ಬೇವಿನಮಟ್ಟಿ ಗ್ರಾಪಂ: ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

0
9
loading...

ಬಾಗಲಕೋಟ : ತಾಲೂಕಿನ ಬೇವಿನಮಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಸೋಮವಾರ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಕಮಲವ್ವ ರಮೇಶ ವಾಲಿಕಾರ ಅಧ್ಯಕ್ಷೆಯಾಗಿ ಹಾಗೂ ಲಕ್ಷಿö್ಮಬಾಯಿ ಬೀರಪ್ಪ ದಳವಾಯಿ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು ೧೧ ಸದಸ್ಯ ಬಲದ ಬೇವಿನಮಟ್ಟಿ ಗ್ರಾ.ಪಂ.ಗೆ ಈಚೆಗೆ ಅಧ್ಯಕ್ಷ- ಉಪಾಧ್ಯಕ್ಷರು ರಾಜಿನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆ ವೇಳೆ ಅಧ್ಯಕ್ಷ ಸ್ಥಾನಕ್ಕೆ ಕಮಲವ್ವ ಹಾಗೂ ಉಪಾಧ್ಯಕ್ಷ ಸ್ಥಾನ ಲಕ್ಷಿö್ಮಬಾಯಿ ಅವರು ಮಾತ್ರ ನಾಮಪತ್ರ ಸಲ್ಲಿಸಿದರು. ಹೀಗಾಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರು ಬಾಗಲಕೋಟೆಯ ಕಾಂಗ್ರೆಸ್ ಕಚೇರಿಗೆ ಆಗಮಿಸಿ, ಮಾಜಿ ಸಚಿವ ಎಚ್.ವೈ. ಮೇಟಿ ಅವರನ್ನು ಭೇಟಿ ಮಾಡಿದರು. ಇದೇ ವೇಳೆ ಮಾಜಿ ಸಚಿವ ಮೇಟಿ ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಸನ್ಮಾನಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದ್ಯಾಮಣ್ಣ ಗಾಳಿ, ತಾಪಂ. ಸದಸ್ಯೆ ಪ್ರೆÃಮಾ ಗಾಳಿ, ಕಾಂಗ್ರೆಸ್ ಜಿಲ್ಲಾ ವಕ್ತಾರ ಆನಂದ ಜಿಗಜಿನ್ನಿ, ಪ್ರಮುಖರಾದ ಗೋಪಾಲ ಹುಲ್ಲನ್ನವರ, ಶಾವಕ್ಕ ಆಸಂಗಿ, ನಿಂಗಪ್ಪ ಕರಡಿ, ಬಸವರಾಜ ಹುಲ್ಲನ್ನವರ, ಗಚ್ಚವ್ವ ಮಾದರ, ರಮೇಶ ಕರಡಿ, ದಾಸನಗೌಡ ಪಾಟೀಲ, ನೂರಅಹ್ಮದ ಪಟ್ಟೆÃವಾಲ ಮುಂತಾದವರು ಉಪಸ್ಥಿತರಿದ್ದರು.

loading...