ಮಕ್ಕಳನ್ನು ಸಮಾಜದ ಬಹು ದೊಡ್ಡ ಆಸ್ತಿಯನ್ನಾಗಿ ಮಾಡಿ: ಸಚಿವ ಮನಗೂಳಿ

0
17
loading...

ಕನ್ನಡಮ್ಮ ಸುದ್ದಿ-ಸಿಂದಗಿ: ಮಕ್ಕಳಿಗಾಗಿ ಆಸ್ತಿ ಮಾಡುವುದು ಬೇಡ ಮಕ್ಕಳನ್ನೆ ಈ ಸಮಾಜದ ಬಹು ದೊಡ್ಡ ಆಸ್ತಿಯನ್ನಾಗಿ ಮಾಡಿ ಅವರಿಂದ ಭಾರತದ ಭವಿಷ್ಯ ಉತ್ತುಂಗಕ್ಕೆ ಏರುತ್ತದೆ ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಹೇಳಿದರು.
ಅವರು ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ತಾಲೂಕಿನ ವಿವಿಧ ದಲಿತ ದಂಘಟನೆಗಳು ಹಮ್ಮಿಕೊಂಡ ಅಭಿನಂದಾನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಾಯಂದಿರು ಮಕ್ಕಳಿಗೆ ನೈತಿಕತೆಯನ್ನು ಕಲಿಸದೆ ಹೊದಲ್ಲಿ ಮುಂದೊಂದು ದಿನ ನಮ್ಮ ಮಕ್ಕಳು ನಮ್ಮ ಕೈಗೆ ಸಿಗುವುದಿಲ್ಲ ಸಮಾಜದಲ್ಲಿ ಬದುಕಲು ಯೋಗ್ಯ ಶಿಕ್ಷಣ ಬೇಕು ಅಂತ ಶಿಕ್ಷಣ ನೀಡಲು ಮುಂದಾಗಿ. ಭಾರತದ ಸ್ವಾತಂತ್ರ ಹೋರಾಟದಲ್ಲಿ ಮತ್ತು ಅಭಿವೃದ್ದಿಯಲ್ಲಿ ಡಾ. ಅಂಬೇಡ್ಕರ್‌ ಅವರ ಪಾತ್ರ ಅತ್ಯಂತ ದೊಡ್ಡದಾಗಿದೆ.
ಭಾರತದ ಪ್ರತಿಯೋಬ್ಬ ಪ್ರಜೆಗೂ ಮತದಾನದ ಹಕ್ಕನ್ನು ನೀಡಬೇಕು ಎಂದು ಮೊದಲು ಪ್ರತಿಪಾದಿಸಿದವರು ಡಾ. ಅಂಬೇಡ್ಕರ್‌ ಅವರು ಅವರ ಕಾರ್ಯದ ಶ್ರಮದಿಂದ ಇಂದು ನಾವೇಲ್ಲ ಸ್ವಚ್ಚಂದದ ಬದುಕನ್ನು ಮಾಡುತ್ತಿದ್ದೇವೆ. ತಾಲೂಕಿನ ದಲಿತ ಸಂಘಟನೆಗಳು ನನ್ನ ಚುಣಾವಣೆಯನ್ನು ಅತ್ಯಂತ ಶ್ರದ್ದೆಯಿಂದ ಮಾಡಿ ನನ್ನ ಗೆಲುವಿಗೆ ಕಾರಣರಾಗಿದ್ದಾರೆ ನಾನು ಮತ್ತು ನನ್ನ ಕುಟುಂಬ ಯಾವಾಗಲೂ ಅವರಿಗೆ ಋಣಿಯಾಗಿರುತ್ತೇನೆ. ದಲಿತ ಸಮೂದಾಯಕ್ಕೆ ಸರ್ಕಾರದಿಂದ ಸಿಗುವಂತ ಸೌಲಭ್ಯಗಳನ್ನು ಮನೆ ಬಾಗಿಲಿಗೆ ನೀಡುವ ಕ್ರಮ ಕೈಗೊಳ್ಳುತ್ತೇನೆ. ಪಟ್ಟಣದಲ್ಲಿ ನಿರ್ಮಾಣ ಗೊಳ್ಳಲ್ಲಿರುವ ಭಾರತದಲ್ಲಿಯೆ ಅತಿ ಎತ್ತರವಾದ 125 ಅಡಿಯ ಭಗವಾನ ಬುದ್ದರ ಮೂರ್ತಿ ಹಾಗೂ ಬುದ್ದ ವಿಹಾರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಅನ್ನ ಅನುದಾನ ಮತ್ತು ಸರ್ಕಾರದ ನೇಕ ಯೋಜನೆಗಳನ್ನು ಬಳಸಿಕೋಳ್ಳಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರ ಈ ಸಂಧರ್ಭದಲ್ಲಿ ಸಿಮ್ಲಾದಲ್ಲಿ ಇತ್ತಿಚಿಗೆ ಗುಡ್ಡಗಾಡು ಪ್ರದೇಶದಲ್ಲಿ ಸುಮಾರು 50 ಕೀಮಿ ಮ್ಯಾರಾಥನ್‌ ಓಟದಲ್ಲಿ ಭಾಗವಹಿಸಿದ ಸಿಪಿಆಯ್‌ ಮಹಾಂತೇಶ ದ್ಯಾಮಣ್ಣವರ ಅವರನ್ನು ಸನ್ಮಾನಿಸಿದರು.
ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ವಾಯ್‌.ಸಿ.ಮಯೂರ, ತಾಲೂಕಾ ಸಂಚಾಲಕ ಚಂದ್ರಕಾಂತ ಸಿಂಗೆ ಹಾಗೂ ಇತರರು ಮಾತನಾಡಿ, ಈ ಬಾರಿ ದಲಿತರೆಲ್ಲರೂ ಒಗ್ಗೂಡಿ ಮನಗೂಳಿ ಅವರನ್ನು ಗೇಲ್ಲಿಸಲೆ ಬೇಕು ಎಂದು ಪಣ ತೊಟ್ಟು ಹೊರಾಡಿದ್ದೇವೆ. ಪ್ರತಿ ಗ್ರಾಮಗಳಲ್ಲಿ ದಲಿತ ಕುಟುಂಬಗಳಿಗೆ ಬೇರೆ ಪಕ್ಷಸವರು ವಿವಿಧ ಆಮಿಷ ತೋರಿಸಿದರು ಅದನ್ನು ಅಲ್ಲಗಳೆದು ಜೆಡಿಎಸ್‌ ಗೆ ಮತ ನೀಡಿದ್ದಾರೆ ಎಂದರು.
ಸಾನಿಧ್ಯವಹಿಸಿದ ಆಸಂಗಿಹಾಳದ ಶ್ರೀ ಶಂಕರಾನಂದ ಸ್ವಾಮಿಗಳು, ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ ಸ್ವಾಮಿಗಳು, ಸದಾಶಿವ ಹೊಸಮನಿ, ಪರುಶುರಾಮ ಕಾಂಬಳೆ, ಧರ್ಮರಾಜ ಯಂಟಮಾನ, ಯಮನಪ್ಪ ಹೊಸಮನಿ, ಗಾಲಿಬ ಯಂಟಮಾನ, ಸಂತೋಶ ಮಣಗಿರಿ, ಶರಣು ಸಿಂಧೆ. ಸುರೇಶ ಮ್ಯಾಗೇರಿ, ಸಂತೋಷ ಕಾಂಬಳೆ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಎಚ್‌.ಎ.ತಳ್ಳೊಳ್ಳಿ, ಲಕ್ಷ್ಮಣ ಬನ್ನೇಟ್ಟಿ, ಅಶೋಕ ಬಿಜಾಪೂರ, ಮಲ್ಲು ಕೂಚಬಾಳ, ರವಿ ಆಲಹಳ್ಳಿ, ಭೀಮಣ್ಣ ಕಾಂಬಳೆ, ಮಲ್ಲು ಬಗಲೂರ, ಜೈಭೀಮ ತಳಕೇರಿ, ಬುದ್ದು ಸುಲ್ಪಿ, ಶರಣು ಚಲವಾದಿ, ಕಾಜು ನಾಗಣಸೂರ, ಜೈಭೀಮ ನಾಯ್ಕೋಡಿ, ರವಿ ಹೋಳಿ, ರಾಘು ಜಾಬಣ್ಣವರ, ಪ್ರವೀಣ ಆಲಹಳ್ಳಿ, ಬಾಲು ಕೂಚಬಾಳ, ಕಾಜು ಮಣೂರ ಸೇರಿದಂತೆ ಇತರರು ಇದ್ದರು.

loading...