ಬಾದಾಮಿ ತಾ.ಪಂ ಕೆಡಿಪಿ ಸಭೆಯಲ್ಲಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ

0
12
loading...

ಕನ್ನಡಮ್ಮ ಸುದ್ದಿ-ಬಾದಾಮಿ: ಜನರ ದುಡ್ಡಿನಲ್ಲಿ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆÃವೆ. ಸರಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಜವಾಬ್ದಾರಿಂದ ಕಾರ್ಯ ನಿರ್ವಹಿಸಬೇಕು ಎಂದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಅವರು ಬುಧವಾರ ಇಲ್ಲಿನ ತಾ.ಪಂ.ಸಭಾಭವನದಲ್ಲಿ ನಡೆದ ೧ ನೇ ತ್ರೆöÊಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಸರಕಾರ ಯೋಜನೆಗಳನ್ನು ಅನುಷ್ಟಾನ ಮಾಡುವಲ್ಲಿ ತಾಲೂಕಾಮಟ್ಟದ ಅಧಿಕಾರಿಗಳ ಪಾತ್ರ ಮಹತ್ತರವಾದುದು. ಅನ್ನಭಾಗ್ಯ, ಕ್ಷಿÃರಭಾಗ್ಯ, ಕೃಷಿಭಾಗ್ಯ, ಶೂಭಾಗ್ಯ, ಮಾತೃಪೂರ್ಣ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ಫಲಾನುಭವಿಗಳಿಗೆ ಮುಟ್ಟಿಸುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ ಎಂದ ಅವರು ನಾನು ಬರುವ ದಿನಮಾನಗಳಲ್ಲಿ ಸರಕಾರಿ ಕಚೇರಿಗಳಿಗೆ ಅನಿರೀಕ್ಷಿತ ಸಂದರ್ಶನ ಮಾಡುತ್ತೆÃನೆ. ಅಲ್ಲಿ ಯಾವುದೇ ಕಡತಗಳು ಪೆಂಡಿಂಗ್ ಇದ್ದರೆ ಕ್ರಮ ನಿಶ್ಚಿತ. ಜನರು ಹೆಚ್ಚಾಗಿ ಯಾವ ಕಚೇರಿಗೆ ಅಲೆಯುತ್ತಾರೆ ಅಲ್ಲಿ ನಿಗದಿತ ಕೆಲಸ ಆಗಿಲ್ಲ. ಬ್ರಷ್ಟಾಚಾರ ನಡೆಯುತ್ತದೆ ಎಂಬುದು ನನ್ನ ಭಾವನೆ. ತಾಲೂಕಾಮಟ್ಟದ ಬಹುಮುಖ್ಯವಾದ ಹುದ್ದೆಯಲ್ಲಿರುವ ತಹಶೀಲದಾರರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಮೇಲ್ವಿಚಾರಣಾಧಿಕಾರಿಗಳು ಹೆಚ್ಚಾಗಿ ಫೀಲ್ಡ್ಗೆ ಹೋಗಬೇಕು. ಉಳಿದ ಸಮಯದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಬೇಕು. ಜನರ ಸಮಸ್ಯೆಗೆ ಸ್ಪಂದಿಸಬೇಕು. ತಹಶೀಲದಾರ, ಕೃಷಿ, ಬಿಸಿಎಂ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು. ತಾಲೂಕಿನಲ್ಲಿ ಸರಕಾರಿ ಜಮೀನು ಎಷ್ಟು, ಖಾಸಗಿ ಜಮೀನು, ಕೆರೆ ವಿಸ್ತಿÃರ್ಣ ಎಷ್ಟಿದೆ ಎಂದು ತಹಶೀಲದಾರರಿಗೆ ಕೇಳಿದಾಗ ಮಾಹಿತಿ ನೀಡಲು ತಡವರಿಸಿದರು. ಸರಕಾರಿ ಜಮೀನು ಮತ್ತು ಕೆರೆಯ ಬಗ್ಗೆ ಅಡಿಟ್ ಮಾಡಿಸಬೇಕು ಬರುವ ಸಭೆಗೆ ಜಮೀನು ಮತ್ತು ಕೆರೆಯ ಸಮಗ್ರ ಮಾಹಿತಿ ತರಬೇಕು ಎಂದು ತಹಶೀಲದಾರ ಎಸ್.ಎಸ್.ಇಂಗಳೆ ಇವರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಬಿಇಒ ಎ.ಎಸ್.