ಬಿಸಿಸಿಐ ಸದಸ್ಯರ ಆಯ್ಕೆಯ ಚುನಾವಣೆ ಫಲಿತಾಂಶ ಪ್ರಕಟ

0
30
loading...

ಕನ್ನಡಮ್ಮ ಸುದ್ದಿ- ಬೆಳಗಾವಿ: ನಗರದ ಪ್ರತಿಷ್ಠಿತ ಉದ್ಯಮಿಗಳನೊಳಗೊಂಡ ಬೆಳಗಾವಿ ಚೆಂಬರಸ್ ಆಪ್ ಕಾಮರ್ಸ ಇಂಡಸ್ಟ್ರೀಸ್ ಹಾಗೂ ವ್ಯಾಪಾರಿ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಪ್ರಕ್ರಿಯೆ ಬುಧವಾರದಂದು ನಡೆಯಿತು.

ಚೆಂರ‍್ಸ್ ಆಪ್ ಕಾಮರ್ಸ ಆ್ಯಂಡ ಇಂಡಸ್ಟಿçÃಸ್ ಚುನಾವಣೆ ಕೆಲವು ಕಾರಣಾಂತರಗಳಿಂದ ಕಳೆದ ೯ ವರ್ಷಗಳಿಂದ ಸ್ಥಗಿತಗೊಂಡಿತ್ತು. ಈಗ ಮತ್ತೆ ಚುನಾವಣೆ ಈ ಬಾರಿ ಪ್ರಾರಂಭಿಸಿದ್ದು, ವ್ಯಾಪಾರಿಗಳು , ಹಾಗೂ ಸಣ್ಣ ಕೈಗಾರಿಗಳ ಸದಸ್ಯರ ಚುನಾವಣೆ ನಡೆಯಿತು.

ಉದ್ಯಮಬಾಗದಲ್ಲಿ ಕಚೇರಿಯಲ್ಲಿ ಬೆಳಿಗ್ಗೆ ೧೦ ಗಂಟೆಯಿಂದಲೇ ಚುನಾವಣೆ ಪ್ರಕ್ರಿಯೆ ಪ್ರಾರಂಭಯಿತು. ಚೆಂಬರಸ್ ಆಪ್ ಕಾಮರ್ಸ ಇಂಡಸ್ಟ್ರೀಸ್ ಸದಸ್ಯರ ಸ್ಥಾನಕ್ಕೆ ಅಜೀತ್ ಬೋಲಿ, ಅಶ್ಪಾಕ್ ತಹಶೀಲ್ದಾರ, ವಿಲಾಸ ಬಾದಾಮಿ, ದೀಲಿಪ ಚಾಂಡಕ್, ಕೀಥ್ ಮಚಾಡೋ, ಮಹೇಂದ್ರ ನರಸಗೌಡಾ, ಪ್ರಭಾಕರ ನಾಗರಮುನವಳ್ಳಿ, ರಾಜೇಂದ್ರ ಕಂಗುರಿ, ಎಂಟು ನಾಮ ಪತ್ರ ಸಲ್ಲಿಕೆಯಾಗಿದ್ದವು, ಎಂಟು ನಾಮ ಪತ್ರ ಸಲ್ಲಿಕೆಯಲ್ಲಿ ಮೂರು ಜನ ಸ್ಪರ್ಧಿಗಳಾದ ದೀಲಿಪ ಚಾಂಡಕ್ ೨೦೦ ಮತ, ಕೀಥ್ ಮಚಾಡೋ ೧೯೭ ಮತ, ವಿಲಾಸ ಬಾದಾಮಿ ೧೬೨ ಮತಗಳನ್ನು ಪಡೆದು ಸದಸ್ಯರ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

loading...