ ಇಂಧನಗಳು, ಆಹಾರ ತಂತ್ರಜ್ಞಾನಗಳಲ್ಲಿ ಸಂಶೋಧನೆ ಮತ್ತು ತಾಂತ್ರಿಕ ಅಭಿವೃದ್ಧಿಯ ಸಾಧ್ಯಾಸಾಧ್ಯತೆಗಳ ಅವಕಾಶಗಳ ಬಗ್ಗೆ ತಿಳಿದುಕೊಳ್ಳವುದು ಈ ಭೇಟಿಯ ಗುರಿಯಾಗಿತ್ತು. ಈ ಹಿನ್ನಲೆಯಲ್ಲಿ ನಿಯೋಗವು ಪ್ರಾಚಾರ್ಯರೊಂದಿಗೆ ಸ್ಟೆÃಪ್ ಮತ್ತು ಸ್ಕಾಡಾ ಲ್ಯಾಬಗಳಿಗೆ ಭೇಟಿ ನೀಡಿ, ಇಲ್ಲಿಯ ತಾಂತ್ರಿಕ ಸಂಶೋಧನೆಗಳು ಮತ್ತು ಅಭಿವೃದ್ಧಿಗಳನ್ನು ಪರಿಶೀಲಿಸಿದರು, ಇದಕ್ಕೂ ಮೊದಲು ಉಗಾಂಡಾದ ಎರಡನೇ ಉಪಪ್ರಧಾನಿ ನೇತೃತ್ವದ ನಿಯೋಗವು ಬಿವಿವಿ ಸಂಘದ ಕಾರ್ಯಾಧ್ಯಕ್ಷರು, ಬಾಗಲಕೋಟೆಯ ಶಾಸಕರು ಆದ ವೀರಣ್ಣ ಚರಂತಿಮಠ ಅವರೊಂದಿಗೆ ಬಿವಿವಿ ಸಂಘದ ವಿವಿಧ ಸಂಸ್ಥೆಗಳ ಜೊತೆಗೆ ಮಾಡಿಕೊಳ್ಳಬಹುದಾದ ಒಡಂಬಡಿಕೆಗಳ ಕುರಿತಾಗಿ ಚರ್ಚಿಸಿದರು, ವೀರಣ್ಣ ಚರಂತಿಮಠ ಅವರು ಸಂಘದ ವೈವಿಧ್ಯಮಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಪ್ರಾಚಾರ್ಯ ಡಾ. ಆರ್.ಎನ್. ಹೆರಕಲ್, ಇಲೆಕ್ಟಿçಕಲ್ ವಿಭಾಗದ ಡಾ. ಎಸ್.ಎಚ್. ಜಂಗಮಶೆಟ್ಟಿ, ಡಾ.ಇಂಜಗನೇರಿ, ಡಾ.ಮಹಾಬಳೇಶ್ವರ ಮತ್ತು ಡಾ. ಭಾರತಿ ಮೇಟಿ ಅವರು ಉಪಸ್ಥಿತರಿದ್ದು ಮಾಹಿತಿ ನೀಡಿದರು.

loading...