ಬೀದಿ ದೀಪ ಅಳವಡಿಸಲು ಆಗ್ರಹ

0
12
loading...

ಗುಳೇದಗುಡ್ಡ : ಇಲ್ಲಿನ ಗಾಯತ್ರಿ ನಗರದಲ್ಲಿ ಸುಮಾರು ಮೂರ್ನಾಲ್ಕು ತಿಂಗಳಿಂದ ಬೀದಿ ದೀಪಗಳು ಹತ್ತುತ್ತಿಲ್ಲ. ಇದರಿಂದ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.
ಗಾಯತ್ರಿ ನಗರದಲ್ಲಿ 80 ಮನೆಗಳಿದ್ದು, ಇಲ್ಲಿ 10 ಬೀದಿದೀಪದ ಕಂಬಗಳು ಇವೆ. ಇದರಲ್ಲಿ ಐದು ವಿದ್ಯುತ್‌ ಕಂಬಗಳಲ್ಲಿ ದೀಪಗಳು ಇಲ್ಲ. ಕಳೆದ ಮೂರುನಾಲ್ಕು ತಿಂಗಳಿಂದ ಈ ಕಂಬಗಳಲ್ಲಿ ಬಲ್ಪ ಇಲ್ಲದೇ ಕತ್ತಲು ಆವರಿಸಿದೆ. ಈ ಬಗ್ಗೆ ಪುರಸಭೆಗೆ ಮೌಖಿಕವಾಗಿ ಹೇಳಿದರು, ಅವರೂ ಇತ್ತಕಡೆ ಗಮನ ನೀಡಿಲ್ಲ. ರಾತ್ರಿವೇಳೆ ಇಲ್ಲಿನ ಜನರಿಗೆ ತೊಂದರೆ ಉಂಟಾಗುತ್ತಿದೆ. ಹಾವು ಚೇಳುಗಳು ಹೆಚ್ಚಾಗಿರುವ ಈ ಪ್ರದೇಶದಲ್ಲಿ ಜನರು ಭಯದಿಂದ ಬದುಕುವಂತಾಗಿದೆ ಎಂದು ಇಲ್ಲಿನ ನಿವಾಸಿಗಳಾದ ಅಮರೇಶ ಉಣಚಗಿ, ಬಸವರಾಜ ಬ್ಯಾಳಿ, ಕಲ್ಲಪ್ಪ ಸುರಪುರ, ವಸಂತ ಉಂಕಿ, ಸಿದ್ದಪ್ಪ ಕುಡಕಿ, ರಾಮಣ್ಣ ಮಿಣಜಗಿ, ಚಂದ್ರಪ್ಪ ಸಿಂಹಾಸನ, ಲೋಕಪ್ಪ ಕಂಠಿ, ಶೇಖರಪ್ಪ ಮಲಗಾ, ಕೂಡ್ಲೆಪ್ಪ ಉಣಚಗಿ, ಪುಂಡಲೀಕಪ್ಪ ಗೌಡ್ರ ದೂರಿದ್ದು, ಕೂಡಲೇ ವಿದ್ಯುತ್‌ ದೀಪ ಅಳವಡಿಸುವಂತೆ ಆಗ್ರಹಿಸಿದ್ದಾರೆ.

loading...