ಭಾರತದ ಭವಿಷ್ಯತ್ತಿನ ಆರ್ಥಿಕ ಬೆಳವಣಿಗೆ ಅತ್ಯಂತ ಸದೃಢ: ಐಎಂಎಫ್

0
27
loading...

ವಾಷಿಂಗ್ಟನ್ : ಏರಿದ ತೈಲ ಬೆಲೆ ಮತ್ತು ಬಿಗಿ ಹಣಕಾಸು ನೀತಿಯಿಂದಾಗಿ ಭಾರತದ ಆರ್ಥಿಕ ಪ್ರಗತಿಯ ಅಂದಾಜನ್ನು ೨೦೧೮-೧೯ರ ಸಾಲಿಗೆ ಸ್ವಲ್ಪ ಮಟ್ಟಿಗೆ ಇಳಿಸಿರುವ ಹೊರತಾಗಿಯೂ ಭಾರತದ ಭವಿಷ್ಯತ್ತಿನ ಆರ್ಥಿಕ ಬೆಳವಣಿಗೆ ಅತ್ಯಂತ ಸದೃಢವಾಗಿದೆ ಎಂದು ಐಎಂಎಫ್‌ಹೇಳಿದೆ.
೨೦೧೮ರಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇ.೭.೩ ಆಗಲಿದ್ದು ೨೦೧೯ರಲ್ಲಿ ಇದು ಶೇ.೭.೫ ಆಗಲಿದೆ; ಈ ವರ್ಷ ಎಪ್ರಿಲ್‌ನಲ್ಲಿ ಅಂದಾಜಿಸಲಾಗಿರುವುದಕ್ಕಿಂತ ಇದು ಅನುಕ್ರಮವಾಗಿ ಶೇ.೦.೧ ಮತ್ತು ಶೇ.೦.೩ರಷ್ಟು ಕಡಿಮೆ ಎಂದು ಇಂಟರ್‌ನ್ಯಾಶನಲ್ ಮಾನಿಟರಿ ಫಂಡ್ (ಐಎಂಎಫ್) ಇಂದು ಸೋಮವಾರ ಹೇಳಿದೆ.ಭಾರತದ ಆರ್ಥಿಕತೆಯು ಅತ್ಯಂತ ಬಲಿಷ್ಠವಾಗಿದ್ದು ಇದು ಭವಿಷ್ಯದಲ್ಲಿ ಇನ್ನಷ್ಟು ಸದೃಢವಾಗಲಿದೆ ಎಂದು Iಒಈ ಆರ್ಥಿಕ ಸಲಹೆಗಾರ ಮತ್ತು ಸಂಶೋಧನ ವಿಭಾಗದ ನಿರ್ದೇಶ ಮೌರೀಸ್ ಆಬ್‌ಸ್‌ಫೆಲ್ಡ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಭಾರತದ ಆರ್ಥಿಕ ಪ್ರಗತಿಗೆ ದೊಡ್ಡ ಸವಾಲಾಗಿ ಪರಿಣಮಿಸಿರುವುದು ಏರುತ್ತಿರುವ ತೈಲಬೆಲೆ. ಭಾರತ ತನ್ನ ತೈಲ ಆವಶ್ಯಕತೆಯ ಶೇ.೮೦ರಷ್ಟು ಪ್ರಮಾಣವನ್ನು ಆಮದಿಸಿಳ್ಳುತ್ತದೆ. ಇದಲ್ಲದೆ ಪ್ರಕೃತ ಜಾಗತಿಕ ಹಣಕಾಸು ಸ್ಥಿತಿಗತಿ ಬಿಗಿಯಾಗಿರುವುದು ಭಾರತಕ್ಕೆ ಸವಾಲಾಗಿ ಪರಿಣಮಿಸಿದೆ. ಇವೇ ಕಾರಣಗಳಿಂದಾಗಿ ಎರಡು ಹಣಕಾಸು ವರ್ಷಗಳಲ್ಲಿನ ಭಾರತದ ಆರ್ಥಿಕ ಪ್ರಗತಿಯ ಅಂದಾಜನ್ನು ಸ್ವಲ್ಪಮಟ್ಟಿಗೆ ಇಳಿಸಲಾಗಿದೆ ಎಂದು ಮೌರೀಸ್ ಹೇಳಿದರು.

loading...