ಬೆಲ್ಜಿಯಂಗೆ ಮೂರನೇ ಸ್ಥಾನ

0
8
loading...

ಮಾಸ್ಕೋ: ಫೀಫಾ ವಿಶ್ವಕಪ್ 2018ರ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಬೆಲ್ಜಿಯಂ ತಂಡ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.
ಟೂರ್ನಿಯಲ್ಲಿ ಮೂರನೇ ಸ್ಥಾನಕ್ಕಾಗಿ ಶನಿವಾರ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಬೆಲ್ಜಿಯಂ 2-0 ಅಂತರದ ಜಯ ಸಾಧಿಸಿತು. ಗೋಲು ಗಳಿಸಲು ಸಿಕ್ಕ ಸುವರ್ಣ ಅವಕಾಶಗಳನ್ನು ಕೈ ಚೆಲ್ಲಿದ ಇಂಗ್ಲೆಂಡ್ ಫಿಫಾ ವಿಶ್ವಕಪ್ ಟೂರ್ನಿಯ ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಪರಾಭವಗೊಂಡು ನಾಲ್ಕನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಸಮರ್ಥವಾಯಿತು.
ಪಂದ್ಯ ಆರಂಭವಾದ ಕೇವಲ ನಾಲ್ಕನೇ ನಿಮಿಷದಲ್ಲೇ ಬೆಲ್ಜಿಯಂ ತಂಡ ಗೋಲು ಭಾರಿಸುವ ಮೂಲಕ ಶುಭಾರಂಭ ಮಾಡಿತು. ಬೆಲ್ಜಿಯಂ ತಂಡದ ಥಾಮಸ್ ಮ್ಯುನಿಯರ್ 4ನೇ ನಿಮಿಷದಲ್ಲಿ ಗೋಲು ದಾಖಲಿಸಿದರು, ಆ ಬಳಿಕ ಪಂದ್ಯದ 82 ನೇ ನಿಮಿಷದಲ್ಲಿ ಮತ್ತೆ ಬೆಲ್ಜಿಯಂ ತಂಡ ಈಡೆನ್ ಹೆಜಾರ್ಡ್ ಗೋಲು ದಾಖಲಿಸುವ ಮೂಲಕ ಬೆಲ್ಜಿಯಂ ತಂಡ ಮೂರನೇ ಸ್ಥಾನ ಪಡೆದುಕೊಂಡಿತು.

loading...