ಬೀದಿ ನಾಯಿಗಳಿಂದ ಮಹಿಳೆ ಮೇಲೆ ದಾಳಿ

0
25
loading...

ಬೀದಿ ನಾಯಿಗಳಿಂದ ಮಹಿಳೆ ಮೇಲೆ ದಾಳಿ
ಕನ್ನಡಮ್ಮ ಸುದ್ದಿ-ಸಂಕೇಶ್ವರ:ಬೀದಿ ನಾಯಿಗಳ ಗುಂಪೊಂದು ಮಹಿಳೆ ಮೇಲೆ ದಾಳಿ ಮಾಡಿದ ಪರಿಣಾಮ ಮಹಿಳೆ ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಬೈರಾಪುರದಲ್ಲಿ ಇಂದು ಮುಂಜಾನೆ ನಡೆದಿದೆ.
ಬೈರಾಪುರ ಗ್ರಾಮದ ಯಶೋದಾ ಬಲವಾಡಕರ(೬೦) ವರುಷದ ಮಹಿಳೆ ಮೇಲೆ ಸುಮಾರು ಹತ್ತು ನಾಯಿಗಳ ಗುಂಪು ಮಹಿಳೆ ಮೇಲೆ ಎರಗಿ ದಾಳಿ ಮಾಡಿ ಮನ ಬಂದಂತೆ ಕಚ್ಚಿ ಗಾಯಗೊಳಿಸಿವೆ.ಮಹಿಳೆ ಕಿರುಚಾಟ ಕೇಳಿ ಸ್ಥಳಕ್ಕೆ ದಾವಿಸಿದ ಗ್ರಾಮಸ್ಥರಿಂದ ಮಹಿಳೆ ರಕ್ಷಣೆ ಮಾಡಲಾಗಿದೆ.
ಗಾಯಗೊಂಡ ಮಹಿಳೆ ಚಿಕಿತ್ಸೆಗೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

loading...