ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ಖೊಜಾ

0
27
loading...

ಕನ್ನಡಮ್ಮ ಸುದ್ದಿ-ಗೋಕಾಕ: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಅವರನ್ನು ಪ್ರತಿಭಾವಂತರನ್ನಾಗಿ ಮಾಡುವಂತೆ ಇಲ್ಲಿಯ ತಂಜುಮನ ಶಿಕ್ಷಣ ಸಂಸ್ಥೆಯ ಚೇರಮನ್ನ ಮೋಸಿನ್‌ ಖೋಜಾ ಹೇಳಿದರು.
ಗುರುವಾರದಂದು ನಗರದ ಕ್ರೇಸೆಂಟ್‌ ಸ್ಕೂಲ್‌ನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮತ್ತು ಸಮೂಹ ಸಂಪನ್ಮೂಲ ಕೇಮದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 2018-19 ಕ್ಲಸ್ಟರ್‌ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳಲ್ಲಿರುವ ಪ್ರತಿಭೆಗಳು ಪ್ರೋತ್ಸಾಹಿಸಿ ಅವರನ್ನು ಪ್ರತಿಭಾವಂತರನ್ನಾಗಿ ಮಾಡಲು ಪಾಲಕರು, ಶಿಕ್ಷಕರು ಶ್ರಮಿಸಬೇಕು. ಸರಕಾರವು ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ಶ್ಲಾಘನೀಯ. ಮಕ್ಕಳು ಇದರ ಸದುಪಯೋಗದಿಂದ ಪ್ರತಿಭಾನ್ವಿತರಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕೀರ್ತಿವಂತರಾಗಿರೆಂದು ಹಾರೈಸಿದರು.
ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ ಉದ್ಘಾಟಿಸಿದರು. ವೇದಿಕೆಯ ಮೇಲೆ ನಗರಸಭೆ ಸದಸ್ಯ ಪರಶುರಾಮ ಭಗತ, ಕೆ ಎಂ ಗೋಕಾಕ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ ಎಸ್‌ ಕುಲಕರ್ಣಿ, ಕ್ರೇಸೆಂಟ್‌ ಸ್ಕೂಲನ ಗೌರವಾಧ್ಯಕ್ಷ ಅಬ್ಬಾಸ ದೇಸಾಯಿ, ಮಲ್ಲಿಕ ಪೈಲವಾನ, ಶಿಕ್ಷಣ ಸಂಸ್ಥೆಗಳ ಸಂಘದ ಪದಾಧಿಕಾರಿಗಳಾದ ಎಸ್‌ ಎಸ್‌ ನೇಗಳಿ, ಎಸ್‌ ಎಸ್‌ ದೇಶಪಾಂಡೆ, ಎಂ ಜೆ ಮುಲ್ಲಾ, ಮುಖ್ಯೋಪಾಧ್ಯಾಯ ಪಿ ಜಿ ಹತಪಾಕಿ ಸೇರಿದಂತೆ ಇತರರು ಇದ್ದರು. ಶಿಕ್ಷಣ ಇಲಾಖೆಯ ಬಿ ಎನ್‌ ಸಿಂಗಾಡಿ ಸ್ವಾಗತಿಸಿದರು. ಶಿಕ್ಷಕಿ ಶಾಂತಾ ಗೋವಿನಕೊಪ್ಪ ನಿರೂಪಿಸಿ, ವಂದಿಸಿದರು.

loading...