ಮಂಗಗಳ ಹಾವಳಿ ಬೆಳೆ ಹಾನಿ: ಕಂಗೆಟ್ಟ ರೈತ

0
8
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ನರೇಗಲ್ಲ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ, ಹೆಸರು, ಶೇಂಗಾ, ಮಾವು ತೋಟಗಳಲ್ಲಿ ಮಂಗಗಳ ಹಾವಳಿಯಿಂದ ಕಂಗೆಟ್ಟಿದ್ದಾರೆ. ಹೊಲದಲ್ಲಿ ಬೆಳೆ ನಿಧಾನವಾಗಿ ಕಾಳು ಕಟ್ಟುತ್ತಿವೆ. ಇಂಥ ಸಂದರ್ಭದಲ್ಲಿ ಮಂಗಗಳ ಕಾಟದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಕೋಚಲಾಪೂರ, ಅಬ್ಬಿಗೇರಿ, ಜಕ್ಕಲಿ, ಮಾರನಬಸರಿ, ಹಾಲಕೆರೆ, ಬೂದಿಹಾಳ, ಯರೇಬೇಲೇರಿ, ಕುರುಡಗಿ, ಗುಜಮಾಗಡಿ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪೂರ, ತೋಟಗಂಟಿ, ದ್ಯಾಂಪೂರ ಗ್ರಾಮಗಳ ವ್ಯಾಪ್ತಿ ಪ್ರದೇಶದ ಹೊಲ, ತೋಟಗಳಲ್ಲಿ ಮಂಗಗಳ ಹಾವಳಿ ಹೆಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಸ್ಥಿತಿ ಎದುರಿಸುತ್ತಿದ್ದಾರೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಮಂಗಗಳ ಹಿಂಡು ನಿತ್ಯವೂ ರೈತರು ಬೆಳೆದ ಬೆಳೆಗಳನ್ನು ಕಿತ್ತಿಕೊಳ್ಳುತ್ತಿವೆ. ಮಳೆಯಿಲ್ಲದೆ ಒಂದೆಡೆ ಬೆಳೆಗಳು ಬಾಡಿದ್ದರೆ, ಮತ್ತೊಂದೆಡೆ ಅಲ್ಪಸ್ವಲ್ಪ ಬೆಳೆದ ಬೆಳೆಗಳು ಮಂಗಗಳ ಪಾಲು ಆಗುತ್ತಿವೆ ಎಂಬ ನೋವು ರೈತರಿಗೆ ಕಾಡುತ್ತಿದೆ. ಎಂದು ರೈತ ಸಿದ್ದಲಿಂಗಸ್ವಾಮಿ ಅರಳಲಿಮಠ ತಿಳಿಸಿದರು. ಕೃಷಿ ನಿರ್ವಹಣೆ ವೆಚ್ಚ ಅಧಿಕವಾದ ಈ ದಿನಗಳಲ್ಲಿ ಮಂಗಗಳಿಂದ ಬೆಳೆ ಹಾನಿಯಾಗುತ್ತಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂಥ ಆರ್ಥಿಕ ಸಂಕಷ್ಟದ ನಡುವೆ ಮಂಗಗಳ ಹಾವಳಿ ಮಟ್ಟಹಾಕಲು ರೈತ ಸಾವಿರಾರೂ ರೂಪಾಯಿ ವೆಚ್ಚ ಮಾಡಿ ಹೈರಾಣಾಗುತ್ತಿರುವುದು ಮಾತ್ರವಲ್ಲದೇ ಹಗಲಿರುಳೆನ್ನದೇ ಹೊಲ, ತೋಟ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಶೇಂಗಾ, ಹೆಸರು, ಬಿಟಿ, ಮೆಕ್ಕೆ ಜೋಳದ ಬೆಳೆಗಳು ಮಂಗಗಳ ಬಾಯಿಗೆ ಹೋಗುತ್ತಿದೆ. ಮಳೆ ಕೊರತೆಯಿಂದ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ದಿಕ್ಕೆತೋಚದಂತಾಗಿದೆ. ಪ್ರತಿ ವರ್ಷ ಮಂಗಗಳ ಹಾವಳಿ ಹೆಚ್ಚಾಗುತ್ತಿದೆ. ಸುಮಾರು ಸಾವಿರಾರು ಎಕರೆ ಪ್ರದೇಶದಲ್ಲಿ ಹಾಗೂ ಕೋಚಲಾಪೂರ, ಅಬ್ಬಿಗೇರಿ ಭಾಗದ ಹೊಲಗಳಲ್ಲಿ ನೂರಾರು ಸಂಖ್ಯೆಯಲ್ಲಿ ಮಂಗಗಳ ಹಿಂಡು ಬೀಡು ಬಿಟ್ಟಿವೆ. ಬೆಳೆ ಎರಡೆಲೆ ಇರುವಾಗಲೇ ಮಂಗಗಳ ಇದನ್ನನು ಕಡೆದು ತಿನ್ನುವುದರಿಂದ ಸಂಪೂರ್ಣ ಬೆಳೆ ಹಾಗೂ ಮಾವಿನ ಸಸಿಗಳನ್ನು ನಾಶವಾಗುವ ಆತಂಕ ಎದುರಾಗಿದೆ. ಇನ್ನೂ ಹಿಂಡೂ ಹಿಮಡಾಗಿ ಹೊಲದಲ್ಲಿ ಓಡಾಡುತ್ತಿರುವುದರಿಂದ ಕೋತಿಗಳ ಕಾಲ್ತುಳಿತಕ್ಕೆ ಸಿಲುಕಿ ಬೆಳೆ ಹಾನಿಯಾಗುತ್ತಿದೆ. ಮಳೆ ಕೊರತೆ ಈ ಬಾರಿ ಉತ್ತಮ ಮುಂಗಾರು ಮಳೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ರೈತ ಸಮುದಾಯ ಬೀಜ, ಗೋಬ್ಬರಕ್ಕೆ ಸಾಲಸೂಲ ಕೃಷಿ ಮಾಡಿದ್ದಾರೆ. ಆದರೆ ಕಳೆದ ಒಂದು ತಿಂಗಳಿಂದ ಮೋಡಕವಿದ ವಾತವರಣವಿದ್ದರೂ ಮಳೆ ಆಗಿಲ್ಲ. ಈಗ ಅಲ್ಪತೇವಾಂಶದಲ್ಲಿ ಬೆಳೆದ ಬೆಳೆಯೂ ಮಂಗಗಳ ಪಾಲಾಗುತ್ತಿದೆ.

loading...