ಹತ್ತಳ್ಳಿಯವರಿಗೆ ನೀವು ಕಳೆದ ೧೦ ತಿಂಗಳಲ್ಲಿ ಎಷ್ಟು ಶಾಲೆಗಳಿಗೆ ಭೇಟಿ ನೀಡಿದ್ದಿÃರಿ. ಮಕ್ಕಳ ಗುಣಮಟ್ಟ, ಭೌತಿಕ ಸೌಲಭ್ಯಗಳ ಬಗ್ಗೆ ಪರಿಶೀಲನೆ ಮಾಡಿದ್ದಿÃರಾ? ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವ ಬದಲಾಗಿ ಖಾಸಗಿ ಶಾಲೆಗೆ ಯಾಕೆ ದಾಖಲಾತಿ ಮಾಡಿಸುತ್ತಾರೆ? ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಇದಕ್ಕೆ ಬಿಇಒ ಸಮರ್ಪಕ ಉತ್ತರ ನೀಡದೇ ತಡವರಿಸಿದರು. ಇನ್ನು ಮುಂದೆ ಸರಕಾರಿ ನೌಕರರು ದಿನಚರಿ ಬರೆಯಬೇಕು. ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ತಮ್ಮ ಹಂತದಲ್ಲಿ ಆಗದಿದ್ದರೆ ಮೇಲಾಧಿಕಾರಿಗಳಿಗೆ ವರದಿ ಮಾಡಬೇಕು. ತಾಲೂಕಿನ ಬಿ.ಎನ್.ಜಾಲಿಹಾಳ ಗ್ರಾಮದ ಶಾಲೆಗೆ ಕಟ್ಟಡ ನಿರ್ಮಾಣಕ್ಕೆ ಜಾಗ ಇಲ್ಲವೆಂದು ಗ್ರಾಮಸ್ಥರು ತಿಳಿಸಿದ್ದಾರೆ. ನೀವು ಯಾವ ಕ್ರಮ ತೆಗೆದುಕೊಂಡಿದ್ದಿÃರಿ ಎಂದು ಬಿಇಒ ರವರನ್ನು ಪ್ರಶ್ನಿಸಿದರು. ಯಾವುದೇ ಜಾಗ ಬೇಕಾದರೆ ಸರಕಾರಿ ಜಾಗ ಬೇಕಾದರೆ ತಹಶಿಲದಾರರಿಗೆ ಸಂಪಪರ್ಕ ಮಾಡಬೇಕು. ಸ್ಥಳದಲ್ಲಿಯೇ ಇದ್ದ ತಹಶೀಲದಾರರಿಗೆ ಜಾಲಿಹಾಳ ಮತ್ತು ಕೋಟಿಕಲ್ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಸರಕಾರಿ ಜಾಗ ನೀಡಲು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಎಷ್ಟು ವಸತಿ ನಿಲಯಗಳು ನಡೆಯುತ್ತಿವೆ. ಅಲ್ಲಿನ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯಗಳು ಸಿಗುತ್ತವೆಯೇ ಎಂದು ಪರಿಶೀಲನೆ ಮಾಡಬೇಕು ಎಂದು ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು. ಸಭೆಯಲ್ಲಿ ಕೃಷಿ, ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಗ್ಗೆ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿದರು. ವೇದಿಕೆಯ ಮೇಲೆ ವಿಪ ಸದಸ್ಯ ಎಸ್.ಆರ್.ಪಾಟೀಲ, ತಾ.ಪಂ.ಅಧ್ಯಕ್ಷ ವಿಜಯಕುಮಾರ ಬೇಟಿಗಾರ, ಉಪಾಧ್ಯಕ್ಷೆ ಅಕ್ಕಮಹಾದೇವಿ ಜನಾಲಿ ಹಾಜರಿದ್ದರು. ಸಭೆಯಲ್ಲಿ ಎಸಿ ಶಂಕರಗೌಡ ಸೋಮನಾಳ, ತಾ.ಪಂ.ಇಒ ಭೀಮಪ್ಪ ಲಾಳಿ, ಸಿಪಿಐ ಕೆ.ಎಸ್.ಹಟ್ಟಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಚ್.ನರಹಟ್ಟಿ, ಎಪಿಎಂಸಿ ಸಹಾಯಕ ನಿರ್ದೇಶಕ ಸಿ.ಎಸ್.ಅಂಗಡಿ, ಮುಖ್ಯವೈದ್ಯಾಧಿಕಾರಿ ಡಾ.ಬಿ.ಎಚ್.ರೇವಣಸಿದ್ದಪ್ಪ, ಮುಖ್ಯಾಧಿಕಾರಿ ಫಕೀರಪ್ಪ ಗಿಡ್ಡಿ, ಸಿಡಿಪಿಒ ಎಂ.ಎಂ.ಇರಸನಾಳ ಸೇರಿದಂತೆ ತಾಲೂಕಾಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು.

