ಭತ್ತಕ್ಕೆ ಬೆಂಬಲ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರ

0
11
loading...

ನವದೆಹಲಿ: ದೇಶದ ಪ್ರಮುಖ ಬೆಳೆಯಾಗಿರುವ ಭತ್ತಕ್ಕೆ ಕ್ವಿಂಟಲ್‌ಗೆ 200 ರೂ. ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಇಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದೆ.

2019 ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಬೆಂಬಲ ಬೆಲೆ ಏರಿಕೆ ಮಹತ್ವ ಪಡೆದುಕೊಂಡಿದೆ. 2014 ರ ಲೋಕಸಭಾ ಚುನವಾಣೆಯಲ್ಲಿ ರೈತರಿಗೆ ಉತ್ಪಾದನಾ ವೆಚ್ಚಕ್ಕಿಂತ 1.5 ರಷ್ಟು ಹೆಚ್ಚಿನ ಬೆಂಬಲ ಬೆಲೆಯನ್ನು ನಿಗದಿಪಡಿಸುವುದಾಗಿ ಭರವಸೆ ನೀಡಲಾಗಿತ್ತು. ಈ ವರ್ಷ ಬಜೆಟ್​​ನಲ್ಲಿ ಆ ಭರವಸೆಯನ್ನು ಈಡೇರಿಸಲಾಗಿತ್ತು. ಇದೀಗ ಪ್ರತಿ ಕ್ವಿಂಟಾಲ್ ಭತ್ತಕ್ಕೆ ಬೆಂಬಲ ಬೆಲೆ ಏರಿಕೆ ಮಾಡುವ ಮೂಲಕ ರೈತರನ್ನು ಸಂತಸಗೊಳಿಸುವ ನಿರ್ಧಾರ ಕೈಗೊಂಡಿದೆ.

ಬೇಸಿಗೆಯಲ್ಲಿ ಬೆಳೆಯುವ ಸುಮಾರು 14 ವಿಧದ ಬೆಳೆಗಳಿಗೆ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ ಬೆಂಬಲ ಬೆಲೆಯನ್ನು ನಿಗದಿಪಡಿಸಿತ್ತು. ಭತ್ತಕ್ಕೆ ನೀಡಲಾಗುತ್ತಿದ್ದ ಬೆಂಬಲ ಬೆಲೆಯನ್ನು 200 ರೂಪಾಯಿ ಏರಿಕೆ ಮಾಡಿರುವುದರಿಂದ ಈಗ ಭತ್ತಕ್ಕೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆ 1,750 ಕ್ಕೆ ಏರಿಕೆಯಾಗಿದೆ.

ಪ್ರಸ್ತುತ ಕ್ವಿಂಟಲ್ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ 1,550 ರೂ. ಇತ್ತು. ಇದೀಗ ಶೇ. 13 ರಷ್ಟು (200  ರೂ.) ಏರಿಸುವುದರೊಂದಿಗೆ ಕ್ವಿಂಟಲ್ಗೆ 1,750 ರೂ. ನಿಗದಿಪಡಿಸಿದೆ.

14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ 

ಇದರ ಜತೆಗೆ ರಾಗಿಗೆ ಪ್ರತಿ ಕ್ವಿಂಟಲ್ಗೆ 2,897 ರೂ ಬೆಂಬಲ ಬೆಲೆ ಘೋಷಿಸಲಾಗಿದ್ದು ಶೇಕಡಾ 50 ರಷ್ಟು ಬೆಂಬಲ ಬೆಲೆ ನೀಡಲಾಗಿದ್ದು, ಹಿಂದೆ 1, 900 ರೂಪಾಯಿ ಇತ್ತು.ಹೈಬ್ರಿಡ್ಜೋಳಕ್ಕೆ  ಕ್ವಿಂಟಾಲ್ಗೆ  2,430 ಆಗಿದ್ದು, ಹಿಂದೆ  1, 700 ಇತ್ತು , 40 % ಹೆಚ್ಚಳ ಮಾಡಲಾಗಿದೆ

ಸೂರ್ಯ ಕಾಂತಿ ಗೆ ಕ್ವಿಂಟಾಲ್ಗೆ 5,388 ಬೆಂಬಲ ಬೆಲೆ ಘೋಷಿಸಲಾಗಿದ್ದು, ಹಿಂದೆ 4,100 ಇತ್ತು 31.4 % ಹೆಚ್ಚಳ ಮಾಡಲಾಗಿದೆ. ತೊಗರಿ 5,675 ರೂಪಾಯಿ ಬೆಂಬಲ ಬೆಲೆ ಘೋಷಿಸಲಾಗಿದ್ದು, ಹಿಂದೆ  5,450 ರೂಪಾಯಿ ಇತ್ತು. ಉದ್ದು ಕ್ವಿಂಟಾಲ್ಗೆ 5,600 ರೂ ಘೋಷಿಸಲಾಗಿದ್ದು, ಹಿಂದೆ 5,400 ರೂಪಾಯಿ ಇತ್ತು.ಹತ್ತಿ (ಮದ್ಯಮ) 4,020 ರೂ ಇತ್ತು, ಈಗ 5, 150 ಆಗಿದೆ. ಹೆಸರು ಬೇಳೆ ಕ್ವಿಂಟಾಲ್ಗೆ 6,975 ರೂಪಾಯಿ ಘೋಷಿಸಲಾಗಿದ್ದು , ಮೊದಲು 5,575 ರೂಪಾಯಿ ಇತ್ತು.ಸೋಯಾಬೀನ್‌ 3999 ರೂ ಬೆಂಬಲ ಬೆಲೆ ಘೋಷಿಸಲಾಗಿದೆನೆಲಗಡಲೆ 4, 890 ರೂ ಘೋಷಿಸಲಾಗಿದ್ದು, ಹಿಂದೆ 4,550 ರೂಪಾಯಿ ಇತ್ತು. ಇನ್ನು ಮುಸುಕಿನ ಜೋಳ, ಎಳ್ಳಿಗೂ ಬೆಂಬಲ ಬೆಲೆ ಘೋಷಿಸಲಾಗಿದೆ.

loading...