ಬೆಳಗಾವಿ ಬಾಲಕಿ ಡ್ಯಾನ್ಸ್ ವರ್ಡ ಕಪ್ ನಲ್ಲಿ ಏಂಟನೆ ಸ್ಥಾನ : ಎಂ.ಸ್ಟೈಲ್ ಅಕ್ಯಾಡೆಮಿಯಿಂದ ಅಭಿನಂದನೆ

0
43
loading...

ಬೆಳಗಾವಿ ಬಾಲಕಿ ಡ್ಯಾನ್ಸ್ ವರ್ಡ ಕಪ್ ನಲ್ಲಿ ಏಂಟನೆ ಸ್ಥಾನ : ಎಂ.ಸ್ಟೈಲ್ ಅಕ್ಯಾಡೆಮಿಯಿಂದ ಅಭಿನಂದನೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಬಾಲಕಿ ಪ್ರೇರಣಾ ಗೋನಬರೆ ಇತ್ತೀಚಿಗೆ ಸ್ಪೇನ ದೇಶದ ಬರ್ಥಿಲೊಮಿಯದಲ್ಲಿ ನಡೆದ ಡ್ಯಾನ್ಸ್ ವರ್ಡ ಕಪ್ ೨೦೧೮ ರಲ್ಲಿ ಏಂಟನೆ ಸ್ಥಾನ ಪಡೆದಿರುವುದು ತುಂಬ ಸಂತಸ ತಂದಿದೆ ಎಂದು ಎಂ.ಸ್ಟೈಲ್ ಡ್ಯಾನ್ಸ ಆಂಡ್ ಪಿಟನೆಸ್ ಅಕ್ಯಾಡಮಿ ಸಂಸ್ಥೆಯ ಸಂಸ್ಥಾಪಕ ಮಹೇಶ ಜಾಧವ್ ಹರ್ಷ ವ್ಯಕ್ತ ಪಡಿಸಿದರು.

ಇಂದು ನಗರದಲ್ಲಿ ಪತ್ರಿಕಾ ಗೋಷ್ಠಿಯ ನಡೆಸಿ ಮಾತನಾಡಿದ ಅವರು ಡ್ಯಾನ್ಸ್ ವರ್ಡಕಪ್ ಇದು ಪ್ರತಿ ವರುಷ ನಡೆಯುವ ಅಂತರಾಷ್ಟ್ರೀಯ ಡ್ಯಾನ್ಸ್ ಸ್ಪರ್ಧೆಯಾಗಿದೆ.ಇದರಲ್ಲಿ ಈ ವರ್ಷ ೪೫ ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದರು ಇದರಲ್ಲಿ ನಮ್ಮ ಅಕ್ಯಾಡೆಮಿ ಬಾಲಕಿ ಪ್ರೇರಣಾ ಗೋನಬರೆ ಏಂಟನೆ ಸ್ಥಾನ ಪಡೆದಿದ್ದು ಇದು ಹೆಮ್ಮೆಯ ವಿಷಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಪ್ರೇರಣಾ ಗೋನಬರೆ ಸೇರಿದಂತೆ ಇತರರು ಇದ್ದರು .

loading...