ಭೂ ಕುಸಿತ, ಅಮರನಾಥ ಯಾತ್ರಾರ್ಥಿಗಳ 5 ಸಾವು

0
11
loading...

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂಡೆರ್ ಬಲ್ ಜಿಲ್ಲೆಯ ಬಲ್ತಲ್ ಮಾರ್ಗದಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಐವರು ಅಮರನಾಥ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.

ಬಲ್ತಲ್ ಮಾರ್ಗದಲ್ಲಿ ರೈಲ್ ಪಟ್ರಿ ಮತ್ತು ಬ್ರಾರಿಮಾರ್ಗ ನಡುವೆ ಭೂ ಕುಸಿತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೃತರಲ್ಲಿ ನಾಲ್ವರು ಪುರುಷರಾಗಿದ್ದು, ಓರ್ವ ಮಹಿಳೆಯಾಗಿದ್ದಾರೆ. ಮೃತರು ಮತ್ತು ಗಾಯಾಳುಗಳ ಗುರುತು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ. ಮೃತದೇಹಗಳನ್ನು ಬಲ್ತಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಭದ್ರತಾ ಪಡೆಗಳು ಮತ್ತು ರಕ್ಷಣಾ ಪಡೆಗಳು ಭರದ ರಕ್ಷಣಾ ಕಾರ್ಯಚರಣೆ ನಡೆಸುತ್ತಿವೆ.

loading...