ತಾ.ಪಂ.ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಯಾವುದೇ ಇಲಾಖೆಯಲ್ಲಿ ಕೆಲಸ ಆಗಿಲ್ಲ ಎಂದು ಸಾರ್ವಜನಿಕರಿಂದ ದೂರು ಬಂದರೆ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಲಾಗುವುದು. ಜವಾಬ್ದಾರಿ ಅರಿತು ಕೆಲಸ ಮಾಡಿ ಇಲ್ಲವೆ ಜಾಗ ಖಾಲಿ ಮಾಡಿ ಎಂದು ಖಡಕ್ ವಾರ್ನಿಂಗ್ ಮಾಡಿದರು. ಇದು ನನ್ನ ಮೊದಲ ಸಭೆ ಆದಕಾರಣ ಇದು ಒಂದು ಸಲ ಮಾತ್ರ ಮುನ್ನೆಚ್ಚರಿಕೆ ಕೊಡುತ್ತಿದ್ದೆÃನೆ. ಮುಂದಿನ ಬಾರಿಯ ಸಭೆಯಲ್ಲಿ ಇದೇ ರೀತಿ ನಿರ್ಲಕ್ಷö್ಯ ತೋರಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಅಧಿಕಾರಿಗಳ ಬೆವರಿಳಿಸಿದ ಸಿದ್ದರಾಮಯ್ಯ:ತಾಲೂಕಾಮಟ್ಟದ ಕೆಡಿಪಿ ಸಭೆಯಲ್ಲಿ ತಹಶೀಲದಾರ ಎಸ್.ಎಸ್.ಇಂಗಳೆ, ತಾ.ಪಂ.ಇಒ ಭೀಮಪ್ಪ ಲಾಳಿ, ಬಿಇಒ ಎ.ಎಸ್.ಹತ್ತಳ್ಳಿ, ಸಿಪಿಡಿಒ ಎಂ.ಎಂ.ಇರಸನಾಳ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಪರಿಪೂರ್ಣ ಮಾಹಿತಿ ನೀಡುವಂತೆ ಕೇಳಿದಾಗ ಅಧಿಕಾರಿಗಳು ತಡವರಿಸಿದಾಗ ಸರಿಯಾದ ಮಾಹಿತಿ ಇಲ್ಲದೇ ಇಲ್ಲಿಗ್ಯಾಕೆ ಬಂದ್ರಿ, ನಮ್ಮ ಜೊತೆಗೆ ಬೀಗತನ ಮಾಡಲು ಬಂದಿರಾ? ನಿಮಗೆ ಸರಿಯಾ ಜವಾಬ್ದಾರಿ ಇಲ್ಲವೇ? ಎಂದು ಖಡಕ್ ಸೂಚನೆ ನೀಡಿದರು.

ಅಧಿಕಾರಿಗಳು ಮಾಹಿತಿ ನೀಡಲು ಹಿಂದೇಟು ಹಾಕಿದರು. ನಿಮ್ಮಲ್ಲಿ ಸರಿಯಾದ ಮಾಹಿತಿ ಇದ್ದರೆ ಹೇಳಿರಿ ಇಲ್ಲದಿದ್ದರೆ ಇಲ್ಲ ಎಂದು ಹೇಳಿರಿ. ತಪ್ಪು ಮಾಹಿತಿ ನೀಡಬೇಕು ಎಂದು ಹೇಳಿದರು. ಎಲ್ಲ ಇಲಾಖೆವಾರು ಮಾಹಿತಿ ಪಡೆದರು. ಎಲ್ಲ ಯೋಜನೆಗಳನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಸೂಚಿಸಿದರು.

loading...